ಎಚ್ಚರಿಕೆ ಕೊಟ್ಟ ಮರುದಿನವೇ ದಿಢೀರ್ ಸಭೆ ಕರೆದ ದೇವೇಗೌಡ್ರು..!

By Suvarna NewsFirst Published Jul 29, 2020, 2:45 PM IST
Highlights

ಕೊರೋನಾ ಭೀತಿ ನಡುವೆಯೂ ಜೆಡಿಎಸ್, ಎಲ್ಲಾ ಶಾಸಕರು ಮತ್ತು ಸೋತ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರ ಸಭೆ ಕರೆದಿದ್ದು, ಈ ಸಭೆ ಕುತೂಹಲ ಮೂಡಿಸಿದೆ.

ಬೆಂಗಳೂರು, (ಜುಲೈ.29): ಕೊರೋನಾ ಹಿನ್ನೆಲೆಯಲ್ಲಿ ಸೈಲೆಂಟ್ ಆಗಿದ್ದ ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡ ಅವರು ನಿನ್ನೆ (ಮಂಗಳವಾರ) ಅಷ್ಟೇ ಸುದ್ದಿಗೋಷ್ಠಿ ನಡೆಸಿ ಸರ್ಕಾರ ವಿರುದ್ಧ ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಇದೀಗ ಜೆಡಿಎಸ್ ವರಿಷ್ಠಿ ದೇವೇಗೌಡ್ರು, ತಮ್ಮ ಪಕ್ಷದ ನಾಯಕ ಸಭೆ ಕರೆದಿದ್ದಾರೆ. ಆಗಸ್ಟ್ 4 ರಂದು ಜೆಡಿಎಸ್ ಸಭೆ ಕರೆದಿದ್ದು, ಎಲ್ಲಾ ಶಾಸಕರು ಮತ್ತು ಸೋತ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಪಾಲ್ಗೊಳ್ಳುವಂತೆ ಆದೇಶಿಸಿದ್ದಾರೆ.

ದೊಡ್ಡಗೌಡ್ರು ದಿಢೀರ್ ಸುದ್ದಿಗೋಷ್ಠಿ: ಸೈಲೆಂಟ್ ಆಗಿದ್ದ ಎಚ್‌ಡಿಡಿ ಅಖಾಡಕ್ಕೆ...!

ರಾಜ್ಯ ಸರ್ಕಾರದ ಒಂದು ವರ್ಷದ ವೈಫಲ್ಯ, ರೈತ ವಿರೋಧಿ, ಜನ ವಿರೋಧಿ ಕಾಯ್ದೆಗಳನ್ನ ಜಾರಿಗೆ ಖಂಡಿಸಿ ಪ್ರತಿಭಟನೆ ಮಾಡಲು ಜೆಡಿಎಸ್ ನಿರ್ಧಾರ ಮಾಡಿದ್ದು, ಇದಕ್ಕೆ ರೂಪುರೇಷೆ ಹಾಗೂ ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ.

ದೇವೇಗೌಡರ‌ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಇದರಲ್ಲಿ ಮಾಜಿ ಸಿಎಂ ಎಚ್ ಡಿ‌ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಇನ್ನು ಸಭೆಯಲ್ಲಿ ಭಾಗವಹಿಸುವವರು N 95 ಮಾಸ್ಕ್ ಧರಿಸೋದು ಕಡ್ಡಾಯ ಎಂದು ಸೂಚನೆ ನೀಡಲಾಗಿದೆ.

click me!