Karnataka Politics: ಸಿಎಂ ಗಾದಿಗಾಗಿ ಡಿಕೆಶಿ, ಸಿದ್ದು ನಡುವೆ ಕಿತ್ತಾಟ: ಶೆಟ್ಟರ್‌

By Kannadaprabha NewsFirst Published Jan 28, 2022, 4:08 AM IST
Highlights

*   ಇಬ್ಬರೂ ನಾಯಕರು ಮುಖ್ಯಮಂತ್ರಿ ಆಗುವ ಭ್ರಮೆಯಲ್ಲಿದ್ದಾರೆ
*   ಚುನಾವಣೆ ನಂತರ ಕಾಂಗ್ರೆಸ್‌ ತನ್ನ ಸಂಪೂರ್ಣ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ
*   ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ನವರು ಗಿಮಿಕ್‌ ಮಾಡುತ್ತಾರೆ ಅಷ್ಟೇ 

ಹುಬ್ಬಳ್ಳಿ(ಜ.28):  ಬಿಜೆಪಿ(BJP) ಬಿಟ್ಟು ಕಾಂಗ್ರೆಸ್‌ಗೆ(Congress) ಹೋಗುವುದಕ್ಕೆ ಸದ್ಯಯಾರೂ ತಯಾರಿಲ್ಲ. ಸಿದ್ದರಾಮಯ್ಯ(Siddaramaiah) ಹಾಗೂ ಡಿ.ಕೆ. ಶಿವಕುಮಾರ(DK Shivakumar) ಹೇಳುತ್ತಿರುವುದೆಲ್ಲ ಬರೀ ಸುಳ್ಳು ಎಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagadish Shettar), ಅವರ ಸಂಪರ್ಕದಲ್ಲಿದ್ದವರ ಹೆಸರನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಮಧ್ಯೆ ಪ್ರತಿನಿತ್ಯ ಕಿತ್ತಾಟ ನಡೆದಿದೆ. ಇಬ್ಬರು ನಾಯಕರು ಮುಖ್ಯಮಂತ್ರಿ ಆಗುವ ಭ್ರಮೆಯಲ್ಲಿದ್ದಾರೆ. ಈ ಚುನಾವಣೆ ನಂತರ ಕಾಂಗ್ರೆಸ್‌ ತನ್ನ ಸಂಪೂರ್ಣ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದರು.

ಚುನಾವಣೆ(Election) ಹತ್ತಿರ ಬಂದಾಗ ಕಾಂಗ್ರೆಸ್‌ನವರು ಈ ರೀತಿ ಗಿಮಿಕ್‌ ಮಾಡುತ್ತಾರೆ ಅಷ್ಟೇ ಎಂದ ಅವರು, ಒಂದು ವೇಳೆ ಯಾರಾದರೂ ಅವರ ಸಂಪರ್ಕದಲ್ಲಿದ್ದರೆ ಅವರ ಹೆಸರುಗಳನ್ನು ಬಹಿರಂಗಪಡಿಸಲಿ ಎಂದರು.
ಡಿ.ಕೆ. ಶಿವಕುಮಾರ ಪ್ಲಾನ್‌ಗೆ ರಮೇಶ ಜಾರಕಿಹೊಳಿ ಅವರಿಂದ ರಿವರ್ಸ್‌ ಆಪರೇಷನ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್‌, ಆ ರೀತಿಯ ಯಾವುದೇ ಬೆಳವಣಿಗೆ ನಮ್ಮಲ್ಲಿ ನಡೆದಿಲ್ಲ. ರಾಜ್ಯಾಧ್ಯಕ್ಷರಾಗಲಿ, ಮುಖ್ಯಮಂತ್ರಿಗಳಾಗಲಿ ಈ ಬಗ್ಗೆ ಏನನ್ನೂ ಹೇಳಿಲ್ಲ ಎಂದರು.

Drunken Brawl :ತಿಂತೀಯಾ..ಇಲ್ವಾ? ಊಟಕ್ಕೆ ಕರೆದು ಧಾರವಾಡ ಮಾಜಿ ಸಂಸದರ ಪುತ್ರನ ಮೇಲೆ ಹಲ್ಲೆ

ಶೆಟ್ಟರ್‌ಗೆ ಆರೋಗ್ಯವಾಣಿ ಸಿಬ್ಬಂದಿ ಮನವಿ

ಸರ್ಕಾರದ ನಿಯಮಾವಳಿಗಳ ಪ್ರಕಾರ ಪಿರಾಮಲ್‌ ಸ್ವಾಯತ್ತ ಕಂಪನಿಯು ಸಿಬ್ಬಂದಿಗಳಿಗೆ ಯಾವುದೇ ಸವಲತ್ತು ನೀಡದೇ ಅನ್ಯಾಯವೆಸಗುತ್ತಿದ್ದು ಕಂಪನಿ ವಿರುದ್ಧ ದೂರು ನೀಡಲು ಗುರುವಾರ 104 ಆರೋಗ್ಯ ವಾಣಿ ಸಿಬ್ಬಂದಿಗಳು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ಗೆ ಸಲ್ಲಿಸಿದರು.

ಕಂಪನಿ ಬಾಕಿ ಉಳಿಸಿಕೊಂಡಿರುವ ಎರಡೂವರೆ ತಿಂಗಳ ವೇತನ(Salary), ಎರಡು ವರ್ಷಗಳ ವೇತನ ಬಡ್ತಿಯ ಮೊತ್ತ, ಗ್ರಾಚ್ಯುಟಿಗೆ ಸಂಬಂಧಿಸಿದ ಹಣ ಹಾಗೂ ಮುಷ್ಕರ ದಿನಗಳ ವೇತನವನ್ನು ಕಂಪನಿ ಕಡಿತಗೊಳಿಸಿದ್ದು, ಆ ವೇತನವನ್ನು ಕೂಡ ಸಿಬ್ಬಂದಿಗಳಿಗೆ ನೀಡಲು ಕಂಪನಿಗೆ ಸೂಚನೆ ನೀಡಬೇಕೆಂದು ಕೇಳಿಕೊಂಡರು.

ಪಿರಾಮಲ್‌ ಸಂಸ್ಥೆ ಫೆಬ್ರವರಿ 15ರ ನಂತರ ಯೋಜನೆಯಿಂದ ಹೊರ ಬರುವುದಾಗಿ ತಿಳಿಸಿದೆ. ಇದರಿಂದ ಮುಂದೇನು ಎಂದು ಸಿಬ್ಬಂದಿಗೆ ದಿಕ್ಕು ತೋಚದಂತಾಗಿದೆ. ಆರೋಗ್ಯವಾಣಿಯ 400ಕ್ಕೂ ಹೆಚ್ಚು ಸಿಬ್ಬಂದಿಗಳ ಕುಟುಂಬಗಳು ಬೀದಿಪಾಲಾಗುವ ಪರಿಸ್ಥಿತಿಯ ಎದುರಾಗಿದೆ.

ಈ ಕಾರಣ ಬೇರೊಂದು ಕಂಪನಿ ಯೋಜನೆಯನ್ನು ಕೈಗೆತ್ತಿಕೊಂಡರೆ ಬರುವ ಕಂಪನಿಗೆ ಇದೇ ಸಿಬ್ಬಂದಿಗಳಿಂದ 104 ಆರೋಗ್ಯವಾಣಿ ಯೋಜನೆಯನ್ನು ಮುಂದುವರಿಸಬೇಕು. ಇಲ್ಲವೇ ಬೇರೊಂದು ಕಂಪನಿ ಯೋಜನೆ ಕೈಗೆತ್ತಿಕೊಳ್ಳುವ ವರೆಗೂ ಸರ್ಕಾರವೇ ಈ ಸಿಬ್ಬಂದಿಗಳಿಂದ ಯೋಜನೆಯನ್ನು ಮುಂದುವರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್‌, ಈಗಾಗಲೇ ಮುಖ್ಯಮಂತ್ರಿಗಳ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದೇನೆ. ಮತ್ತೊಮ್ಮೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರವಾಗಿ ಸಮಸ್ಯೆ ಬಗೆಹರಿಸಿಸುವ ಭರವಸೆ ನೀಡಿದರು.

ಆರು ತಿಂಗಳಲ್ಲಿ ಎಲ್ಲ ಬಡಾವಣೆಗಳ ಒಳರಸ್ತೆ ಅಭಿವೃದ್ಧಿ

ಆರು ತಿಂಗಳಲ್ಲಿ ಅವಳಿ ನಗರದ(Hubballi-Dharwad) ಬಡಾವಣೆಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್‌ ಹೇಳಿದರು. ನಗರದ ಬೀಳಗಿ ಲೇಔಟ್‌ನಲ್ಲಿ .27 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುವ ರಸ್ತೆ ಇಕ್ಕೆಲಗಳಲ್ಲಿ ಕಾಂಕ್ರಿಟ್‌ ಹಾಕುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

Corona 3rd Wave: ಕೋವಿಡ್‌ನಿಂದ ಮೃತಪಟ್ಟವರಿಗೆ ಶೀಘ್ರ ಪರಿಹಾರ: ಸಚಿವ ಆಚಾರ್‌

ಈಗಾಗಲೇ ಗುಜರಾತ್‌ ಭವನ, ವಿಜಯನಗರ, ವಿಶ್ವೇಶ್ವರಯ್ಯ ನಗರದ ರಸ್ತೆಗಳನ್ನು ಕಾಂಕ್ರಿಟ್‌ ರಸ್ತೆಯನ್ನಾಗಿ ಬದಲಾಯಿಸಲಾಗಿದೆ. ಗದಗ, ಕಾರವಾರ, ಬಿಡ್ನಾಳಗಳ ಸಂಪರ್ಕ ಕಲ್ಪಿಸುವ ರಿಂಗ್‌ ರೋಡ್‌ ಕಾಮಗಾರಿ ಮುಗಿದಿದೆ. ಹುಬ್ಬಳ್ಳಿ- ಧಾರವಾಡ ನಡುವಿನ ಬೈಪಾಸ್‌ ಅನ್ನು 6 ಪಥದಲ್ಲಿ ನಿರ್ಮಿಸಲಾಗುವುದು ಎಂದರು.

ರಾಜ್ಯದಲ್ಲಿ ಬಿಆರ್‌ಟಿಎಸ್‌(BRTS) ಬಸ್‌ ಸಂಚಾರ ಅವಳಿ ನಗರದಲ್ಲಿ ಮಾತ್ರ ಇದೆ. ಟ್ರಾಫಿಕ್‌ ಸಮಸ್ಯೆ ನಿವಾರಣೆ ಮಾಡಲು ಫ್ಲೈಓವರ್‌ ನಿರ್ಮಿಸಲಾಗುತ್ತಿದೆ. ದಿನದ 24 ಗಂಟೆ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ವೀರಣ್ಣ ಸವಡಿ, ಸಂತೋಷ ಚವ್ಹಾಣ್‌, ಮುಖಂಡರಾದ ವಸಂತ ನಾಡಜೋಶಿ, ಸುಧಾಕರ್‌ ಕಟ್ಟಿಮನಿ ಸೇರಿದಂತೆ ಮತ್ತಿತರರು ಇದ್ದರು.
 

click me!