ಮಾರ್ಚ್‌ನಲ್ಲಿ ​ ಗಡ್ಡಧಾರಿ ವ್ಯಕ್ತಿ ಸಿಎಂ-ಮೈಲಾರಲಿಂಗೇಶ್ವರನ ಭವಿಷ್ಯ: ಯಾರು ಆ ಗಡ್ಡಧಾರಿ?

By Suvarna NewsFirst Published Aug 1, 2021, 7:57 PM IST
Highlights

* ಆರೇಳು ತಿಂಗಳಲ್ಲಿ ಮತ್ತೋರ್ವ ಮುಖ್ಯಮಂತ್ರಿ 
* ರಾಜ್ಯ ರಾಜಕಾರಣದ ಬಗ್ಗೆ ಮೈಲಾರಲಿಂಗೇಶ್ವರನ ಭವಿಷ್ಯವಾಣಿ 
 * ಗಡ್ಡಧಾರಿ ವ್ಯಕ್ತಿ ಮುಂದಿನ ಮುಖ್ಯಮಂತ್ರಿ ಎಂದು ಭವಿಷ್ಯ

ವಿಜಯನಗರ, (ಆ.01):  ಕೆಲವು ತಿಂಗಳುಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬದಲಾವಣೆಯಾಗೋದು ಖಚಿತ ಎಂದು ರಾಜ್ಯ ರಾಜಕಾರಣದ ಬಗ್ಗೆ ಮೈಲಾರಲಿಂಗೇಶ್ವರನ ಭವಿಷ್ಯವಾಣಿ ನುಡಿದಿರುವ ವೆಂಕಪ್ಪಯ್ಯ ಒಡೆಯರ್ ಭವಿಷ್ಯ ನುಡಿದಿದ್ದಾರೆ.

 ಆರೇಳು ತಿಂಗಳಲ್ಲಿ ಮತ್ತೋರ್ವ ಮುಖ್ಯಮಂತ್ರಿ ಆಗುತ್ತಾರೆ ಎಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಎನ್ನುವರು ಭವಿಷ್ಯ ನುಡಿದಿರುವುದು ಭಾರೀ ಕುತೂಹಲ ಮೂಡಿಸಿದೆ.

 ರಾಜ್ಯ ರಾಜಕಾರಣದ ಬಗ್ಗೆ ಮೈಲಾರಲಿಂಗೇಶ್ವರನ ಭವಿಷ್ಯವಾಣಿ ನುಡಿದಿರುವ ವೆಂಕಪ್ಪಯ್ಯ ಒಡೆಯರ್ ಎಂಬುವವರು ಕೆಲವು ತಿಂಗಳುಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬದಲಾವಣೆಯಾಗೋದು ಖಚಿತ. ಗಡ್ಡಧಾರಿ ವ್ಯಕ್ತಿ ಸಿಎಂ ಆಗಲಿದ್ದಾರೆ ಎಂದು ಸ್ಫೋಟಕ ಭವಿಷ್ಯ ಹೇಳುದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಆತಂಕಕಾರಿ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮಿಜಿ : ಎಚ್ಚರಿಕೆ ಸೂಚನೆ

ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದಾರೆ. ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾರ.. ಅವರು ಕೇವಲ 6 ರಿಂದ 7 ತಿಂಗಳು ಮಾತ್ರ ರಾಜ್ಯಭಾರ ಮಾಡುತ್ತಾರೆ. ಮಾರ್ಚ್ ತಿಂಗಳಲ್ಲಿ ಅದೇ ಪಕ್ಷದ ಗಡ್ಡಧಾರಿ ವ್ಯಕ್ತಿ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಬಿಎಸ್ ಯಡಿಯೂರಪ್ಪನವರ ರಾಜೀನಾಮೆ ನಂತರ ಮುಂದಿನ ಸಿಎಂ ಯಾರು ಎನ್ನುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚನಲ ಮೂಡಿತ್ತು. ಹೈಕಮಾಂಡ್ ಹೊಸ ಮುಖವನ್ನು ತಂದು ಕೂಡಿಸುತ್ತೇ ಎನ್ನಲಾಗಿತ್ತು.

ಅರವಿಂದ್ ಬೆಲ್ಲದ್, ಬಿ.ಎಲ್. ಸಂತೋಷ್, ಪ್ರಲ್ಹಾದ್ ಜೋಶಿ, ಸಿಟಿ ರವಿ, ಮುರುಗೇಶ್ ನಿರಾಣಿ ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿಬಂದಿದ್ದವು. ಕೊನೆಯಲ್ಲಿ ಬಸವರಜ ಬೊಮ್ಮಾಯಿ ಅವರ ಹೆಸರು ತೇಲಿಬಂತು. ಅಂತಿಮವಾಗಿ ಹೈಕಮಾಂಡ್ ಬಿಎಸ್‌ವೈ ಸೂಚನೆ ಮೇರೆಗೆ ಬೊಮ್ಮಾಯಿ ಅವರನ್ನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿತು.

ಯಾರು ಆ ಗಡ್ಡಧಾರಿ?
ಈ ಭವಿಷ್ಯದ ಪ್ರಕಾರ ಬಿಜೆಪಿಯಲ್ಲಿರುವ ಆ ಗಡ್ಡಧಾರಿ ಯಾರು ಎನ್ನುವುದನ್ನು ನೋಡುವುದಾದರೆ, ಸದ್ಯಕ್ಕೆ ಕಾಣಸಿಗುವುದು ಬಿ. ಶ್ರೀರಾಮುಲು ಹಾಗೂ ಸಿಟಿ ರವಿ ಮಾತ್ರ.

ಹೌದು....ಈ ಹಿಂದೆ ಸಿಎಂ ರೇಸ್‌ನಲ್ಲಿದ್ದ ಅರವಿಂದ್ ಬೆಲ್ಲದ್, ಪ್ರಲ್ಹಾದ್ ಜೋಶಿ, ಬಿಎಲ್ ಸಂತೋಷ್ ಆಗಲಿ ಯಾರು ಗಡ್ಡ ಬಿಟ್ಟಿಲ್ಲ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಷ್ಟು ದಿನ ಗಡ್ಡ ಬಿಟ್ಟಿದ್ರೆ, ಈಗ ಅವರು ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಸದ್ಯ ಬಿ. ಶ್ರೀರಾಮುಲು ಹಾಗೂ ಸಿಟಿ ರವಿ ಗಡ್ಡಧಾರಿಗಳಾಗಿದ್ದಾರೆ. ಇವರಲ್ಲಿ ಒಬ್ಬರು ಮುಂದಿ ಸಿಎಂ ಆಗಬಹುದಾ? ಮೈಲಾರಲಿಂಗೇಶ್ವರನ ಭವಿಷ್ಯವಾಣಿ  ನಿಜವಾಗುತ್ತಾ..? ಎನ್ನುವುದನ್ನು ಕಾದುನೋಡಬೇಕಿದೆ.

click me!