ನನ್ನ ಜತೆಯಲ್ಲಿದ್ದವರ ಕುತಂತ್ರಕ್ಕೆ ನಾನು ಬಲಿಯಾದೆ: ಜನಾರ್ಧನ ರೆಡ್ಡಿ ಅಳಲು

By Kannadaprabha News  |  First Published Apr 3, 2023, 1:00 AM IST

ನನ್ನ ಜೊತೆಯಲ್ಲಿದ್ದ ರಾಜಕಾರಣಿಗಳು ನನ್ನ ಏಳಿಗೆಯನ್ನು ಸಹಿಸಿಕೊಳ್ಳಲಾಗದೆ ಅವರ ಕುತಂತ್ರದ, ಮೋಸದ ಬಲೆಗೆ ನಾನು ಬಲಿಯಾದೆ. ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದರು. 
 


ಚನ್ನರಾಯಪಟ್ಠಣ (ಏ.03): ನನ್ನ ಜೊತೆಯಲ್ಲಿದ್ದ ರಾಜಕಾರಣಿಗಳು ನನ್ನ ಏಳಿಗೆಯನ್ನು ಸಹಿಸಿಕೊಳ್ಳಲಾಗದೆ ಅವರ ಕುತಂತ್ರದ, ಮೋಸದ ಬಲೆಗೆ ನಾನು ಬಲಿಯಾದೆ. ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದರು. ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ಪ್ರಗತಿ ಯಾತ್ರೆ ಹಾಗೂ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2008ರಲ್ಲಿ ದಕ್ಷಿಣ ಭಾರತದಲ್ಲೇ ಬಿಜೆಪಿ ಸರಕಾರವನ್ನು ಮೊದಲ ಬಾರಿಗೆ ಅ​ಧಿಕಾರಕ್ಕೆ ತಂದವನು ನಾನು. ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಯೂ ಮಾಡಿದೆವು. 

ಬಿಜೆಪಿ ಸರ್ಕಾರದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಚಿವನಾದ ಕಾಲಘಟ್ಟದಲ್ಲಿ ಹೆಲಿ ಟೂರಿಸಂ ಯೋಜನೆಯಡಿಯಲ್ಲಿ ಇಡೀ ಕರ್ನಾಟಕವನ್ನು ಮೂರು ದಿನದಲ್ಲಿ ನೋಡುವ ಯೋಜನೆಯನ್ನು ರೂಪಿಸಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದವನು ನಾನು ಎಂದರು. ವಿಮಾನ ನಿಲ್ದಾಣಗಳನ್ನು ಉನ್ನತೀಕರಿಸಿ ಅಂತರಾಷ್ಟಿ್ರೕಯ ಮಟ್ಟದಲ್ಲಿ ಹೆಸರು ಗಳಿಸಿಕೊಟ್ಟಿದ್ದು ನಾನು. ಸಚಿವನಾಗಿ ಸಾಕಷ್ಟುಕೆಲಸವನ್ನೂ ಮಾಡಿದ್ದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ನನ್ನನ್ನು ಹೀಗೆ ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತೇನೆ ಎನ್ನುವ ಭಯ, ಆತಂಕದಲ್ಲಿ ನನ್ನನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ಮಾಡಿದರು. 

Latest Videos

undefined

ಹೆಚ್ಚಿನ ಲೀಡ್‌ ನೀಡಿ ಗೆಲ್ಲಿಸುವ ಹೊಣೆ ನಿಮ್ಮದು: ಬಾಲಚಂದ್ರ ಜಾರಕಿಹೊಳಿ

ಹಿತ ಶತ್ರುಗಳ ಕುತಂತ್ರಕ್ಕೆ ಒಳಗಾಗಿ 12 ವರ್ಷಗಳ ಕಾಲ ನಾನು ರಾಜಕೀಯ ಸನ್ಯಾಸತ್ವವನ್ನು ತೆಗೆದುಕೊಳ್ಳುವಂತ ಪರಿಸ್ಥಿತಿಯೊಂದಿಗೆ ಜೈಲು ವಾಸವನ್ನು ಅನುಭವಿಸಬೇಕಾಯಿತು. ನಾನು ರಾಜಕೀಯವಾಗಿ ಬೆಳೆಯುವುದನ್ನು ಸಹಿಸಲಾರದ ಕುತಂತ್ರಿಗಳು ನನ್ನನ್ನು ತುಳಿಯುವ ತಂತ್ರ ರೂಪಿಸಿದರು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಕುಟುಕಿದರು. ನನ್ನವರು ಎಂದು ನಂಬಿದವರು, ನನ್ನನ್ನು ಬಳ್ಳಾರಿಯಿಂದ ಹೊರಹಾಕುವ ಪ್ರಯತ್ನ ಮಾಡಿದರು. ಆದರೆ ಅವುಗಳನ್ನು ದಾಟಿ ಜನ ಸೇವೆ ಮಾಡಲು ಮುಂದಾಗಿದ್ದೇನೆ. ನನ್ನಿಂದ ಜನರಿಗೆ ಏನಾದರೂ ಸೇವೆ ಮಾಡಬೇಕು ಎಂದುಕೊಡು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹುಟ್ಟಾಕಿದ್ದೇನೆ. 

ಈ ಮೂಲಕ ಜನ ಸೇವೆ ಮಾಡಲು ಸಿದ್ಧನಿದ್ದೇನೆ. ಚುನಾವಣೆಯಲ್ಲಿ 50 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು 30ರಿಂದ 40 ಸೀಟು ಗೆಲ್ಲಲಿದ್ದೇವೆ. ಆಗ ನಮ್ಮ ಪಕ್ಷ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ತಮ್ಮನ್ನು ರಾಜಕೀಯವಾಗಿ ಮುಗಿಸಲು ಬಂದವರನ್ನು ಮುಂದಿನ ದಿನಗಳಲ್ಲಿ ರಾಜಕೀಯವಾಗಿಯೇ ಎದುರಿಸುತ್ತೇನೆ. ಜನರ ಸೇವೆ ಮಾಡಲು ಆದ್ಯತೆ ನೀಡುತ್ತೇನೆ. ನಾನು ಈ ನಿರ್ಧಾರ ತೆಗೆದುಕೊಳ್ಳಲು 12 ವರ್ಷ ಸಮಯ ತೆಗೆದುಕೊಂಡಿದ್ದೇನೆ. ಇಟ್ಟಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ತೆಗೆದುಕೊಳ್ಳಲಾರೆ ಎಂದರು. 

ನಮ್ಮ ಪಕ್ಷದಿಂದ ಹಲವಾರು ಪ್ರಗತಿಪರ ಯೋಜನೆಗಳನ್ನು ರೂಪಿಸಿದ್ದು, ರಾಜ್ಯದಲ್ಲಿ ಕೆಆರ್‌ಪಿಪಿ ಅ​ಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬಸವೇಶ್ವರ ರೈತ ಯೋಜನೆಯಡಿ ಪ್ರತಿಯೊಬ್ಬ ರೈತರಿಗೂ ಪ್ರತಿ ವರ್ಷ 15 ಸಾವಿರ ನೀಡಲಾಗುವುದು. ಅಲ್ಲದೇ ರೈತರಿಗೆ ದಿನದ 9 ಗಂಟೆ ಉಚಿತ ವಿದ್ಯುತ್‌ ನೀಡಲಾಗುವುದು. ರೈತರು ರಾಸಾಯನಿಕ ಗೊಬ್ಬರ, ಔಷಧ, ಬಿತ್ತನೆ ಬೀಜಕ್ಕೆ ಅಲೆಯುವುದನ್ನು ತಪ್ಪಿಸಿ ರೈತರ ಮನೆ ಬಾಗಿಲಿಗೆ ಅದನ್ನು ಪೂರೈಸಲಾಗುವುದು ಎಂದರು. ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿ ಜೆ.ಕೆ.ಪವಿತ್ರ ಮಾತನಾಡಿ, ರಾಷ್ಟಿ್ರೕಯ ಪಕ್ಷಗಳ ಕೀಳು ಮಟ್ಟದ ರಾಜಕಾರಣ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಇಂದು ಮಹಿಳೆಯರು ಹಿಂದಿನ ಕಾಲವನ್ನು ಎದುರು ನೋಡುವಂತಾಗಿದೆ. 

ರೈತರ ಸಾಲಮನ್ನಾ ಮಾಡಿದರಷ್ಟೇ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ರೈತರ ಬಾವಿಗೆ ವಿದ್ಯುತ್‌, ಬಿತ್ತನೆ ಬೀಜ, ರಸಗೊಬ್ಬರ ನೀಡಿದರೆ ಯಾವ ರೈತನು ಬಡವನಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಗಾಲಿ ಜನಾರ್ದನ ರೆಡ್ಡಿಯವರು ಕರ್ನಾಟಕ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪಿಸಿ ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಅವರು ಅನುಷ್ಠಾನಕ್ಕೆ ತರಲು ಮತದಾರ ಬಂಧುಗಳು ಅವಕಾಶ ನೀಡಿ ಎಂದರು. ಕೆಆರ್‌ಪಿಪಿ ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಲೋಹಿತ್‌ ಅಡಗೂರು, ಮುಖಂಡರಾದ ನಾಗೇಶ್‌, ನವೀನ್‌, ಶ್ರೀಕಂಠಣ್ಣ, ರಂಗನಾಥ ಹಾಗೂ ಇನ್ನೂ ಮುಂತಾದವರು ಇದ್ದರು.

ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಪ್ರಚಾರ ಮಾಡಿ: ಮಾಜಿ ಸಚಿವ ಎಚ್‌.ವೈ.ಮೇಟಿ

ಮಹಿಳೆಯರಿಗೆ ಮಣೆ: ಮಹಿಳೆಯರಿಗೆ ಈ ಪಕ್ಷದಲ್ಲಿ ಉತ್ತಮ ಸ್ಥಾನವನ್ನು ನೀಡಬೇಕೆಂಬ ದೃಷ್ಠಿಯಿಂದ ಮಹಿಳೆಯರಿಗೆ ಅಭ್ಯರ್ಥಿ ಸ್ಥಾನ ನೀಡಿದ್ದೇನೆ. ಸಮಾನತೆಯಡಿಯಲ್ಲಿ ಸಾಗುವ ಉದ್ದೇಶವಿದೆ. ರಾಜ್ಯದಲ್ಲಿ ಮೂರು ಜನ ಮಹಿಳೆಯರಿಗೆ ಶಾಸಕರ ಸ್ಥಾನಕ್ಕೆ ಸ್ಪಧಿ​ರ್‍ಸಲು ಅವಕಾಶ ನೀಡುವ ಮೂಲಕ ಮಹಿಳೆಯರಿಗೆ ಗೌರವ ನೀಡಲಾಗುತ್ತಿದೆ. ನಮ್ಮ ಪಕ್ಷದ ಶ್ರವಣಬೆಳಗೊಳ ಕ್ಷೇತ್ರದ ಅಭ್ಯರ್ಥಿ ಜಿ.ಕೆ ಪವಿತ್ರ ಉತ್ತಮ ಕೆಲಸ ಮಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ ಅವರಿಗೆ ನಿಮ್ಮ ಬೆಂಬಲವಿರಲಿ ಎಂದರು.

click me!