ಶೇ.75ರಷ್ಟಿರುವ ದಲಿತರು, ಮುಸ್ಲಿಮರು ಅಧಿಕಾರ ನಡೆಸಬೇಕು: ಸಚಿವ ಆರ್‌.ಬಿ.ತಿಮ್ಮಾಪೂರ

Published : Dec 25, 2025, 09:45 AM IST
RB Timmapur

ಸಾರಾಂಶ

ಎಲ್ಲರೂ ಸಮಾನರಾಗಿ ಬಾಳುವೆ ನಡೆಸಬೇಕು. ಡಾ.ಅಂಬೇಡ್ಕರ್‌ ಅವರು ನೀಡಿರುವ ಮತದಾನ ಹಕ್ಕನ್ನು ಸರಿಯಾರಿ ಬಳಸಿಕೊಂಡು ನಮಗೆ ಬೇಕಾದ ನಾಯಕರನ್ನು ಆರಿಸಿ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಕರೆ ನೀಡಿದರು.

ಜಮಖಂಡಿ (ಡಿ.25): ಶೇ.75ರಷ್ಟಿರುವ ದಲಿತರು, ಮುಸ್ಲಿಮರು ಅಧಿಕಾರ ನಡೆಸುವಂತಾಬೇಕು. ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು, ಕೆಟ್ಟ ಪ್ರವೃತ್ತಿ ಬಿಟ್ಟು ಒಗ್ಗಟ್ಟಿನಿಂದ ಬಸವತತ್ವಗಳ ಆಚರಣೆಗೆ ತರುವ ಮೂಲಕ ಎಲ್ಲರೂ ಸಮಾನರಾಗಿ ಬಾಳುವೆ ನಡೆಸಬೇಕು. ಡಾ.ಅಂಬೇಡ್ಕರ್‌ ಅವರು ನೀಡಿರುವ ಮತದಾನ ಹಕ್ಕನ್ನು ಸರಿಯಾರಿ ಬಳಸಿಕೊಂಡು ನಮಗೆ ಬೇಕಾದ ನಾಯಕರನ್ನು ಆರಿಸಿ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಕರೆ ನೀಡಿದರು.

ನಗರದ ಅಬುಬಕರ ದರ್ಗಾ ಮೈದಾನದಲ್ಲಿ ಶಹೀದ್‌ ಹಜರತ್‌ ಟಪ್ಪು ಸುಲ್ತಾನ ಜಯಂತ್ಯುತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ಕೌಮಿ ಏಕತಾ ಸಮಾಮೇಶ ಉದ್ದೇಶಿಸಿ ಮಾತನಾಡಿ, ಟಿಪ್ಪು ಸುಲ್ತಾನರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಆಗಿನ ಕಾಲದಲ್ಲೇ ರಾಕೆಟ್‌ಗಳನ್ನು ತಯಾರಿಸಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಅನೇಕ ಮಠ, ಮಂದಿರ ನಿರ್ಮಿಸಿದ್ದರು. ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು. ಸ್ವಾರ್ಥಕ್ಕಾಗಿ ದೇಶವನ್ನು ಗಟ್ಟಿಯಾಗಿ ಕಟ್ಟಲು ಶ್ರಮಿಸಿದ ಟಿಪ್ಪು ಸುಲ್ತಾನರ ಇತಿಹಾಸ ತಿರುಚುವ ಕೆಲಸ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಯಾರೂ ಭಯ ಪಡುವ ಅಗತ್ಯವಿಲ್ಲ

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ ನರೇಗಾ ಯೋಜನೆಯಲ್ಲಿದ್ದ ಮಹತ್ಮ ಗಾಂಧಿ ಅವರ ಹೆಸರನ್ನು ತೆಗೆಯುವ ಕೆಲಸ ಮಾಡಿದ್ದಾರೆ. ಆದರೆ ದೇಶದ ಜನರ ಮನಸ್ಸಿನಲ್ಲಿರುವ ಅವರ ಚಿಂತನೆ ತೆಗೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ ದೇಶವನ್ನು ಸರ್ವಜನಾಂಗದ ಶಾಂತಿಯ ತೊಟ ಮಾಡಲು ಶ್ರಮಿಸುತ್ತಿದೆ, ಯಾರೂ ಭಯ ಪಡುವ ಅಗತ್ಯವಿಲ್ಲ ಎಂದರು. ಸಮಿತಿ ಅಧ್ಯಕ್ಷ ನಜೀರ್‌ ಕಂಗನೊಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಡಾ. ತೌಫಿಕ್‌ ಪಾರ್ಥನಳ್ಳಿ ಮಾನಾಡಿದರು.

ಬಿಹಾರದ ಮೌಲಾನಾ ಅಬ್ದುಲ್ಲಾಸಾಲೀಂಕಮರ ಚತುರ್ವೇದಿ, ಉತ್ತರ ಪ್ರದೇಶದ ಹಜರತ್‌ ಪೀರ್‌ ಸೈಯದ್‌ ಕಾಸಿಂ ಅಶ್ರಫ್‌, ಬಾಗಲಕೊಟೆಯ ಹಜರತ ಮೌಲಾನಾ ಮೊಹಸೀನ್‌ಅಹಮದ್‌, ಕಾರಿ ಸಮಿಉಲ್ಲಾ ಖಾದ್ರಿ ಮಾನತಾಡಿದರು. ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಲತೀಫ್‌ ಖಾನ ಪಠಾಣ, ಓಲೆಮಠದ ಆನಂದ ದೇವರು, ರುದ್ರಾವಧೂತ ಮಠದ ಸಹಜಾನಂದ ಶ್ರೀಗಳು, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ರಾಹುಲ್‌ ಕಲೂತಿ, ಸುಶೀಲ ಕುಮಾರ ಬೆಳಗಲಿ, ಡಾ. ರಾಜು ಗಸ್ತಿ, ರಿಯಾಜ ಅವಟಿ, ರಫಿಕ್‌ ಬಾರಿಗಡ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅನ್ವರ್‌ ಮೋಮಿನ್‌, ಈಶ್ವರ ವಾಳೆಣ್ಣವರ, ಕಾರ್ಯದರ್ಶಿ ಸಮೀರ್‌ ಇಲಾಹಿ ಕಂಗನೊಳ್ಳಿ, ಖಜಾಂಚಿ ಅಲ್ತಾಫ್‌ ಸಗರ, ಅಬ್ದುಲ್‌ಸಾಬ ಜಮಾದಾರ, ಅಬುಬಕರ ಕುಡಚಿ ಸೇರಿದಂತೆ ಸಮಿತಿ ಹಾಗೂ ಸಲಹಾ ಸಮಿತಿ ಸದಸ್ಯರು ವೇದಿಕೆಯಲ್ಲಿದ್ದರು.

ದಲಿತರು, ಓಬಿಸಿಗಳು, ಮುಸ್ಲಿಮರು ಸೇರಿ ಶೇ.97 ಜನರಿದ್ದರೂ ಅಧಿಕಾರ ನಮ್ಮ ಬಳಿ ಇಲ್ಲವಾಗಿದೆ. ಅತ್ಯಂತ ಕಡಿಮೆ ಜನ ಸಂಖ್ಯೆಯ ಜನರು ನಮ್ಮನ್ನು ಆಳುತ್ತಿದ್ದಾರೆ. ಎಲ್ಲ ಹಿಂದುಳಿದ ಸಮಾಜಗಳು ಒಗ್ಗಟ್ಟಾಗಬೇಕು. ದೇಶವನ್ನು ಹಾಳು ಮಾಡಲು ಹೊರಟಿರುವ ಅಧಿಕಾರದಲ್ಲಿರುವವರ ವಿರುದ್ಧ ಒಗ್ಗಟ್ಟಾಗಬೇಕು. ಇವರನ್ನು ಯಹೂದಿಗಳು ಎಂದು ಸಂಬೋಧಿಸುತ್ತೇನೆ ಎಂದ ಅವರು, ರಾಜ್ಯದಲ್ಲಿ ಕೋಟಿ ಜನರಿರುವ ಮುಸ್ಲಿಮ ಸಮುದಾಯದ 30 ಶಾಸಕರಿರಬೇಕಿತ್ತು. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನರ ಹೆಸರಿಡಬೇಕು. ನಟ ಶಾರೂಖ್‌ ಖಾನ್‌ ಟಿಪ್ಪು ಸುಲ್ತಾನರ ಸಿನಿಮಾ ಮಾಡಬೇಕು.
- ಮಹೇಶ್ವರಾನಂದ ಸ್ವಾಮೀಜಿ ಅಲ್ಲಮಪ್ರಭು ಅಹಿಂದ ಪೀಠ ಹಾವೇರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ದೆಹಲಿ ಪ್ರಯಾಣದ ನಂತರ ಸಂಪುಟ ಪುನಾರಚನೆ: ಮಾಜಿ ಸಚಿವ ಕೆ.ಎನ್.ರಾಜಣ್ಣ
ಡಿಸಿ ಹಕ್ಕುಚ್ಯುತಿ ಬಗ್ಗೆ ಸಂಸದರು ಧ್ವನಿ ಎತ್ತಲಿ: ಸಚಿವ ಸತೀಶ್‌ ಜಾರಕಿಹೊಳಿ