30 ಕೋಟಿ ಆಫರ್, 5 ಕೋಟಿ ಅಡ್ವಾನ್ಸ್ ನೀಡಿದ್ದ BJPಯ ಮತ್ತೊಂದು ಆಪರೇಷನ್ ಬಯಲು

By Web DeskFirst Published Feb 10, 2019, 4:37 PM IST
Highlights

ಶತಾಯಗತಾಯವಾಗಿ ಅಧಿಕಾರ ಹಿಡಿಯಲೇಬೇಕೆಂದು ಹರಸಾಹಸ ಮಾಡುತ್ತಿರುವ ರಾಜ್ಯ ಬಿಜೆಪಿಯ ಒಂದೊಂದೇ ಅಸಲಿ ಆಟಗಳು ಬಹಿರಂಗವಾಗುತ್ತಿವೆ. ಆಪರೇಷನ್ ಸಿ.ಡಿ ಬಹಿರಂಗ ಬೆನ್ನಲ್ಲೇ ಜೆಡಿಎಸ್ ಶಾಸಕ ಮತ್ತೊಂದು ಆಪರೇಷನ್ ಬಟಾಬಯಲು ಮಾಡಿದ್ದಾರೆ. 

ಕೋಲಾರ,(ಫೆ.10): ಹೇಗಾದ್ರೂ ಮಾಡಿ ಮೈತ್ರಿಯನ್ನು ಉರುಳಿಸಿ ಅಧಿಕಾರಕ್ಕೇರಲೇಬೇಕೆಂದು ಬಿಜೆಪಿ ಮಾಡುತ್ತಿರುವ ಸರ್ಕಸ್ ಒಂದೊಂದಾಗಿಯೇ ಬಯಲಿಗೆ ಬರುತ್ತಿವೆ.

ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂದು ಮೈತ್ರಿ ನಾಯಕರು ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಆದರೆ ಕಮಲ ಪಾಳಯದ ನಾಯಕರು ನಾವು ಯಾವ ಆಪರೇಷನ್​ ಕಮಲವನ್ನೂ ಮಾಡುತ್ತಿಲ್ಲ, ನಮಗೆ ಅದರ ಅವಶ್ಯಕತೆ ಇಲ್ಲ ಎಂದು ಹೇಳುತ್ತಲೇ ಇದ್ದಾರೆ. 

ದೇವರ ಹೆಸರಲ್ಲಿ ಯಡಿಯೂರಪ್ಪ ದೇವದುರ್ಗ ಭೇಟಿ ರಹಸ್ಯ ಬಯಲು

ಇದರ ಬೆನ್ನಲ್ಲೇ ಗುರುಮಿಠಕಲ್ ಶಾಸಕನ ಪುತ್ರನಿಗೆ ನೀಡಿರುವ ಆಮಿಷ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಅವರು ಸಿ.ಡಿ ಬಿಡುಗಡೆ ಮಾಡಿದ್ದು, ಅದನ್ನು ಸ್ವತಃ ಯಡಿಯೂರಪ್ಪನವರೇ ಒಪ್ಪಿಕೊಂಡಿರುವುದು ಇನ್ನುಳಿದ ಬಿಜೆಪಿ ನಾಯಕರಿಗೆ ಇರಿಸುಮುರಿಸು ಉಂಟಾಗಿದೆ. ಇದೀಗ ಕೋಲಾರ ಜೆಡಿಎಸ್​ ಶಾಸಕ ಹೊಸ ಬಾಂಬ್​ ಸಿಡಿಸಿದ್ದಾರೆ.

K Srinivasa Gowda, JD(S)MLA: BJP's CN Ashwathnarayan, SR Vishwanath&CP Yogeshwara, came to my home, offered Rs 30Cr&gave Rs 5Cr in advance. They wanted me to resign from JD(S). I told them I'm loyal to party&will never do it. I spoke to HD Kumaraswamy&told them to take back money pic.twitter.com/RX5Ri460h9

— ANI (@ANI)

ಬಿಜೆಪಿಯ ಅಶ್ವತ್ಥ್‌ ನಾರಾಯಣ, ವಿಶ್ವನಾಥ್ ಹಾಗು ಯೋಗೀಶ್ವರ್ ನನಗೆ 30 ಕೋಟಿ ಆಮಿಷವೊಡ್ಡಿ,5 ಕೋಟಿ ಅಡ್ವಾನ್ಸ್​ ಕೂಡ ಕೊಟ್ಟಿದ್ದರು ಎಂದು ಹೇಳಿದ್ದಾರೆ. "ನನಗೆ ಬಿಜೆಪಿಯಿಂದ 25 ಕೋಟಿ ರೂ. ಆಫರ್​ ಬಂದಿದ್ದು ನಿಜ. 5 ಕೋಟಿ ಅಡ್ವಾನ್ಸ್​​ ದುಡ್ಡನ್ನು ನನ್ನ ಮನೆಗೆ ತಂದು ಕೊಟ್ಟಿದ್ದರು. ಜೆಡಿಎಸ್​ಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. 

ಆದರೆ 2 ತಿಂಗಳ ಬಳಿಕ ನಾನು ಆ ಹಣವನ್ನು ವಾಪಸ್​ ಮಾಡಿದೆ" ಎಂದು ಹೊಸ ಬಾಂಬ್​ ಸಿಡಿಸಿದ್ದಾರೆ. ಈ ಮೂಲಕ ಬಿಜೆಪಿಯ ಮತ್ತೊಂದು ಬಂಡವಾಳ ಬಯಲಾಗಿದೆ.

click me!