ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೆ ಸಹೋದರ ಪ್ರದೀಪ್ ಶೆಟ್ಟರ್ ತೀವ್ರ ಬೇಸರ

By Gowthami K  |  First Published Apr 17, 2023, 11:39 AM IST

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ‌ಆಗಿರುವ  ಅವರ ಸಹೋದರ ಪ್ರದೀಪ್ ಶೆಟ್ಟರ್  ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


ಹುಬ್ಬಳ್ಳಿ (ಏ.17): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ‌ಆಗಿರುವ  ಅವರ ಸಹೋದರ ಪ್ರದೀಪ್ ಶೆಟ್ಟರ್  ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.  ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಹೋಗಿರೋದು ಮನಸಿಗೆ ನೋವಾಗಿದೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.  ಜೊತೆಗೆ ನಾನು ಬಿಜೆಪಿಯಲ್ಲಿಯೇ ಇರುತ್ತೇನೆ ಎಂದಿದ್ದಾರೆ. ಮನಸ್ಸಿಗೆ ನೋವಾಗಿದೆ ಮಾತೇ ಬರ್ತಿಲ್ಲ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡ್ತೀನಿ. ಪಕ್ಷನೇ ಬೇರೆ ವೈಯಕ್ತಿಕ ವಿಚಾರ ಬೇರೆ ಎಂದಿರುವ ಪ್ರದೀಪ್ ಶೆಟ್ಟರ್ ಈ ಬಗ್ಗೆ ಜಾಸ್ತಿ ನಾನು ಮಾತಾಡಲ್ಲ ಎಂದಿದ್ದಾರೆ. ಬಿಜೆಪಿ ಹೈಕಮಾಂಡ್ ಜಗದೀಶ್ ಶೆಟ್ಟರ್ ನಡೆಸಿಕೊಂಡ ಬಗ್ಗೆ ಅವರನ್ನೆ ಕೇಳಿ. ಶೆಟ್ಟರ್ ಹೋಗಿರೋದು ನೋವಾಗಿದೆ ಎಂದಷ್ಟೇ ಹೇಳಿದ್ದಾರೆ.

ಪಕ್ಷ ದ್ರೋಹ ಮಾಡಿದ್ರು ಎಂಬ ವಿಚಾರಕ್ಕೆ ಉತ್ತರ ಕೊಟ್ಟ ಶೆಟ್ಟರ್:
ಪಕ್ಷ ದ್ರೋಹ ಮಾಡಿದರು ಎಂಬ ಆರೋಪದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಪಕ್ಷ ಕಟ್ಟಿದ ವ್ಯಕ್ತಿ. ಪಕ್ಷ ದ್ರೋಹ ಮಾಡೋದಿಲ್ಲ. ದ್ರೋಹ ಅಂತ ಇಷ್ಟು ದಿನ ಇರಲಿಲ್ಲ. ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ಈಗ ಮಾತಾಡುತ್ತಿರೋರು ಪಕ್ಷಕ್ಕೆ ಬಂದ ಹೊಸಬರು ಆಗಿದ್ದಾರೆ.  ಮಾತಾಡಲಿ, ಅವರ ವಿಷಯಗಳು ನನಗೆ ಗೊತ್ತಿದೆ. 10 ಬಾರಿ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಕೆಲವೇ ಕೆಲವು ವ್ಯಕ್ತಿಗಳು ಪಾರ್ಟಿಯನ್ನು ಕಂಟ್ರೋಲ್ ತೆಗೆದುಕೊಳ್ಳೋಕೆ ಕೆಲಸ ಮಾಡ್ತಿದ್ದಾರೆ. ಸಾವಿರಾರು ಕಾರ್ಯಕರ್ತರು ನನ್ನ ಜೊತೆ ಇದ್ದಾರೆ. ಉತ್ತಮ ನಿರ್ಧಾರ ಮಾಡಿದ್ದೀರಾ ಅಂತ ಹೇಳಿದ್ದಾರೆ ಎಂದರು.

Latest Videos

undefined

ಕಮಲ ಬಿಟ್ಟು ಕೈ ಹಿಡಿದ ಜಗದೀಶ್‌ ಶೆಟ್ಟರ್‌: 4 ದಶಕಗಳ ಬಿಜೆಪಿ ಒಡನಾಟ ಅಂತ್ಯ

ಇಷ್ಟು ದಿನ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿ ಈಗ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಮಾತನಾಡಿದ ಶೆಟ್ಟರ್, ಕಾಂಗ್ರೆಸ್ ‌ಕೂಡಾ ರಾಷ್ಟ್ರೀಯ ಪಕ್ಷ. ವ್ಯವಸ್ಥೆಯಲ್ಲಿ ಇದೆಲ್ಲ ಇರುತ್ತೆ. ಯಾರಿಂದ ನನಗೆ ಅನ್ಯಾಯ ಆಗಿದೆ ಅಂತ ಈಗಾಗಲೇ ಹೇಳಿದ್ದೇನೆ ಎಂದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಸುಧಾಕರ್ ಟೆಂಪಲ್ ರನ್, ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೆ ಬೇಸರ

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!