ಕಾಂಗ್ರೆಸ್ಸಿಗರಿಂದ್ಲೇ ಸರ್ಕಾರ ಬೀಳುತ್ತೆ, ಮುಂದೆ ಕುಮಾರಸ್ವಾಮಿ ಸಿಎಂ ಆಗ್ತಾರೆ: ಜಿ.ಟಿ.ದೇವೇಗೌಡ

By Kannadaprabha News  |  First Published Oct 13, 2023, 11:13 AM IST

ಈಗಾಗಲೇ ಬಿ.ಆರ್.ಪಾಟೀಲ, ರಾಜು ಕಾಗೆ, ಕಂಪ್ಲಿ ಗಣೇಶ ಹಾಗೂ ಬಸವರಾಜ ರಾಯರೆಡ್ಡಿ ಸರ್ಕಾರದ ವಿರುದ್ಧವೇ ಮಾತನಾಡಿದ್ದಾರೆ. ಕಂಪ್ಲಿ ಗಣೇಶ ಪ್ರತಿಯೊಂದು ಕಾಮಗಾರಿಗೂ ಮಂತ್ರಿಗಳ ಕಡೆ ಬೊಟ್ಟು ಮಾಡುತ್ತಾರೆ ಹಾಗೂ ರಾಯರೆಡ್ಡಿ ಅಂತೂ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ: ಶಾಸಕ ಜಿ.ಟಿ.ದೇವೇಗೌಡ 


ಹುಬ್ಬಳ್ಳಿ(ಅ.13):  ಅಭಿವೃದ್ಧಿ ಹಾಗೂ ಇನ್ನಿತರ ವಿಚಾರವಾಗಿ ಕಾಂಗ್ರೆಸ್ ನಾಯಕರಲ್ಲೇ ಸಾಕಷ್ಟು ಅಸಮಾಧಾನವಿದೆ. ಕಾಂಗ್ರೆಸ್‌ನವರಿಂದಲೇ ಈ ಸರ್ಕಾರ ಬೀಳುತ್ತದೆ. ಅಲ್ಲದೆ, ಬರುವ ದಿನಗಳಲ್ಲಿ ಕುಮಾರಸ್ವಾಮಿ ನೂರಕ್ಕೆ ನೂರರಷ್ಟು ಮುಖ್ಯಮಂತ್ರಿ ಆಗುತ್ತಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಭವಿಷ್ಯ ನುಡಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿ.ಆರ್.ಪಾಟೀಲ, ರಾಜು ಕಾಗೆ, ಕಂಪ್ಲಿ ಗಣೇಶ ಹಾಗೂ ಬಸವರಾಜ ರಾಯರೆಡ್ಡಿ ಸರ್ಕಾರದ ವಿರುದ್ಧವೇ ಮಾತನಾಡಿದ್ದಾರೆ. ಕಂಪ್ಲಿ ಗಣೇಶ ಪ್ರತಿಯೊಂದು ಕಾಮಗಾರಿಗೂ ಮಂತ್ರಿಗಳ ಕಡೆ ಬೊಟ್ಟು ಮಾಡುತ್ತಾರೆ ಹಾಗೂ ರಾಯರೆಡ್ಡಿ ಅಂತೂ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ ಎಂದರು.

Tap to resize

Latest Videos

ರೈತರ ಅನುದಾನಕ್ಕೆ ಸಿದ್ದರಾಮಯ್ಯ ಕತ್ತರಿ: ಜಿ.ಟಿ.ದೇವೆಗೌಡ ಆರೋಪ

ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ಕೇವಲ ದಕ್ಷಿಣ ಕರ್ನಾಟಕ್ಕಷ್ಟೇ ಸೀಮಿತವಾಗಿದೆ ಎಂದು ಬಿಂಬಿಸಿದ್ದರು. ಆದರೆ ನಾವು ಕಲ್ಯಾಣ ಹಾಗೂ ಕಿತ್ತೂರ ಕರ್ನಾಟಕ ಭಾಗದಲ್ಲಿ ಬಲಿಷ್ಠವಾಗಿದ್ದೇವೆ. ಈ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತೆ ಪುನಶ್ಚೇತನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇನ್ನು, ಲೋಕಸಭಾ ಚುನಾವಣೆ ದೃಷ್ಟಿಯಿಂದ ನಾವು ಮೈತ್ರಿಯಾಗಿದ್ದೇವೆ. ಮೋದಿ ದೇಶವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೆಗೆದು ಕುಮಾರಸ್ವಾಮಿಯನ್ನು ಸಿಎಂ ಮಾಡಬೇಕಿದೆ ಎಂದವರು ತಿಳಿಸಿದರು.

click me!