ಕಲಬುರಗಿ ಪಾಲಿಕೆ: ಮುಳುಗುವ ಹಡಗಿನ ಜತೆ ಏಕೆ ಬರುತ್ತೀರಿ? ಬಿಜೆಪಿಗೆ ರೇವಣ್ಣ ಟಾಂಗ್

By Suvarna NewsFirst Published Sep 8, 2021, 10:36 PM IST
Highlights

* ಕಲಬುರಗಿ ಮಹಾನಗರ ಪಾಲಿಕೆ ಅತಂತ್ರ
* ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ತಂತ್ರ
* ಇದಕ್ಕೆ ಟಾಂಗ್ ಕೊಟ್ಟ ಜೆಡಿಎಸ್ ನಾಯಕ ರೇವಣ್ಣ

ಹಾಸನ, (ಸೆ.08): ಕಲಬುರಗಿ ಮಹಾನಗರ ಪಾಲಿಕೆ ಫಲಿತಾಂಶ ಅತಂತ್ರವಾಗಿದೆ. ಜೆಡಿಎಸ್‌ ಜೊತೆ ಮೈತ್ರಿಯೊಂದಿಗೆ ಮೇಯರ್ ಆಗಲು ಕಾಂಗ್ರೆಸ್ ಹಾಗೂ ಬಿಜೆಪಿ ಕಸರತ್ತು ನಡೆಸಿವೆ. 

ಅದರಲ್ಲೂ ಬೊಮ್ಮಾಯಿ, ಕುಮಾರಸ್ವಾಮಿ ಜೊತೆ ಚರ್ಚಿಸಿದ್ದು, ಬಹುತೇಕ  ಜೆಡಿಎಸ್, ಬಿಜೆಪಿಗೆ ಬೆಂಬಲಿಸುವ ಎಲ್ಲಾ ಸಾಧ್ಯತೆಗಳಿವೆ. ಇದರ ಮಧ್ಯೆ ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ಜೆಡಿಎಸ್ ಬಗ್ಗೆ ಅರುಣ್‌ಗೇನು ಗೊತ್ತು?: ಎಚ್‌ಡಿಕೆ ಆಕ್ರೋಶ

ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರವಾಗಿ ಹಾಸನದಲ್ಲಿ ಇಂದು (ಸೆ.08) ಪ್ರತಿಕ್ರಿಯಿಸಿರು ರೇವಣ್ಣ, ಜೆಡಿಎಸ್ ಪಕ್ಷ ಮುಳುಗುತ್ತಿರುವ ಹಡಗು ಎಂದು ಹೇಳ್ತೀರಿ. ಅಂಥ ಪಕ್ಷದ ಜತೆ ಮೈತ್ರಿಗೆ ಬಂದು ಕುತ್ತು ತಂದುಕೊಳ್ಳಬೇಡಿ. ನಮ್ಮ ಜತೆ ಸೇರಿ ನಿಮ್ಮ ಸ್ಥಾನಕ್ಕೆ ಕುತ್ತು ತಂದುಕೊಳ್ಳಬೇಡಿ ಎಂದು ವ್ಯಂಗ್ಯವಾಡಿದ್ದಾರೆ. 

ರಾಜ್ಯ ಬಿಜೆಪಿ ಉಸ್ತುವಾರಿ (ಅರುಣ್ ಸಿಂಗ್) ಜೆಡಿಎಸ್ ಮುಳುಗುವ ಹಡಗು ಅಂತಾರೆ. ಸಿಎಂ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ತೀವಿ ಅಂತಾರೆ. ಏಕೆ ಮುಳುಗುವ ಹಡಗಿನ ಜತೆ ಬರುತ್ತೀರಿ ಎಂದು ಪರೋಕ್ಷವಾಗಿ ಅರುಣ್ ಸಿಂಗ್‌ ಟಾಂಗ್ ಕೊಟ್ಟರು.

ಮುಳುಗುವ ಹಡಗನ್ನು ತೇಲಿಸುವುದು ಹೇಗೆಂದು ಗೊತ್ತಿದೆ. ಹಡಗು ಮುಳುಗದಂತೆ ನೋಡಿಕೊಳ್ಳಲು ಮಷೀನ್‌ಗಳು ಇವೆ. ಮುಂದಿನ ಚುನಾವಣೆಗೆ ನೀವು ಮುಳುಗದಂತೆ ನೋಡಿಕೊಳ್ಳಿ. ನಾವು ಮುಳುಗುತೀವೋ, ತೇಲುತ್ತೇವೋ ನೀವು ಜೋಪಾನ ಎಂದರು.

click me!