ರಾಜ್ಯ ರಾಜಧಾನಿ ಬೆಂಗಳೂರಿನ ಮನೆಯಲ್ಲಿ ಬಳ್ಳಾರಿ ಗಣಿಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿ ಸುದ್ದಿಗೋಷ್ಠಿ ಆರಂಭಿಸಿದ್ದು, ಹೊಸ ಪಕ್ಷವನ್ನು ಸ್ಥಾಪಿಸುವ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ. ಆರಂಭದಲ್ಲಿ ಏನು ಹೇಳಿದ್ದಾರೆ ಇಲ್ಲಿ ನೋಡಿ..
ಬೆಂಗಳೂರು (ಡಿ.25) : ರಾಜ್ಯ ರಾಜಧಾನಿ ಬೆಂಗಳೂರಿನ ಮನೆಯಲ್ಲಿ ಬಳ್ಳಾರಿ ಗಣಿಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿ ಸುದ್ದಿಗೋಷ್ಠಿ ಆರಂಭಿಸಿದ್ದು, ಹೊಸ ಪಕ್ಷವನ್ನು ಸ್ಥಾಪಿಸುವ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ. ಆರಂಭದಲ್ಲಿ ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡುತ್ತಿರುವ ಅವರು ಅಂತಿಮವಾಗಿ ಏನು ಹೇಳಿಕೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಮಾಧ್ಯಮಗಳೊಂದಿಗೆ ಮಾತು ಆರಂಭಿಸಿದ ಜನಾರ್ಧನರೆಡ್ಡಿ ಅವರು, ಇಂದು ಧೀಮಂತ ನಾಯಕ, ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ವಾಜಪೇಯಿ ಜನ್ಮದಿನವಾಗಿದೆ. ಅವರ ಜನ್ಮದಿನ ಅಂಗವಾಗಿ ದೇಶದ ಜನತೆಗೆ ಶುಭಾಶಯ ತಿಳಿಸ್ತೇನೆ. ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಅಣ್ಣ ಬಸವಣ್ಣರ ಕಾಯಕವೇ ಕೈಲಾಸ ಎಂಬಂತೆ 18 ನೇ ವಯಸ್ಸಿನಿಂದಲೇ ಕಾಯಕಲೇ ಕೈಲಾಸ ಎಂದು ನಂಬಿಕೊಂಡು ಬಂದವನು ನಾನು ಎಂದು ಹೇಳಿದರು.
ನಾನು ಸತ್ಯದ ವಿಚಾರ ಹೇಳ್ತೀನಿ. ಮನಃಸಾಕ್ಷಿಯಾಗಿ ಮಾಡುತ್ತೇನೆ. ಇನೋಬಲ್ ಇಂಡಿಯಾ ಅನ್ನೊ ಕಂಪನಿ ಯನ್ನ 27 ವರ್ಷಕ್ಕೆ ಬಳ್ಳಾರಿಯಲ್ಲಿ ಸ್ಥಾಪನೆ ಮಾಡಿದೆ. ಮುಂಬಯಿ ಸೇರಿದಂತೆ ಅನೇಕ ರಾಜ್ಯದಲ್ಲಿ ಕಂಪನಿ ಇತ್ತು. ಮೂರು ರಾಜ್ಯಗಳಲ್ಲಿ ನೂರಾರು ಶಾಖೆ ಪ್ರಾರಂಭ ಮಾಡಿದೆ. ಬಳಿಕ ಮೈನಿಂಗ್ ಕಂಪನಿ ಸ್ಥಾಪನೆ ಮಾಡಿದೆ. ದೇವರು ಉತ್ತಮವಾಗಿ ಲಾಭ ಕೊಟ್ಟ. ಬಳಿಕ ಇನೋಬಲ್ ಇಂಡಿಯಾ ಕಂಪನಿಯನ್ನ RBI ಗೆ ಮಾಹಿತಿ ನೀಡಿ ಕ್ಲೋಸ್ ಮಾಡಿದೆ.
ನನ್ನ ಜತೆ ಯಾರ‍್ಯಾರು ಬರ್ತಾರೆ ಅಂತ ಡಿ.25ಕ್ಕೆ ನೋಡಿ: ಜನಾರ್ದನ ರೆಡ್ಡಿ
ಶ್ರೀರಾಮುಲು ನನ್ನ ಸ್ನೇಹ ಪ್ರಾರಂಭ ಆಯ್ತು. ಚಿಕ್ಕನಿಂದಲೂ ನಮ್ಮದು ಮುಖ ಪರಿಚಯ. ರಾಮುಲು 17 ವರ್ಷ ನನಗೆ 21 ವರ್ಷ. ರಾಮುಲು ಸೋದರ ಮಾವ ಸಾರ್ವಜನಿಕ ಜೀವನದಲ್ಲಿ ಇದ್ದರು. ರಾಜೀವ್ ಗಾಂಧಿಯವರು ಅವರ ಮಾವರನ್ನ ಕರೆದು ಸನ್ಮಾನ ಮಾಡಿದ್ದರು. ಬಳಿಕ ಶ್ರೀರಾಮುಲು ಸೋದರ ಮಾವರನ್ನ ರಾಜಕೀಯ ಶತ್ರುಗಳು ಕೊಲ್ಲುತ್ತಾರೆ. ಬಳಿಕ ಶ್ರೀರಾಮುಲು ಕಣ್ಣು ಶತ್ರುಗಳ ಮೇಲೆ ಇತ್ತು. ಶ್ರೀರಾಮಲು ನನ್ನ ಆಶ್ರಯಕ್ಕೆ ಬಂದು, ನನ್ನ ಕಂಪನಿಗೆ ನಮ್ಮ ಸ್ನೇಹ ಪ್ರಾರಂಭ ಆಯ್ತು. ಬಳಿಕ ನಗರ ಸಭೆ ಸದಸ್ಯರಾಗಿ ಆಯ್ಕೆ ಆದರು. ಆದಾದ ಬಳಿಕ ಬಿಜೆಪಿ MLA ಆಗಿ 1999 ರಲ್ಲಿ ಚುನಾವಣೆ ಗೆ ನಿಂತಿದ್ದರು. ನಾವೆಲ್ಲರೂ ನಾಮಪತ್ರ ಹಾಕಿದೆವು. ಸಾವಿರಾರು ಜನ ನಾಮಪತ್ರ ಹಾಕಿದ್ವಿ. ಸೋನಿಯಾ ಗಾಂಧಿ ಪಾರ್ಲಿಮೆಂಟ್ ಚುನಾವಣೆಗೆ ನಿಲ್ತಾರೆ ಅಂತ ರಾಮುಲು ಹೇಳಿದರು. ರಾಮುಲು ತುಂಬಾ ಟೆನ್ಶನ್ ನಲ್ಲಿ ಇದ್ದರು. ನಾನು ಆಗ ಧೈರ್ಯ ತುಂಬಿದೆ ನಿಂತಿಕೋ ಅಂತ ಹೇಳಿದ್ದ ಬಗ್ಗೆ ತಿಳಿಸಿದರು.
ಬಳಿಕ ಬಳ್ಳಾರಿಗೆ ಸೋನಿಯಾ ವಿರುದ್ಧ ಸುಷ್ಮಾ ಸ್ವರಾಜ್ ಬರ್ತಾರೆ ಎಂದು ಹೇಳಿದರು. ಸೋನಿಯಾ ಗಾಂಧಿ ನಾಮಪತ್ರ ಹಾಕಿದರು. ಅಮೇಲೆ ಸುಷ್ಮಾ ಸ್ವರಾಜ್ ನಾಮಪತ್ರ ಹಾಕಿದರು. ಸುಷ್ಮಾ ಸ್ವರಾಜ್ ರಾಮುಲು ಕರೆದುಕೊಂಡು ಘಟಾನುಘಟಿ ನಾಯಕರ ಜೊತೆ ನಮ್ಮ ಸಂಸ್ಥೆ ಕಚೇರಿಗೆ ಬಂದರು. ಅವತ್ತು ಸುಷ್ಮಾ ಅವರು ಆಫೀಸ್ ಬಿಟ್ಟು ನನ್ನ ಪರ ಕೆಕಸ ಮಾಡಬೇಕು ಅಂದರು. ಅವರನ್ನ ನೋಡಿ ತಾಯಿ ರೂಪ ಕಂಡೆ. ಪಾದ ಮುಟ್ಟಿ ನಮಸ್ಕಾರ ಮಾಡಿದೆ. ಜನಾರ್ಧನ ನೀನೇ ಮಾಸ್ಟರ್ ಮೈಂಡ್. ನಮ್ಮ ಜೊತೆ ಬಂದು ಕೆಲಸ ಮಾಡು ಅಂದರು. ಆಗ ನಾನು ಮರು ಮಾತು ಆಡದೆ ಒಪ್ಪಿದೆ. ಭಯ ಪಡದೆ ನಾನು ಕೆಲಸ ಮಾಡಿದೆ. ಕೌಂಟಿಂಗ್ ದಿನ ಸುಷ್ಮಾ ಬಳ್ಳಾರಿಗೆ ಬಂದಿದ್ದರು. ನಮ್ಮ ಮನೆಗೆ ಬಂದು, ನಮ್ಮ ಮಕ್ಕಳ ಜೊತೆ ಆಡುತ್ತಾ. ನಮ್ಮ ಜೊತೆ ಇದ್ದರು.
ದೈವತ್ವದ ಮಾದರಿಯ ತಾಯಿ:
ನಮ್ಮ ಮನೆಯಲ್ಲಿದ್ದ ಸುಷ್ಮಾ ಸ್ವರಾಜ್ ಅವರು ದೈವತ್ವ ದ ಮಾದರಿ ಇರೋ ತಾಯಿಯಂತೆ ನಡೆದುಕೊಂಡರು. ಸುಷ್ಮಾ 50 ಸಾವಿರ ಮತದಿಂದ ಸೋತ್ರು. ಶ್ರೀರಾಮುಲು ಕಡಿಮೆ ಮತದಲ್ಲಿ ಸೋತಿದ್ದರು. ನಾನು ಮನೆಗೆ ಹೋದಾಗ ನನ್ನ ತಾಯಿ ತುಂಬಾ ನೋವಾಗಿದ್ದರು. ಸುಷ್ಮಾ ಸೋಲು ನಮ್ಮ ಕುಟುಂಬಕ್ಕೆ ದುಃಖವಾಗಿತ್ತು ಎಂದರು.