ಬೆಂಗಳೂರು ರಾಜಕೀಯ ಸಮೀಕ್ಷೆ, ಪ್ರಥಮ ಬಾರಿ ಮತದಾನ ಮಾಡುವ ಉತ್ಸುಕದಲ್ಲಿ ನಾಗರಿಕರು

Published : Jun 22, 2022, 07:35 PM IST
ಬೆಂಗಳೂರು ರಾಜಕೀಯ ಸಮೀಕ್ಷೆ, ಪ್ರಥಮ ಬಾರಿ ಮತದಾನ ಮಾಡುವ ಉತ್ಸುಕದಲ್ಲಿ ನಾಗರಿಕರು

ಸಾರಾಂಶ

* ಜನಾಗ್ರಹ ಸಂಸ್ಥೆ ನಡೆಸಿದ ಬೆಂಗಳೂರು ರಾಜಕೀಯ ಸಮೀಕ್ಷೆ    * ಶೇ. 86 ರಷ್ಟು ಪ್ರಥಮ ಬಾರಿಯ ಮತದಾರರು ಮತ ಚಲಾಯಿಸಲು ಉತ್ಸುಕರಾಗಿದ್ದಾರೆ * ಬೆಂಗಳೂರಿನ ಎಂಟು ವಲಯದ 27 ವಾರ್ಡ್ ಗಳ 503 ಮಂದಿ ಸರ್ವೇಯಲ್ಲಿ ಭಾಗಿ

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು, (ಜೂ.22):
ಬಿಬಿಎಂಪಿ ಚುನಾವಣೆಯು ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ಜನಾಗ್ರಹ ಸೆಂಟರ್ ಫಾರ್ ಸಿಟಿಜನ್ ಶಿಪ್ ಆಂಡ್ ಡೆಮಾಕ್ರಸಿ ಸಂಸ್ಥೆಯು ಬೆಂಗಳೂರಿನ ರಾಜಕೀಯ ಸಮೀಕ್ಷೆಯನ್ನು ನಡೆಸಿದೆ. ಸ್ಥಳೀಯ ಆಡಳಿತ, ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳು, ಮುಂಬರುವ ಬಿಬಿಎಂಪಿ ಚುನಾವಣೆಗಳಿಂದ ಮತದಾರರ ನಿರೀಕ್ಷೆ, ನಗರ ಬಜೆಟ್ ಮತ್ತು ಖರ್ಚಿನ ಬಗ್ಗೆ ಸಾರ್ವಜನಿಕ ಅರಿವಿನ ಮಟ್ಟ, ನಗರದ ಸಮಸ್ಯೆಗಳು, ಕೌನ್ಸಿಲರ್ ಗಳೊಂದಿಗೆ ನಾಗರಿಕರ ಸಂವಹನ ಹಾಗೂ ನಗರ ಆಡಳಿತ ಮತ್ತು ರಾಜಕೀಯದ ಬಗ್ಗೆ ಮೂಲಭೂತ ಜ್ಞಾನದ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. 

ಬೆಂಗಳೂರಿನ ಮತದಾರರಿಗೆ ಪಾದಚಾರಿ ರಸ್ತೆಗಳು, ವಾಹನ ದಟ್ಟಣೆ, ಮತ್ತು ನೀರಿನ ಸೌಲಭ್ಯ ಮುಖ್ಯ ಸಮಸ್ಯೆಗಳಾಗಿವೆ ಎಂಬುದು ಸರ್ವೇ ಇಂದ ಬಯಲಾಗಿದೆ. ಈ ಸಮೀಕ್ಷೆಯಲ್ಲಿ, ಬೆಂಗಳೂರಿನ ಎಂಟು ವಲಯಗಳಲ್ಲಿ ಇರುವ 27 ವಾರ್ಡ್ ಗಳ 503 ನಾಗರಿಕರು ಭಾಗವಹಿಸಿದ್ದಾರೆ. 16ನೇ ಡಿಸೆಂಬರ್ 2021 ರಿಂದ 2ನೇ ಜನವರಿ 2022ರ ವರೆಗೆ ನಡೆಸಲಾದ ಈ ಸಮೀಕ್ಷೆಯಲ್ಲಿ ವಿವಿಧ ವಯೋಮಿತಿ ಮತ್ತು ಆರ್ಥಿಕ ಹಾಗು ಸಾಮಾಜಿಕ ಹಿನ್ನಲೆಗೆ ಸೇರಿದ ವ್ಯಕ್ತಿಗಳು ಭಾಗವಹಿಸಿದ್ದಾರೆ. 

BBMP ಚುನಾವಣೆ ಮೀಸಲಾತಿಗೆ ರಾಜ್ಯಪಾಲರ ಅನುಮೋದನೆ

ಸರ್ವೇ ಪ್ರಕಾರ ಬೆಂಗಳೂರಿನಲ್ಲಿರುವ ಶೇ. 86 ರಷ್ಟು ಪ್ರಥಮ ಬಾರಿಯ ಮತದಾರರು ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲು ಕಾತರರಾಗಿದ್ದಾರೆ. ಅವರೆಲ್ಲರ ಮುಖ್ಯ ಕಾಳಜಿಯು ಹವಾಮಾನ ಬದಲಾವಣೆಯ ನಿಯಂತ್ರಣವಾಗಿದ್ದು,  ಶೇ. 88 ರಷ್ಟು ಪ್ರಥಮ ಮತದಾರರ ಪ್ರಕಾರ ಪ್ರಬಲ ಸ್ಥಳೀಯ ಆಡಳಿತ ಮತ್ತು ಬಲಿಷ್ಠ ಬಿಬಿಎಂಪಿಯ ಅಗತ್ಯತೆ ಮುಖ್ಯ ಅಂಶಗಳಾಗಿವೆ. 

ಸರ್ವೇ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಜನಾಗ್ರಹ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ ಅವರ ಪ್ರಕಾರ, "ಬೆಂಗಳೂರಿನ ಬಹುತೇಕ ಮತದಾರರು ಬಿಬಿಎಂಪಿ ಚುನಾವಣೆಗಾಗಿ ಕಾಯುತ್ತಿದ್ದಾರೆ. ನಾವು ಬಿಬಿಎಂಪಿಯ ಬಗ್ಗೆ ಜನರಿಗೆ, ಅದರಲ್ಲೂ ಪ್ರಥಮ ಬಾರಿಯ ಮತದಾರರಿಗೆ, ಎಷ್ಟು ಅರಿವಿದೆ ಎಂದು ತಿಳಿಯಲು ಸಮೀಕ್ಷೆ ನಡೆಸಿದ್ದೇವೆ. ವರದಿಯ ಪ್ರಕಾರ ಬಿಬಿಎಂಪಿ, ವಾರ್ಡ್ ಕಾರ್ಪೊರೇಟರ್ಗಳು, ವಾರ್ಡ್ ಸಮಿತಿಗಳು ಇತ್ಯಾದಿಗಳ ಪಾತ್ರವನ್ನು ಕೆಲವೇ ಕೆಲವರು ಅರ್ಥೈಸಿಕೊಂಡಿದ್ದಾರೆ. ಆದರೆ, ಅವರೆಲ್ಲರ ಪ್ರಕಾರ ಬೆಂಗಳೂರಿಗರನ್ನು ಕಾಡುವ ಸಮಸ್ಯೆಯ ಆಧಾರದ ಮೇಲೆ ಸ್ಥಳೀಯ ಚುನಾವಣೆಯನ್ನು ನಡೆಸಬೇಕು. ನಮ್ಮ ನಗರವನ್ನು ಅಭಿವೃದ್ಧಿಪಡಿಸಲು ನಮ್ಮ ಸ್ಥಳೀಯ ಆಡಳಿತಾಂಗವನ್ನು ಬಲಪಡಿಸಬೇಕಾಗಿದೆ ಎಂದರು.

ಸಮೀಕ್ಷೆಯ ಕೆಲವು ಮುಖ್ಯಾಂಶಗಳು
* ಬೆಂಗಳೂರಿನ ಶೇ. 83ರಷ್ಟು ಮತದಾರರ ಪ್ರಕಾರ ಬಿಬಿಎಂಪಿ ಚುನಾವಣೆಯು ನಗರವು ಎದುರಿಸುತ್ತಿರುವ ಸಮಸ್ಯೆಗಳ ಆಧಾರದ ಮೇಲೆ ನಡೆಯಬೇಕು
* ಶೇ. 17ರಷ್ಟು ನಾಗರಿಕರಿಗೆ ಮಾತ್ರ ಮಾಜಿ ಮೇಯರ್ ಹೆಸರು ತಿಳಿದಿದೆ. ಇದಕ್ಕೆ ಹೋಲಿಸಿದ್ದಲ್ಲಿ ಶೇ. 97ರಷ್ಟು ಮಂದಿಗೆ ಪ್ರಧಾನ ಮಂತ್ರಿಯ ಹೆಸರು ತಿಳಿದಿದ್ದು, ಶೇ.  83ರಷ್ಟು ಮಂದಿಗೆ ರಾಜ್ಯದ ಮುಖ್ಯಮಂತ್ರಿಯ ಹೆಸರು ತಿಳಿದಿದೆ

* ಶೇ. 88ರಷ್ಟು ಮಂದಿಯು ತಮ್ಮ ವಾರ್ಡ್ ಕೌನ್ಸಿಲರ್ ಗಳನ್ನು ಈ ವರೆಗೆ ಭೇಟಿಯಾಗಿಲ್ಲ.
*  ಶೇ. 87 ರಷ್ಟು ಜನರಿಗೆ ವಾರ್ಡ್ ಸಮಿತಿಗಳ ಬಗ್ಗೆ ತಿಳಿದಿಲ್ಲ.
*  ಶೇ. 95ರಷ್ಟು ಮಂದಿ ಎಂದೂ ವಾರ್ಡ್ ಸಮಿತಿ ಸಭೆಗೆ ಹೋಗಿಲ್ಲ
*  ಶೇ. 22ರಷ್ಟು ಮಂದಿ  ನೇರವಾಗಿ ಎಂಎಲ್ ಎ ಬಳಿ ತೆರಳಿ ತಮ್ಮ ತೊಂದರೆಗಳನ್ನು ಹಂಚಿಕೊಂಡಿದ್ದಾರೆ.‌

* ಕೇವಲ ಶೇ.‌ 12 ರಷ್ಟು ಜನ ಮಾತ್ರ ತಮ್ಮ ಸ್ಥಳೀಯ ಕೌನ್ಸಿಲರ್ ಗಳನ್ನು ಭೇಟಿಯಾಗಿದ್ದಾರೆ. 
* ಶೇ. 94ರಷ್ಟು ಜನರಿಗೆ  2021-22 ಆರ್ಥಿಕ ಸಾಲಿನಲ್ಲಿ ಬಿಬಿಎಂಪಿ ವಾರ್ಡ್ ಗಳಿಗೆ ನೀಡಿದ 60 ಲಕ್ಷ ರೂಪಾಯಿಗಳ ಬಗ್ಗೆ ತಿಳಿದಿಲ್ಲ 
* ಬೆಂಗಳೂರಿನ ಶೇ. 87ರಷ್ಟು ಮತದಾರರ ಪ್ರಕಾರ ಪ್ರಬಲ ಕೌನ್ಸಿಲರ್ ಗಳಿಂದ ತಮ್ಮ ವಾರ್ಡ್ಗಳಿಗೆ ಉತ್ತಮ ಸೇವೆ ಒದಗಿಸಿ ಮೂಲಸೌಕರ್ಯದಲ್ಲಿ ಸುಧಾರಣೆಯನ್ನು ತರಲು ಸಾಧ್ಯ

* ಬೆಂಗಳೂರಿನ ಬಹುಪಾಲು ಮತದಾರರು ಬಿಬಿಎಂಪಿ ಮತ್ತು ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್ ಬಿ, ಬಿಎಂಟಿಸಿ ನಡುವಿನ ಸಮನ್ವಯವು ಉತ್ತಮ ಆಡಳಿತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ನಂಬಿದ್ದಾರೆ 
* ಬೆಂಗಳೂರಿನ ಶೇ.‌ 23ರಷ್ಟು ಮತದಾರರ ಸಮಸ್ಯೆಯು ಫುಟ್ಪಾತ್ ಗೆ ಸಂಬಂಧಿಸಿದ್ದು, ಶೇ. 20 ರಷ್ಟು ಜನ ಕಸ ನಿರ್ವಹಣೆ ತಮ್ಮ ಸಮಸ್ಯೆಯೆಂದು ಸೂಚಿಸಿದ್ದಾರೆ.
*  ಶೇ. 16 ರಷ್ಟು ಮಂದಿ ಸಂಚಾರ ಮತ್ತು ಶೇ. 15 ಮಂದಿ ಸ್ವಚ್ಛ ಕುಡಿಯುವ ನೀರಿನ ಕೊರತೆಯನ್ನು ತಮ್ಮ ಮುಖ್ಯ ಸಮಸ್ಯೆಯನ್ನಾಗಿ ಎತ್ತಿಹಿಡಿದಿದ್ದಾರೆ 

* ಬೆಂಗಳೂರಿನ 89% ಮತದಾರರಿಗೆ ಪರಿಸರ ಸಮಸ್ಯೆಗಳು ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಕಾಳಜಿ ಇದೆ
* ಕೇವಲ 25% ಮತದಾರರು, ಕಾರ್ಪೊರೇಟರ್ ಗಳು ಪರಿಸರ ಸಮಸ್ಯೆಗಳಿಗೆ ಗಮನಾರ್ಹ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂದು ಭಾವಿಸುತ್ತಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್