
ಗದಗ (ಫೆ.20): ಗ್ಯಾರಂಟಿ ವಿಳಂಬದ ಬಗ್ಗೆ ಮಾತನಾಡುವ ನೈತಿಕತೆ ಸಂಸದ ಜಗದೀಶ ಶೆಟ್ಟರ್ ಅವರಿಗಿಲ್ಲ ಎಂದು ಕಾನೂನು, ಪ್ರವಾಸೋದ್ಯಮ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಬಿದ್ದು, ಇವರ ಸರ್ಕಾರ ಸ್ಪಂದಿಸದೇ ಇದ್ದಾಗ ಸಾರ್ವಜನಿಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಜನರಿಗೆ ಒಂದು ರುಪಾಯಿ ಪರಿಹಾರ ಕೊಡದವರು ನೀವು, ವಿರೋಧ ಪಕ್ಷಗಳ ಬೇರೆ ಯಾರಾದರೂ ಈ ಮಾತನಾಡಿದ್ದರೆ ಸುಮ್ಮನಿರಬಹುದು, ನಿಮಗೇನು ನೈತಿಕತೆ ಇದೆ ಜಗದೀಶ ಶೆಟ್ಟರೇ. ?
ಕರ್ನಾಟಕದ ಜನರ ಬಗ್ಗೆ ನಿಮಗೆ ಕಾಳಜಿ ಇದ್ದರೆ ಕೇಂದ್ರದ ಬಜೆಟ್ ನಲ್ಲಿ ರಾಜ್ಯಕ್ಕಾದ ಅನ್ಯಾಯ ಪ್ರಶ್ನೆ ಮಾಡಿ ನೋಡೋಣ, ನಾವು ಕೊಟ್ಟ ಟ್ಯಾಕ್ಸ್ ನಲ್ಲಿ 13 % ಮಾತ್ರ ವಾಪಸ್ ಬರುತ್ತಿದೆ. ನಾವು ಕಟ್ಟುವ ತೆರಿಗೆ ಪ್ರಮಾಣವೆಷ್ಟು ಎನ್ನುವುದನ್ನು ಗಮನಿಸಿ, ಬಿಹಾರ್, ಯುಪಿಗೆ ಎಷ್ಟು ಅನುದಾನ ಹೋಗುತ್ತಿದೆ ಎನ್ನುವುದನ್ನು ಗಮನಿಸಿ, ಅದರ ಬಗ್ಗೆ ಧ್ವನಿ ಎತ್ತಿದಾಗ ಮಾತ್ರ ನೀವು ಕರ್ನಾಟಕದ ಹಿತ ಕಾಪಾಡುವವರು ಎಂದು ಒಪ್ಪಬಹುದು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಗ್ಯಾರಂಟಿ ಯೋಜನೆಯ ಹಣವೂ ಕೂಡಾ ಪ್ರತಿ ತಿಂಗಳು 1 ನೇ ತಾರೀಕಿಗೆ ಸಂಬಳದ ಹಾಗೆ ರೆಗ್ಯುಲರ್ ಆಗಿ ಬರುವಂತೆ ವ್ಯವಸ್ಥೆ ಮಾಡುತ್ತೇವೆ, ಅನ್ನ ಭಾಗ್ಯದ ಹಣವಾಗಿರಲಿ, ಗೃಹ ಲಕ್ಷ್ಮೀ ಹಣವಾಗಿರಲಿ, ರೆಗ್ಯುಲರಾಗಿ ಮುಟ್ಟಿಸೋದು ನಮ್ಮ ಪ್ರಯತ್ನ ನಿರಂತರವಾಗಿಯೇ ನಡೆದಿರುತ್ತದೆ. ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ ಅಷ್ಟೇ. ಈ ಹಿಂದೆ ಖಜಾನೆ 2 ವರ್ಗಾವಣೆ ಸಂದರ್ಭದಲ್ಲೂ ಎಲ್ಲಾ ವೇತನದಾರರಿಗೆ ತೀವ್ರ ತೊಂದರೆ ಆಗಿದ್ದಿಲ್ಲವೇ ? ಎಂದು ಮರು ಪ್ರಶ್ನಿಸಿದರು.
ಪಂಚ ಗ್ಯಾರಂಟಿ ಅನುಷ್ಠಾನ ಜವಾಬ್ದಾರಿ ನಿರ್ವಹಿಸಿ: ಸಚಿವ ಎಚ್.ಕೆ ಪಾಟೀಲ್
ಶಿಸ್ತುಪಾಲನೆಯ ಸೂಕ್ತ ಹೆಜ್ಜೆಯನ್ನ ಪರಮೇಶ್ವರ್ ಅವರು ಇಟ್ಟಿದ್ದಾರೆ. ಶೋಷಿತ ಸಮಾವೇಶದ ವಿಷಯವಾಗಿ ನಮ್ಮನ್ನು ಕೇಳದೇ ಏನೂ ಮಾಡಬೇಡಿ ಎಂದು ಹೈಕಮಾಂಡ್ ಹೇಳಿತ್ತು, ಹಾಗಾಗಿ ಈಗ ವರಿಷ್ಠರ ಜೊತೆ ಚರ್ಚೆ ಮಾಡಲು ಅವರು ಹೋಗಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಪರಮೇಶ್ವರ ಅವರ ದಿಲ್ಲಿ ಭೇಟಿಯ ಬಗ್ಗೆ ಗದಗನಲ್ಲಿ ಪ್ರತಿಕ್ರಿಯೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.