ಕೆಲವು ಮಂತ್ರಿಗಳ "ತೆರೆದ ದೃಶ್ಯ"ಗಳು ಶೀಘ್ರದಲ್ಲೇ ರಾರಾಜಿಸಲಿವೆ: ಶರವಣ ಬಾಂಬ್

Published : Oct 21, 2021, 09:45 PM IST
ಕೆಲವು ಮಂತ್ರಿಗಳ "ತೆರೆದ ದೃಶ್ಯ"ಗಳು ಶೀಘ್ರದಲ್ಲೇ ರಾರಾಜಿಸಲಿವೆ: ಶರವಣ  ಬಾಂಬ್

ಸಾರಾಂಶ

* ಕುಮಾರಸ್ವಾಮಿ ವಿರುದ್ಧ ಬಿಜೆಪಿ ಟ್ವೀಟ್ ವಾರ್ * ಬಿಜೆಪಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ನಾಯಕ * ಕುಮಾರಸ್ವಾಮಿ ವಿರುದ್ಧ ಬಿಜೆಪಿ ಟ್ವೀಟ್‌ಗೆ ಶರವಣ ತಿರುಗೇಟು

ಬೆಂಗಳೂರು, (ಅ.21):  ಎಚ್‌ಡಿ ಕುಮಾರಸ್ವಾಮಿ (HD Kumaraswamy( ವಿರುದ್ಧ ಕರ್ನಾಟಕ ಬಿಜೆಪಿ (BJP)  ಟ್ವೀಟ್ ವಾರ್ (Twitter War) ಮುಂದುವರೆಸಿದ್ದು, ಇದಕ್ಕೆ ಜೆಡಿಎಸ್ ನಾಯಕ ಶರವಣ ತಿರುಗೇಟು ಕೊಟ್ಟಿದ್ದಾರೆ.

ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ (TA Sharavana), ನೀವು ಹೇಗೆ ಹೇಳುತ್ತಾ ಹೋದರೆ.. ಇನ್ನೂ ಕೆಲವು ಮಂತ್ರಿಗಳ" ತೆರೆದ ದೃಶ್ಯ "ಗಳು ಮುಂದೆ ಕಿರುತೆರೆಯಲ್ಲಿ ಶೀಘ್ರದಲ್ಲೇ  ರಾರಾಜಿಸಲಿವೆ. ಆಗ ಬಿಜೆಪಿ ಪಕ್ಷ ಏನು ಹೇಳುತ್ತದೆ ಯೋ ನೋಡೋಣ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಬೈ ಎಲೆಕ್ಷನ್ ಅಖಾಡದಲ್ಲಿ 'ಜನನಾಯಕರ' ಬಾಯಲ್ಲಿ ಹಳಿ ತಪ್ಪಿದ ಮಾತುಗಳು!

ಕೊಚ್ಚೆಯಲ್ಲಿ ಅರಳುತ್ತಿರುವ ನಿಮ್ಮ ರಾಜಕಾರಣ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ.  ಸಾರ್ವಜನಿಕ ಬದುಕಲ್ಲಿ ಇರುವ ಯೋಗ್ಯತೆಯನ್ನು ಕಳೆದು ಕೊಂಡಿದ್ದೀರ. ಪಕ್ಷದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಘನತೆ ತರುವಂಥದ್ದಲ್ಲ ಎಂದು ಬಿಜೆಪಿ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಅವರೇ ಹೇಳಿದ್ದಾರೆ ಎಂದು ಟ್ವೀಟ್ ಬಾಣ ಬಿಟ್ಟಿದ್ದಾರೆ.

ನಮ್ಮ ಜನಪ್ರಿಯ ನಾಯಕರಾದ ಕುಮಾರಸ್ವಾಮಿ ಅವರ ಚಾರಿತ್ರ್ಯ ವಧೆಯನ್ನೆ ದೊಡ್ಡ ಗುರಿಯಾಗಿಸಿಕೊಂಡು ತುಚ್ಛ ಮತ್ತು ನೀಚ ಬುದ್ದಿಯ ಟ್ವೀಟ್ ಮಾಡುತ್ತಿರುವ ಬಿಜೆಪಿ ನಾಯಕರೇ ನಿಮ್ಮ ವಿಕೃತ ಮನಸ್ಸಿಗೆ ಧಿಕ್ಕಾರ.ಚುನಾವಣೆ ಅಖಾಡದಲ್ಲಿ ಶೂನ್ಯ ಸಾಧನೆಯ ಎಂದಿದ್ದಾರೆ.

ಸಾರ್ವಜನಿಕ ಬದುಕಲ್ಲಿ ಇರುವ ಯೋಗ್ಯತೆಯನ್ನು ಕಳೆದು ಕೊಂಡಿದ್ದೀರ. ಪಕ್ಷದ *ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್* ಅವರ ಹೇಳಿಕೆ ಘನತೆ ತರುವಂಥದ್ದಲ್ಲ ಎಂದು ಬಿಜೆಪಿ ನಾಯಕ, *ಮಾಜಿ ಸಿಎಂ ಯಡಿಯೂರಪ್ಪ* ಅವರೇ ಹೇಳಿದ್ದಾರೆ. ನಿಮ್ಮ ಇದಕ್ಕಿಂತ ಪಾಠ ಇನ್ನೇನು ಹೇಳಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್