ಬಿಜೆಪಿ-ಜೆಡಿ​ಎಸ್‌ ಮೈತ್ರಿ ಆಗಬಹುದು ಎಂದು ಅನಿಸುತ್ತಿದೆ: ಯೋಗೇಶ್ವರ್‌

By Kannadaprabha News  |  First Published Jun 24, 2023, 8:25 AM IST

ಮುಂಬ​ರುವ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಬಿಜೆಪಿ ಮತ್ತು ಜೆಡಿ​ಎಸ್‌ ನಡುವೆ ಹೊಂದಾಣಿಕೆ ಆಗಬಹುದು ಎಂದು ಅನಿಸುತ್ತದೆ ಎಂದು ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ.​ಯೋ​ಗೇ​ಶ್ವರ್‌ ಪ್ರತಿ​ಕ್ರಿ​ಯಿ​ಸಿ​ದರು. 


ರಾಮ​ನ​ಗರ (ಜೂ.24): ಮುಂಬ​ರುವ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಬಿಜೆಪಿ ಮತ್ತು ಜೆಡಿ​ಎಸ್‌ ನಡುವೆ ಹೊಂದಾಣಿಕೆ ಆಗಬಹುದು ಎಂದು ಅನಿಸುತ್ತದೆ ಎಂದು ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ.​ಯೋ​ಗೇ​ಶ್ವರ್‌ ಪ್ರತಿ​ಕ್ರಿ​ಯಿ​ಸಿ​ದರು. ಶುಕ್ರವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ಜೆಡಿಎಸ್‌ ಜೊತೆ ಮೈತ್ರಿ ಬಗ್ಗೆ ಮಾಧ್ಯಮಗಳು ಸೇರಿ ಎಲ್ಲ ಕಡೆ ಚರ್ಚೆ ಆಗು​ತ್ತಿದೆ. ಹಾಗಾಗಿ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಆಗಬಹುದು ಅನಿಸುತ್ತಿದೆ. ಈ ಕುರಿತು ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು. 

ಈ ಬಾರಿಯ ಚುನಾವಣೆಯಲ್ಲೂ ಲೋಕಸಭೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸಂಸದರು ಆಯ್ಕೆಯಾಗಬೇಕಾಗಿದೆ. ಒಂದಿಷ್ಟು ರಾಜಕೀಯ ಬದಲಾವಣೆಗಳು ಆಗಬೇಕಿದೆ. ಬದಲಾವಣೆಗಳ ಜೊತೆಗೇ ನಾವು ಚುನಾವಣೆಯನ್ನು ಎದುರಿಸುತ್ತೇವೆ ಎಂದು ತಿಳಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ಕೂಡ ಹೈಕಮಾಂಡ್‌ಗೆ ಬಿಡ​ಲಾ​ಗಿದೆ. ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಹೈಕಮಾಂಡ್‌ ತಿಳಿಸಿದರೆ ಸ್ಪರ್ಧೆಗೆ ಸಿದ್ಧ ಎಂದು ಇದೇ ವೇಳೆ ಯೋಗೇಶ್ವರ್‌ ತಿಳಿಸಿದರು.

Tap to resize

Latest Videos

ಕಾಂಗ್ರೆಸ್‌ನ ಗ್ಯಾರಂಟಿ ಸ್ಕೀಂಗಳಿಂದ ಕೈಗಾರಿಕೆ ಮುಚ್ಚುವ ಭೀತಿ: ಶಾಸಕ ಸತೀಶ್‌ ರೆಡ್ಡಿ

ಬಿಜೆಪಿ ಅಭ್ಯರ್ಥಿಯಾಗಲು ಸೂಚನೆ ಇದೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಸೂಚನೆ ಇದೆ. ಆದರೆ, ಅಂತಿಮವಾಗಿ ಈ ಕುರಿತು ಹೈಕಮಾಂಡ್‌ ತೀರ್ಮಾನಿಸಲಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪಕ್ಷದ ವರಿಷ್ಠರ ಭೇಟಿಗಾಗಿ ದೆಹಲಿಗೆ ಬಂದಿದ್ದೆ. ಕೆಲವು ಪ್ರಮುಖರನ್ನು ಭೇಟಿ ಮಾಡಿದ್ದೇನೆ. ಲೋಕಸಭೆ ಚುನಾವಣೆ ಬಗ್ಗೆಯೂ ಚರ್ಚೆ ಮಾಡಿದ್ದೇನೆ. ಬೆಂಗಳೂರು ಗ್ರಾಮಾಂತರಕ್ಕೆ ಅಭ್ಯರ್ಥಿಯಾಗುವ ಸೂಚನೆ ಸಿಕ್ಕಿದೆ ಎಂದರು.

ರಾಜಕೀಯ ಬೇಸರ ತರಿಸಿದೆ ಎಂಬ ಸಂಸದ ಡಿ.ಕೆ.ಸುರೇಶ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅವರು ಯಾಕೆ ವೈರಾಗ್ಯದ ಮಾತು ಆಡುತ್ತಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆ ಹಿಂದೆ ಗೂಡಾರ್ಥ ಇದೆ. ಅವರ ಅಣ್ಣನನ್ನು ಸಿಎಂ ಮಾಡಲು ಪ್ರಯತ್ನಿಸಿರಬೇಕು. ಇಲ್ಲವೇ, ದೆಹಲಿಗಿಂತ ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯವಾಗಿರಲು ನಿರ್ಧರಿಸಬೇಕು. ಅವರು ಸುಲಭವಾಗಿ ರಾಜಕೀಯದಿಂದ ಹಿಂದೆ ಸರಿಯಲ್ಲ ಎನಿಸುತ್ತದೆ ಎಂದರು.

ಬಿಜೆಪಿ ಸೋಲಿಗೆ ನಾಯಕರು ಹೊಂದಾಣಿಕೆ ಕಾರಣ-ಯೋಗಿ: ಹೊಂದಾಣಿಕೆ ರಾಜಕೀಯ ಕುರಿತು ಪ್ರತಿಕ್ರಿಯಿಸಿ, ವಿಧಾನಸಭೆ ಚುನಾವಣೆಯಲ್ಲಿ ಹಿರಿಯ ನಾಯಕರ ಹೊಂದಾಣಿಕೆ ಮುಗಿದ ಕಥೆ. ಈಗ ಆ ಬಗ್ಗೆ ಮಾತನಾಡಿದರೆ ನಾವು ಬೆಂಕಿ ಹಚ್ಚಿದಂತೆ. ನಮ್ಮ ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ. ನನಗೂ ವೈಯಕ್ತಿಕವಾಗಿ ಹೀಗೆ ಅನಿಸಿದೆ. ಅದಕ್ಕೂ ಮಿಗಿಲಾಗಿ, ಬಿಜೆಪಿ ಅವಧಿಯಲ್ಲಿ ಮಂತ್ರಿಮಂಡಲ ವಿಸ್ತರಣೆ ಮಾಡದಿರುವುದು, ನಮ್ಮ ಆಡಳಿತ ವ್ಯವಸ್ಥೆ ಸರಿಯಿಲ್ಲದಿರುವುದು.

ವಿದ್ಯುತ್‌ ಶುಲ್ಕದ ಮೇಲಿನ ತೆರಿಗೆ ಇಳಿಕೆ ಬಗ್ಗೆ ಬಜೆಟ್‌ ಬಳಿಕ ಪರಿಶೀಲನೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ಗೆ ಠಕ್ಕರ್‌ ಕೊಡದಿರುವುದು ಬಿಜೆಪಿ ಸೋಲಿಗೆ ಕಾರಣ ಎಂದು ವಿಶ್ಲೇಷಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೂ ಮತ ಇದೆ. ಜೆಡಿಎಸ್‌-ಬಿಜೆಪಿ ಹೋರಾಟದಿಂದ ಮೂರನೆಯವರಿಗೆ ಲಾಭವಾಗಿದೆ ಎನ್ನುವ ಮೂಲಕ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಪರೋಕ್ಷ ಬೆಂಬಲ ಸೂಚಿಸಿದರು.

click me!