ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿದ್ದು, ಇದರ ಬೆನ್ನಲ್ಲೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ
ಬೆಂಗಳೂರು (ಅ.05): ಶಿರಾ ಮತ್ತು ಆರ್ ಆರ್ ನಗರ ಎರಡೂ ಕಡೆ ನಾವು ಎರಡು ಅಥವಾ ಮೂರನೇ ಸ್ಥಾನ ಪಡೆಯುತ್ತೇವೆ ಎಂದು ಚುನಾವಣಾ ಫಲಿತಾಂಶಕ್ಕೂ ಮುನ್ನ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸೋಲೊಪ್ಪಿಕೊಂಡಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ನವರು ಚುನಾವಣಾ ಆಯೋಗ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ನಾವು ನಿಗದಿಯಾದಷ್ಟೇ ಖರ್ಚು ಮಾಡಿದ್ದೇವೆ. ಪ್ರಾದೇಶಿಕ ಪಕ್ಷವಾಗಿ ಮನೆಮನೆಗೆ ಹೋಗಿ ಕಾರ್ಯಕರ್ತರ ಮನ ಒಲಿಸಿದ್ದೇವೆ ಎಂದು ಹೇಳಿದ್ದಾರೆ.
ಫಲಿತಾಂಶ ಬಂದ ಬಳಿಕ ಸಿಎಂ ಬದಲಾಗ್ತಾರೆ ಅಂತ ಸಿದ್ದರಾಮಯ್ಯ ಹೇಳ್ತಾರೆ. ವಿಪಕ್ಷ ನಾಯಕರೇ ಬದಲಾಗ್ತಾರೆ ಅಂತಾ ಸಿಎಂ ಹೇಳ್ತಾರೆ.ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ದೂರುತ್ತಿದ್ದಾರೆ ಎಂದು ಎಚ್ ಡಿಕೆ ಹೇಳಿದರು.
ಬಿಜೆಪಿಯೇ 2 ಸೀಟು ಗೆಲ್ಲಲಿದೆ : ಗುಪ್ತಚರ ಇಲಾಖೆಯಿಂದ ಮಾಹಿತಿ ...
ಫಲಿತಾಂಶ ಬಂದ ಬಳಿಕ ಜೆಡಿಎಸ್ ನಲ್ಲಿ ಮಾತ್ರ ಯಾವುದೇ ರೀತಿ ಬದಲಾವಣೆ ಆಗಲ್ಲ. ನಮ್ಮ ಬಳಿ ಅಂತಹ ಪ್ರಭಾವಿ ಸ್ಥಾನಗಳೇನೂ ಇಲ್ಲ. ಆದರೆ ಸಂಘಟನೆಯ ದೃಷ್ಟಿಯಿಂದ ಹಲವು ಪದಾಧಿಕಾರಿಗಳ ನೇಮಕ,ಅಥವಾ ಬದಲಾವಣೆ ಮಾಡ್ತೀವಿ. ಜೆಡಿಎಸ್ ನಲ್ಲೂ ಸಣ್ಣಪುಟ್ಟ ಬದಲಾವಣೆಗಳಿವೆ ಎಂಬ ಸೂಚನೆಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಕೊಟ್ಟಿದ್ದಾರೆ.
ವಿದ್ಯುತ್ ಬಿಲ್ ಏರಿಕೆ ಬಗ್ಗೆ ಪ್ರಸ್ತಾಪ
ರಾಜ್ಯ ಸರ್ಕಾರದಿಂದ ವಿದ್ಯುತ್ ದರ ಏರಿಕೆ ಹಿನ್ನೆಲೆ ದರ ಏರಿಕೆ ನಿರ್ಧಾರವನ್ನು ಮುಂದೂಡುವಂತೆ ಆಗ್ರಹಿಸಿದ್ದು, ಕೊರೋನಾ ಸೋಂಕು ಹಾಗೂ ನೆರೆ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕನಿಷ್ಠ ಒಂದು ವರ್ಷ ವಿದ್ಯುತ್ ದರ ಏರಿಕೆಯ ಬರೆ ಹಾಕಬಾರದು ಕೊರೋನಾ ಸೋಂಕು ತಗುಲಿದ ನಂತರ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಎಲ್ಲಾ ವಲಯಗಳು ನಷ್ಟದ ಸುಳಿಗೆ ಸಿಲುಕಿವೆ. ಜನತೆ ಉದ್ಯೋಗ, ವೇತನ ಇಲ್ಲದೆ ಕಂಗಾಲಾಗಿದ್ದಾರೆ. ವಿದ್ಯುತ್ ದರ ಏರಿಕೆಯನ್ನು ಮುಂದೂಡುವುದು ಒಳಿತು. ಪ್ರತಿ ಯೂನಿಟ್ಗೆ 20 ಪೈಸೆಯಿಂದ 50 ಪೈಸೆ ವರೆಗೆ, ಸರಾಸರಿ 40 ಪೈಸೆ ಹೆಚ್ಚಳ ಮಾಡಿರುವುದು ಜನರಿಗೆ ಮತ್ತಷ್ಟು ಹೊರೆಯಾಗಲಿದೆ. ಒಂದು ವರ್ಷ ಕಾಲ ದರ ಏರಿಕೆ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಮಾಜಿ ಸಿಎಂ ಆಗ್ರಹಿಸಿದ್ದಾರೆ