ಕೊರೋನಾ ಗೆದ್ದ ಶ್ರೀರಾಮುಲು: ಅಸ್ಪತ್ರೆ ಸಿಬ್ಬಂದಿಗೆ ಥ್ಯಾಂಕ್ಸ್ ಹೇಳಿದ್ದು ಜನಾರ್ದನ ರೆಡ್ಡಿ

By Suvarna NewsFirst Published Aug 16, 2020, 9:42 PM IST
Highlights

ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ನಡುವಿನ ಸ್ನೇಹ ಹೇಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಬೆಂಗಳೂರು, (ಆ.16): ಕೊರೋನಾ ವೈರಸ್‌ ತಗುಲಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರು ಗುಣಮುಖರಾಗಿದ್ದಾರೆ. ಆದ್ರೆ ಆಸ್ಪತ್ರೆ ಸಿಬ್ಬಂದಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಥ್ಯಾಂಕ್ಸ್ ಹೇಳಿದ್ದಾರೆ.

ಹೌದು.... ಶ್ರೀರಾಮುಲು ಅವರು ಕೊರೋನಾ ಸೋಂಕಿನಿಂದ ಗುಣಮುರಾಗಿ ಇಂದು (ಭಾನುವಾರ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಚಿಕಿತ್ಸೆ ನೀಡಿರುವ  ಸರ್ಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆ ಸಿಬ್ಬಂದಿಗೆ ಜನಾರ್ದನ ರೆಡ್ಡಿ  ಕೃತಜ್ಞತೆ ಹೇಳಿದ್ದಾರೆ.

ಶ್ರೀರಾಮುಲುಗೆ ಕೊರೋನಾ: ಕುಚುಕು ಗೆಳೆಯನಿಗೆ ರೆಡ್ಡಿ ಹಾರೈಸಿದ್ದು ಹೀಗೆ

ಶ್ರೀರಾಮುಲು ಬಗ್ಗೆ ಫೇಸ್‌ಬುಕ್‌ನಲ್ಲಿ  ಜನಾರ್ದನ ರೆಡ್ಡಿ ಬರೆದುಕೊಂಡಿದ್ದು ಈ ಕೆಳಗಿನಂತಿದೆ ನೋಡಿ.

ಆತ್ಮೀಯರೆ, 
ನಿಮ್ಮೆಲ್ಲರ ಶುಭ ಹಾರೈಕೆಯಿಂದ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ.
ಕೋವಿಡ್ ಸೋಂಕು ದೃಢಪಟ್ಟಾಗ ನಮ್ಮ ಸರ್ಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆಗೆ ದಾಖಲಾದೆ. ಅಲ್ಲಿನ ಅತ್ಯುತ್ತಮ ಚಿಕಿತ್ಸೆಯಿಂದ ಶೀಘ್ರವಾಗಿ ಗುಣಮುಖನಾಗಿದ್ದೇನೆ.

ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗಳ ತಜ್ಞ ವೈದ್ಯರ ತಂಡ ಮತ್ತು ವೈದ್ಯಕೀಯ ಸಿಬ್ಬಂದಿ ನೀಡಿದ ಕಾಳಜಿಪೂರ್ಣ ಚಿಕಿತ್ಸೆ, ಪ್ರೀತಿಪೂರ್ವಕ ಆರೈಕೆಯಿಂದ ಹೃದಯ ತುಂಬಿ ಬಂದಿದೆ, ನನ್ನನ್ನು ಮೂಕನನ್ನಾಗಿಸಿದೆ. ಅವರೆಲ್ಲರಿಗೂ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
ಆಸ್ಪತ್ರೆಯಲ್ಲಿದ್ದಷ್ಟೂ ಕಾಲ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಬಂಧುಗಳು, ಸ್ನೇಹಿತರು, ಹಿತೈಷಿಗಳು ಹಾಗೂ ಅಭಿಮಾನಿಗಳೆಲ್ಲರಿಗೂ ಕೃತಜ್ಞತೆಗಳು.

ಇದೇ ಸಂದರ್ಭದಲ್ಲಿ, ತಮ್ಮ ಸಂಪೂರ್ಣ ಸಹಕಾರ ನೀಡಿದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

click me!