ಕಾಂಗ್ರೆಸ್​ ಮಾಜಿ ಸಿಎಂ ನಮ್ಮ ಶಾಸಕರನ್ನು ಸಂಪರ್ಕಿಸಿದ್ದಾರೆ: ಎಚ್‌ಡಿಕೆ ಸ್ಫೋಟಕ ಹೇಳಿಕೆ

By Suvarna News  |  First Published Nov 17, 2021, 6:46 PM IST

* ಮಾಜಿ ಸಿಎಂ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ
* ಕಾಂಗ್ರೆಸ್​ ಮಾಜಿ ಸಿಎಂ ನಮ್ಮ ಶಾಸಕರನ್ನು ಸಂಪರ್ಕಿಸಿದ್ದಾರೆ ಎಂದ ಎಚ್‌ಡಿಕೆ
* ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿಕೆ


ಬೆಂಗಳೂರು, (ನ.17): ಕಾಂಗ್ರೆಸ್‌ನ (Congress) ಮಾಜಿ ಮುಖ್ಯಮಂತ್ರಿ ನಮ್ಮ ಶಾಸಕರನ್ನ ಸಂಪರ್ಕಿಸಿದ್ದಾರೆ. 10 ಬಾರಿ ಸಂಪರ್ಕ ಮಾಡಿ ಕಾಂಗ್ರೆಸ್‌ಗೆ ಬರಲು ಹೇಳಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ (Benglauru) ಜೆಪಿ ಭವನದಲ್ಲಿ ಇಂದು (ನ.17) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ನಮ್ಮ ಶಾಸಕರನ್ನ ಸಂಪರ್ಕಿಸಿದ್ದಾರೆ.  ನಮ್ಮ ಶಾಸಕರು ನನಗೆ ಕರೆ ಮಾಡಿ ಎಲ್ಲವನ್ನೂ ತಿಳಿಸಿದ್ದಾರೆ. ಜೆಡಿಎಸ್​ ಮುಗಿದುಹೋಯ್ತು, ಭವಿಷ್ಯ ಇಲ್ಲವೆಂದು ಹೇಳಿದ್ದಾರೆ. ಈ ರೀತಿ ಹೇಳಿ ಜೆಡಿಎಸ್ ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೆಸರು ಹೇಳದೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

'ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ದೇವೇಗೌಡ್ರು ಸಿದ್ಧ'

ಅವರು ಯಾವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲ್ಲ. ನಮ್ಮ ಶಾಸಕರ ಬ್ರೈನ್ ವಾಶ್ ಮಾಡುವ ಕೆಲಸ ಮಾಡ್ತಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ (JDS) ಶಾಸಕರನ್ನ ಸೆಳೆಯುವ ಕೆಲಸ ಆಗುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ. ಹೋಗುವವರು ಎಲ್ಲಿ ಭವಿಷ್ಯವಿದೆ ಅಲ್ಲಿಗೆ ಹೋಗಬಹುದು. ನಮ್ಮಲ್ಲಿ ಬೆಳೆದು ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಬೇಡ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಜಿಲ್ಲಾ ಕೇಂದ್ರಗಳಲ್ಲಿ ಜೆಡಿಎಸ್ ಕಾರ್ಯಕ್ರಮ
ಜನವರಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಜೆಡಿಎಸ್ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ರಾಜ್ಯದ ಪ್ರತಿ ಜಿಲ್ಲೆ, ತಾಲೂಕಿಗೂ ನಾವು ಹೋಗುತ್ತೇವೆ. ಪಂಚರತ್ನ ಯೋಜನೆ ಜೊತೆ ಜನರ ಮುಂದೆ ಹೋಗುತ್ತೇವೆ. ಪಕ್ಷದ ಕಚೇರಿಯಲ್ಲಿ ಹೆಚ್ಚು ಕಾರ್ಯಕ್ರಮ ಇರುವುದಿಲ್ಲ. ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದೆವು. ಹೀಗಾಗಿ ಎಲ್ಲ ಮಾಹಿತಿ ಪಡೆದು ಗೆಲುವಿಗೆ ಪ್ರಯತ್ನಿಸುತ್ತೇವೆ ಎಂದರು.

ಶಾಸಕ ಶಿವಲಿಂಗೇಗೌಡ ವಿರುದ್ಧ ಆಕ್ರೋಶ
ಹಾಸನ-ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿರುದ್ದ ಉಚ್ಚಾಟಿತ ಜೆಡಿಎಸ್ ನಗರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್​ನ ಉಚ್ಛಾಟಿತ ಅರಸೀಕೆರೆ ನಗರಸಭೆ ಸದಸ್ಯ ಸಿಕಂದರ್ ಹಾಸನಲ್ಲಿ ಸುದ್ದಿಗೋಷ್ಟಿ ನಡೆಸಿ ಹೇಳಿದ್ದಾರೆ. ನಾವು ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರು. ಶಿವಲಿಂಗೇಗೌಡರ ವಿರುದ್ದ ಮಾತ್ರ ನಮಗೆ ಅಸಮಾಧಾನವಿದೆ. ಜೆಡಿಎಸ್ ಪಕ್ಷದ ಬಗ್ಗೆ ಬೇರೆ ನಾಯಕರ ಬಗ್ಗೆ ಗೌರವವಿದೆ ಎಂದು ತಿಳಿಸಿದರು.

 ಶಾಸಕ ಶಿವಲಿಂಗೇಗೌಡರು ದೇವೇಗೌಡರ ಬಳಿ ಕ್ಷಮೆಯಾಚಿಸಬೇಕು ಎಂದು ಕೇಳಿದ್ದಾರೆ. ದೇವೇಗೌಡರ ನೋಡಿ ಜನ ಓಟ್ ಹಾಕಲ್ಲ ಎಂದು ಹೇಳಿ ದೇವೇಗೌಡರಿಗೆ ಶಾಸಕರು ಅವಮಾನ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. ನಾವು ಬಿಜೆಪಿ ಏಜೆಂಟರಲ್ಲ. ನಾವೂ ಈಗಲೂ ಜೆಡಿಎಸ್ ಪಕ್ಷದಲ್ಲಿದ್ದೇವೆ. ಶಿವಲಿಂಗೇಗೌಡರ ನಡವಳಿಕೆಯಿಂದ ಬೇಸತ್ತು ನಗರಸಭೆಯಲ್ಲಿ ಪ್ರತ್ಯೇಕ ಆಸನ ಕೇಳಿದ್ದೇವು ಎಂದು ಸ್ಪಷ್ಟಪಡಿಸಿದರು,

ಆರೂ ಸದಸ್ಯರ ಅನರ್ಹತೆಗೊಳಿಸಲು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಜೆಡಿಎಸ್ ಕೇಸ್ ದಾಖಲಿಸಿತ್ತು. ಅರಸೀಕೆರೆ ಕ್ಷೇತ್ರಕ್ಕೆ ರೇವಣ್ಣ, ಪ್ರಜ್ವಲ್ ಬರಲು ಬಿಡುವುದಿಲ್ಲ. ನಾನೇ ಎಲ್ಲಾ ಅನ್ನೋ ಅಹಂ ಶಿವಲಿಂಗೇಗೌಡರದ್ದು ಎಂದು ವಾಗ್ದಾಳಿ ನಡೆಸಿದರು,
 

click me!