ರಾಮನಗರ (ಸೆ.28): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ (Assembly Election) ಅಧಿಕಾರಕ್ಕೇರುವ ಗುರಿ ಈಡೇರಿಕೆಗಾಗಿ ಹೈಟೆಕ್ ಸ್ಪರ್ಶದೊಂದಿಗೆ ಜೆಡಿಎಸ್ (JDS) ಆರಂಭಿಸಿರುವ 4 ದಿನಗಳ ‘ಜನತಾ ಪರ್ವ -1.0 ಹಾಗೂ ಜೆಡಿಎಸ್ ಮಿಷನ್ -123’ ಕಾರ್ಯಾಗಾರದಲ್ಲಿ ಮೊದಲ ದಿನ ಭಾಗವಹಿಸಿದ್ದ 200 ಪ್ರತಿನಿಧಿಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಗೆಲುವಿನ ಪಾಠ ಮಾಡಿದರು.
ಸುಮಾರು ಒಂದು ತಾಸಿಗೂ ಹೆಚ್ಚು ಕಾಲ 2023ರ ವಿಧಾನಸಭಾ ಚುನಾವಣೆ ಎದುರಿಸುವ ಬಗ್ಗೆ ತಮ್ಮ ಕನಸು, ಪರಿಕಲ್ಪನೆ ಹಂಚಿಕೊಂಡ ಎಚ್‌ಡಿಕೆ, ಜನರನ್ನು ತಲುಪುವ ಬಗೆ, ಸಂಘಟನೆ, ಕಾರ್ಯಕರ್ತರನ್ನು ಒಗ್ಗೂಡಿಸುವುದು, ಕಾಲ ಕಾಲಕ್ಕೆ ಪಕ್ಷ ನೀಡುವ ಸೂಚನೆಗಳನ್ನು ಪಾಲಿಸುವುದು, ಗೆಲುವಿಗಾಗಿ ಮಾಡಬೇಕಾದ ಎಲ್ಲ ಪ್ರಯತ್ನಗಳ ಬಗ್ಗೆ ವಿವರವಾಗಿ ಹೇಳಿದರು.
undefined
2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ: ಸಿದ್ದರಾಮಯ್ಯಗೆ ಎಚ್‌ಡಿಕೆ ಪರೋಕ್ಷ ಚಾಲೆಂಜ್
ಪಕ್ಷವನ್ನು ಸಂಘಟನೆ ಮಾಡುವುದರ ಜತೆಗೆ ಮಹಿಳಾ ಘಟಕ (woman wing), ಯುವ ಘಟಕ, ವಿಧ್ಯಾರ್ಥಿ ಘಟಕವನ್ನು ಬಲಗೊಳಿಸುವ ಬಗ್ಗೆ ಸಲಹೆ ನೀಡಿದರು. ಕಷ್ಟಕಾಲದಲ್ಲಿ ಪಕ್ಷದ ಜೊತೆ ನಿಂತ ಯಾರನ್ನೂ ಕೈ ಬಿಡುವುದಿಲ್ಲ. ಎಲ್ಲರೂ ತಮ್ಮ ಶಕ್ತಿಯನ್ನು ಬಳಸಿ ಸಂಘಟನೆ ಮಾಡಿ ಗೆಲ್ಲಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಪಕ್ಷ ನೀಡಲಿದೆ ಎಂದು ಸ್ಪಷ್ಟವಾಗಿ ಹೇಳಿದರು. ಅಭ್ಯರ್ಥಿ (Candidate) ಆಗಬೇಕೆಂಬ ಹಂಬಲ ಇದ್ದರೆ ಸಾಲದು. ಗೆಲ್ಲಲೇಬೇಕು ಎಂಬ ಛಲವೂ ಇರಬೇಕು. ಸಿಕ್ಕಿದ ಅವಕಾಶವನ್ನು ಕಳೆದುಕೊಳ್ಳುವುದು ಬೇಡ ಎಂದು ಕಿವಿಮಾತು ಹೇಳಿದರು.
ಆಕಾಂಕ್ಷಿಗಳಿಗೆ ಪರೀಕ್ಷೆ: ಮುಂದಿನ ಚುನಾವಣೆಗೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಿಗೆ ಕಠಿಣ ಪರೀಕ್ಷೆ (Examination) ನೀಡಲಾಗಿದೆ. ಅವರಿಗೆ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಈ ಪ್ರಶ್ನೆ ಪತ್ರಿಕೆಯಲ್ಲಿ ಗೆಲುವಿಗಾಗಿ ಆಯ್ಕೆ ಮಾಡಿಕೊಂಡ ಟಾಪ್ 10 ನಾಯಕರ ಹೆಸರು, ತಮ್ಮ ಕ್ಷೇತ್ರದಲ್ಲಿ ಎಷ್ಟುಸದಸ್ಯತ್ವ ನೋಂದಣಿ ಮಾಡಿಸಿದ್ದೀರಿ? ಎಚ್‌ಡಿಕೆ ಅವರಲ್ಲಿ ನಿಮಗೆ ಇಷ್ಟವಾದ ಎರಡು ಗುಣಗಳೇನು? ಎಚ್‌ಡಿಕೆ ಅವರ ಇಷ್ಟವಾಗದ ಎರಡು ಗುಣಗಳು ಯಾವುವು? ನಿಮ್ಮ ಕ್ಷೇತ್ರದ ಜನ ನಿಮ್ಮಲ್ಲಿ ಇಷ್ಟಪಡುವ ಗುಣಗಳೇನು? ಇಷ್ಟಪಡದ ಗುಣಗಳೇನು? ಪ್ರಾದೇಶಿಕ ಪಕ್ಷದ ಆರು ಅನುಕೂಲತೆಗಳನ್ನು ತಿಳಿಸಿ? ತಮ್ಮ ಗೆಲುವಿನ ಎರಡು ಪ್ರಮುಖ ಸೂತ್ರಗಳನ್ನು ತಿಳಿಸಿ? ಹೀಗೆ ಸುಮಾರು 61 ಪ್ರಶ್ನೆಗಳಿರುವ ಪ್ರಶ್ನೆ ಪತ್ರಿಕೆಯನ್ನು ಆಕಾಂಕ್ಷಿತರಿಗೆ ನೀಡಲಾಗಿದ್ದು, ಅವರೆಲ್ಲರೂ ಉತ್ತರ ಬರೆಯಬೇಕಾಗಿದೆ.