3 ಸಾವಿರ ಜನಸಂಖ್ಯೆ ಇರುವ ಊರುಗಳಿಗೆ ಸಾರಾಯಿ ಅಂಗಡಿ ಕೊಡ್ತೀನಿ, ಪಾಪ ಅವರೆಲ್ಲ ಸಿಟಿಗೆ ಹೋಗಿ ತರಲು ₹10 ಖರ್ಚು ಮಾಡಬಾರದು. ಮನೆ ಬಾಗಿಲಿಗೆ ಮುಟ್ಟಿಸಿ ಪುಣ್ಯ ಕಟ್ಟಿಕೊಳ್ತಿನಿ ಅಂತ ಹೇಳಿದ ಮಾಜಿ ಸಚಿವ ಗೋವಿಂದ ಕಾರಜೋಳ
ಬಾಗಲಕೋಟೆ(ಅ.13): ಹೇಗೆ ಮನೆ ಮನೆಗೆ ಹಾಲು ಕೊಡುತ್ತಾರೋ ಹಾಗೆಯೇ ಸಾರಾಯಿ ಸಪ್ಲೈ ಮಾಡಲಿ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಗ್ರಾಮೀಣ ಭಾಗದಲ್ಲಿ ಮದ್ಯದಂಗಡಿ ತೆರೆಯುವ ವಿಚಾರ ಪ್ರಸ್ತಾಪಿಸಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾ ಪುರ ವಿರುದ್ಧ ವಾಗ್ದಾಳಿ ನಡೆಸಿದ ಅವರು, 3 ಸಾವಿರ ಜನಸಂಖ್ಯೆ ಇರುವ ಊರುಗಳಿಗೆ ಸಾರಾಯಿ ಅಂಗಡಿ ಕೊಡ್ತೀನಿ, ಪಾಪ ಅವರೆಲ್ಲ ಸಿಟಿಗೆ ಹೋಗಿ ತರಲು ₹10 ಖರ್ಚು ಮಾಡಬಾರದು. ಮನೆ ಬಾಗಿಲಿಗೆ ಮುಟ್ಟಿಸಿ ಪುಣ್ಯ ಕಟ್ಟಿಕೊಳ್ತಿನಿ ಅಂತ ಹೇಳಿದ್ದಾರೆ.
undefined
ವಾರಂಟಿ ಇಲ್ಲದ ಗ್ಯಾರಂಟಿ ನೀಡಿದ ಕಾಂಗ್ರೆಸ್: ಮಾಜಿ ಸಿಎಂ ಬೊಮ್ಮಾಯಿ ಲೇವಡಿ
ಅವರ ಹೆಂಡರು, ಮಕ್ಕಳಿಗೆ ಪುಣ್ಯ ಬರಲಿ ಅಂತ ₹10 ಉಳಿಸುವ ಪ್ರಯತ್ನ ಮಾಡ್ತಿದಾರೆ. ತಿಮ್ಮಾಪುರ ಅವರಿಗೆ ಇದರಿಂದ ಹೆಸರು, ಕೀರ್ತಿ ಎರಡೂ ಬರುತ್ತದೆ. ಅವರ ಹೆಸರು ಇತಿಹಾಸದ ಪುಟದಲ್ಲಿ ಅಜರಾಮರವಾಗಿ ಉಳಿಯಲಿದೆ ಎಂದು ಲೇವಡಿ ಮಾಡಿದ ಅವರು, ಸಚಿವರು ಸಾರಾಯಿ ಅಂಗಡಿ ಓಪನ್ ಮಾಡಿ ಜನರು ದುಡಿಯದಂಗೆ ಮಾಡಿ ಅವರ ಸಂಸಾರ ಹಾಳು ಮಾಡಿ ಖುಷಿ ಪಡುವಲ್ಲಿ ತಲ್ಲೀನರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.