ದಿಲ್ಲಿಯಲ್ಲಿ ಓಕೆ, ಬೆಂಗಳೂರಿಗೆ ಬಂದ ಮೇಲೆ ಸಿಎಂ ತಪ್ಪಿದೆ : ಹೊಸ ಬಾಂಬ್ ಸಿಡಿಸಿದ ಸ್ವಾಮೀಜಿ

By Suvarna NewsFirst Published Aug 1, 2021, 8:45 PM IST
Highlights

* ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಮೃತ್ಯುಂಜಯ ಸ್ವಾಮೀಜಿ
* ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ತಪ್ಪಿಸಿದ್ದಾರೆ
* ದೆಹಲಿಯಲ್ಲಿ ಎಲ್ಲಾ ಓಕೆ ಆಗಿತ್ತು, ಬೆಂಗಳೂರಿಗೆ ಬಂದ ಮೇಲೆ ತಪ್ಪಿದ ಎಂದ ಸ್ವಾಮೀಜಿ

ಬೆಳಗಾವಿ, (ಅ.01): ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಳಗಾವಿಯ ಅಥಣಿಯಲ್ಲಿ ಇಂದು (ಭಾನುವಾರ) ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಪ್ರತಿಕ್ರಿಯಿಸಿರುವ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ನಾಯಕನಿಗೆ ಸಿಎಂ ಸ್ಥಾನ ಸಿಗಬೇಕಿತ್ತು. ನಾವೆಲ್ಲ ಸಂಭ್ರಮಿಸಲು ತಯಾರಾಗಿದ್ವಿ.. ಕೊನೆ ಘಳಿಗೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ತಪ್ಪಿಸಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು.

ಮಾರ್ಚ್‌ನಲ್ಲಿ ​ ಗಡ್ಡಧಾರಿ ವ್ಯಕ್ತಿ ಸಿಎಂ-ಮೈಲಾರಲಿಂಗೇಶ್ವರನ ಭವಿಷ್ಯ: ಯಾರು ಆ ಗಡ್ಡಧಾರಿ?

ದೆಹಲಿಯಲ್ಲಿ ಎಲ್ಲಾ ಓಕೆ ಆಗಿತ್ತು, ಬೆಂಗಳೂರಿಗೆ ಬಂದ ಮೇಲೆ ತಪ್ಪಿದೆ. 2ಎ ಮೀಸಲಾತಿ ನೀಡದವರೇ ಪಂಚಮಸಾಲಿಗಳಿಗೆ ಸಿಎಂ ಸ್ಥಾನ ತಪ್ಪಿಸಿದ್ದಾರೆ. ಅವರು ಯಾರು ಅನ್ನೋದು ಎಲ್ಲ ಪಂಚಮಸಾಲಿ ಸಮುದಾಯಕ್ಕೆ ಗೊತ್ತಿದೆ. ಅವರು ಪ್ರವಾಸ ಬಂದಾಗ ನಮ್ಮ ಸಮುದಾಯ ಪ್ರಶ್ನಿಸುತ್ತೆ  ಎಂದು ಹೆಸರು ಹೇಳದೆ ಪರೋಕ್ಷವಾಗಿ ಬಿಎಸ್ ಯಡಿಯೂರ ವಿರುದ್ಧ ಆರೋಪ ಮಾಡಿದರು.

ಪಂಚಮಸಾಲಿ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಂತ್ರಿ ಸ್ಥಾನಕ್ಕಾಗಿ ಪಂಚಮಸಾಲಿ ಸಮುದಾಯದ ಗೌರವ ಹೋಗಿದೆ. ನಮಗೆ ಈಗ ಸಚಿವ ಸ್ಥಾನ, ನಿಗಮ ಮಂಡಳಿ, ಡಿಸಿಎಂ ಬೇಡ, 2ಎ ಮೀಸಲಾತಿ ಕೊಡಿ. ಮೀಸಲಾತಿ ಕೊಟ್ಟು ಸಮಾಜಕ್ಕಾದ ಅಗೌರವ ಸರಿ ಪಡೆಸಿ ಎಂದು ಆಗ್ರಹಿಸಿದರು.

2ಎ ಮೀಸಲಾತಿ ಹೋರಾಟಕ್ಕೆ ಬಂಬಲ‌ ಕೊಟ್ಟಿದ್ದರಿಂದಲೇ ಬೊಮ್ಮಾಯಿ ಸಿಎಂ ಆಗಿದ್ದಾರೆ. ಈಗ 2ಎ ಮೀಸಲಾತಿ ನೀಡಲಿ. ಸಪ್ಟೆಂಬರ್ ಒಳಗೆ 2ಎ ಮೀಸಲಾತಿ ನೀಡುವ ಭರವಸೆ ಸರ್ಕಾರ ಕೊಟ್ಟಿತ್ತು. ಸಪ್ಟೆಂಬರ್ ಒಳಗೆ 2ಎ ಮೀಸಲಾತಿ ನೀಡದಿದ್ದರೇ ಅಕ್ಟೋಬರ್ 1ರಿಂದ ಮತ್ತೆ ಹೋರಾಟ ಶುರುವಾಗುತ್ತೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ಮಾಡ್ತೇವೆ ಎಂದು ಎಚ್ಚರಿಸಿದರು.

ಇದರ ಜಾಗೃತಿಗಾಗಿ ಆಗಷ್ಟ್ 15 ರಿಂದ ಮಲೆ ಮಹಾದೇಶ್ವರದಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯಿತಿ ಹೆಸರಲ್ಲಿ ಅಭಿಯಾನ ಶುರುವಾಗಲಿದೆ. ಸರ್ಕಾರ ಮನಿಯದಿದ್ದರೇ ಕಳೆದ ಬಾರೀ 10 ಲಕ್ಷ ಜನರನ್ನ ಸೇರಿಸಿದ್ವೀ ಈ ಬಾರೀ 20 ಲಕ್ಷ ಜನರನ್ನ ಸೇರಿಸುತ್ತೇವೆ ಎಂದು ಹೇಳಿದರು.

click me!