* ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ಕೋಲ್ಡ್ ವಾರ್
* ಮುಗಿಲು ಮುಟ್ಟಿದ ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯದ ನಾಯಕರ ಬಣ ರಾಜಕೀಯ..
* ಕೈ ಪಾಳೆಯದಲ್ಲಿ ಶಾಸಕ ಹ್ಯಾರೀಸ್ ವರ್ಸಸ್ ಜಮೀರ್ ಅಹಮದ್..
* ಸಿದ್ದು ಡಿಕೆಶಿ ಬಣದ ಇಬ್ಬರು ಶಾಸಕರ ನಡುವೆ ನಡೆಯುತ್ತಿದೆಯಾ ಆಂತರಿಕ ಸಮರ..?
ಬೆಂಗಳೂರು(ನ.17) ಕಾಂಗ್ರೆಸ್ (Congress) ಮುಸ್ಲಿಂ ನಾಯಕರಲ್ಲಿ ಕೋಲ್ಡ್ ವಾರ್ (Cold War) ಜೋರಾಗಿದೆ ಎನ್ನುವುದು ಸದ್ಯದ (Karnatakam Politics) ಕರ್ನಾಟಕ ರಾಜಕಾರಣದ ಚರ್ಚೆ. ಮುಗಿಲು ಮುಟ್ಟಿದ ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯದ ನಾಯಕರ ಬಣ ರಾಜಕೀಯ ಈಗ ಕಾಂಗ್ರೆಸ್ ನಲ್ಲಿಯೇ ಮಾತಿಗೆ ವೇದಿಕೆ ಮಾಡಿಕೊಟ್ಟಿದೆ.
ಕೈ ಪಾಳೆಯದಲ್ಲಿ ಶಾಸಕ ಹ್ಯಾರೀಸ್ (NA Haris) ವರ್ಸಸ್ ಜಮೀರ್ ಅಹಮದ್ (BZ Zameer Ahmed Khan) ನಡುವೆ ಗೊತ್ತಿಲ್ಲದೆ ಸಮರ ಶುರುವಾಗಿದೆ. ಸಿದ್ದು-ಡಿಕೆಶಿ ಬಣದ ಇಬ್ಬರು ಶಾಸಕರ ನಡುವೆ ನಡೆಯುತ್ತಿದೆಯಾ ಆಂತರಿಕ ಸಮರ? ಎನ್ನುವ ಪ್ರಶ್ನೆ ಕೇಳಿಬಂದಿದೆ. ನೂತನ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಈ ಸುದ್ದಿಗೆ ಪುಷ್ಠಿ ನೀಡಿದೆ. ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಿಂದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ದೂರ ಉಳಿದಿದ್ದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗಾದಿಯಲ್ಲಿ ತಮ್ಮ ಬೆಂಬಲಿಗರನ್ನ ಕುರಿಸಲು ಜಮೀರ್, ಹ್ಯಾರಿಸ್ ನಡುವೆ ಪೈಪೋಟಿ ನಡೆದಿರುವುದು ಗೊತ್ತಿಲ್ಲದ ವಿಚಾರ ಅಲ್ಲ. ಅಂತಿಮವಾಗಿ ಡಿ.ಕೆ.ಶಿ ಹ್ಯಾರೀಸ್ ಮಾತು ಕೇಳಿ ಅಬ್ದುಲ್ ಜಬ್ಬಾರ್ ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂಬ ಕಾರಣಕ್ಕೆ ಜಮೀರ್ ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎನ್ನುವುದು ಮಾಹಿತಿ.
ಕಾಂಗ್ರೆಸ್ ಬಣ ರಾಜಕಾರಣಕ್ಕೆ ಬಿಜೆಪಿ ವ್ಯಾಖ್ಯಾನ
ಜಮೀರ್ ಬರಲೇಬೇಕು ಎಂದು ಕಾರ್ಯಕ್ರಮದಲ್ಲಿ ಕೈ ಕಾರ್ಯಕರ್ತರೇ ಗದ್ದಲ ಎಬ್ಬಿಸಿದ್ದರು. ಸಿದ್ದರಾಮಯ್ಯ ಸೂಚನೆ ನಡುವೆಯೂ ಜಮೀರ್ ಪರ ಘೋಷಣೆ ನಿಂತಿರಲಿಲ್ಲ. ಕಾರ್ಯಕರ್ತರ ವರ್ತನೆಗೆ ಬೇಸರಗೊಂಡ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದರು.
ಈ ನಡುವೆ ಇದೆ ವಿಚಾರಕ್ಕೆ ಕೆಂಡ ಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್(DK Shivakumar), ಗದ್ದಲ ಎಬ್ಬಿಸಿದ ಅಲ್ಪಸಂಖ್ಯಾತ ಕಾರ್ಯಕರ್ತರನ್ನ ದ್ರೋಹಿಗಳು ಎಂದಿದ್ದಾರೆ ಎನ್ನುವ ಗುಲ್ಲು ಎದ್ದಿದೆ.
ಜಮೀರ್ ಪರ ಘೋಷಣೆ ಕೂಗುತ್ತಿದ್ದವರನ್ನು ಡಿಕೆಶಿ ಗದರಿಸಿದ್ದಾರೆ. ಪಕ್ಷ ಪೂಜೆ ಮಾಡಿ.. ವ್ಯಕ್ತಿ ಪೂಜೆ ನಡೆಯಲ್ಲ ಎಂದು ಡಿಕೆಶಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಘಟನೆಯಿಂದ ಡಿಕೆಶಿ, ಸಿದ್ದು ಇಬ್ಬರು ನಾಯಕರು ತೀವ್ರ ಮುಜುಗರಕ್ಕೊಳಗಾಗಬೇಕಾಗಿ ಬಂತು.
ಈ ಘಟನೆ ಹಿಂದೆ ಕೈವಾಡವಿದೆಯಾ ನಲ್ಪಾಡ್ ಹ್ಯಾರಿಸ್ ಗ್ಯಾಂಗ್..? ಕಾರ್ಯಕರ್ತರು ಜಮೀರ್ ಪರ ಘೋಷಣೆ ಕೂಗುತ್ತಿದ್ದರೂ ಇವರು ನಲ್ಪಾಡ್ ಹ್ಯಾರಿಸ್ ಗ್ಯಾಂಗ್ ನವರಾ ಎಂಬ ಚರ್ಚೆ ಕೈ ಪಾರ್ಟಿಯಲ್ಲಿ ನಡೆಯುತ್ತಿದೆ ಜಮೀರ್ ಬೆಂಬಲಿಗರಾಗಿದ್ದರೆ, ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸುತ್ತಿರಲಿಲ್ಲ. ಜಮೀರ್ ವಿರುದ್ಧ ಹೈಕಮಾಂಡ್ ಗೆ ಸಂದೇಶ ಮುಟ್ಟಿಸಲು ಡಿಕೆಶಿ ಬಣದ ನಲ್ಪಾಡ್ ಹ್ಯಾರೀಸ್ ಗ್ಯಾಂಗ್ ನವರೇ ಇದನ್ನ ಮಾಡಿಸಿದ್ದಾರೆಯೇ? ಎನ್ನುವ ಮಾತು ಸಹ ಬಂದಿದೆ.
ಸಿದ್ದರಾಮಯ್ಯ ಭಾಷಣದ ವೇಳೆ ಮುಜುಗರ ತಂದ ಘಟನೆ
ಒಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ(Siddaramaiah) ಮತ್ತು ಡಿಕೆ ಶಿವಕುಮಾರ್ ಭೇಟಿ ನೀಡಿದ ಜಾಗದಲ್ಲೆಲ್ಲ ಮುಂದಿನ ಸಿಎಂ ಘೋಷಣೆ ಕೇಳಿ ಬರುತ್ತಿತ್ತು. ಹಲವಾರು ರಾಜಕಾರಣದ ಚರ್ಚೆಗಳ ನಂತರ ಸಿದ್ದರಾಮಯ್ಯ ದೆಹಲಿಗೆ ಹೋಗಿ ಅಗ್ರ ನಾಯಕರನ್ನು ಭೇಟಿ ಮಾಡಿ ಬಂದಿದ್ದರು. ನಂತರ ಎದುರಾದ ಉಪಚುನಾವಣೆ ಸಂದರ್ಭದಲ್ಲಿ ತಮ್ಮ ತಮ್ಮ ಬೆಂಗಬಲಿರಿಕೆ ಟಿಕೆಟ್ ಕೊಪಡಿಸುವ ಮಾತುಗಳು ಕೇಳಿಬಂದಿದ್ದವು.
ಇನ್ನೊಂದು ಕಡೆ ಕಾಂಗ್ರೆಸ್ ಬಣ ಬಡಿದಾಟಕ್ಕೆ ಬಿಜೆಪಿ(BJP) ಠಕ್ಕರ್ ಕೊಟ್ಟಿದೆ. ಕಾಂಗ್ರೆಸ್ ನ್ನು ಟೀಕೆ ಮಾಡಿರುವ ಬಿಜೆಪಿ, ಸಭೆಯಲ್ಲೇ ಡಿಕೆ, ಡಿಕೆ ಅಂತ ಘೋಷಣೆ ಕೂಗಿದರೆ ಸಿದ್ದರಾಮಯ್ಯ ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಮಾಡಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರೇ ಡಿಕೆ, ಡಿಕೆ ಎಂದು ಘೋಷಣೆ ಕೂಗಿದ್ದರು. ಭಾಷಣ ಮಾಡುತ್ತಿದ್ದ ಜಾಗದಿಂದಲೇ ಸಿದ್ದರಾಮಮಯ್ಯ ಹೊರನಡೆದಿದ್ದರು.