ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ/ ಇದು ಒಂದು ಹುದ್ದೆಯ ಮಾತಲ್ಲ ಎಂದ ಕಪಿಲ್ ಸಿಬಲ್/ ಇಡೀ ದೇಶದ ವಿಚಾರ ಎಂದ ಹಿರಿಯ ನಾಯಕ/ ರಾಹುಲ್ ಮೇಲೆ ಮುನಿಸಿಕೊಂಡಿದ್ದ ಕಪಿಲ್
ನವದೆಹಲಿ (ಆ. 25) ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ದೊಡ್ಡ ಚರ್ಚೆಯಾಗಿ ಅಂತಿಮವಾಗಿ ಸೋನಿಯಾ ಗಾಂಧಿ ಅವರೇ ಪಕ್ಷ ಮುನ್ನಡೆಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ನಾಯಕತ್ವ ಬದಲಾವಣೆ ಸಂಬಂಧ ಪತ್ರ ಬರೆದಿದ್ದ 23 ನಾಯಕರಲ್ಲಿ ಒಬ್ಬರಾದ ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ರಾಹುಲ್ ವಿರುದ್ಧ ಮಾತನಾಡಿ ನಂತರ ಟ್ವೀಟ್ ಹಿಂದಕ್ಕೆ ಪಡೆದಿದ್ದರು.
ರಾಹುಲ್ ಆರೋಪದಿಂದ ಮನಸಿಗೆ ನೋವಾಯಿತು; ಕರ್ನಾಟಕದ ಕೈ ನಾಯಕ
ಗಳವಾರ ಮತ್ತೊಂದು ಪ್ರತಿಕ್ರಿಯೆ ನೀಡಿದ ಸಿಬಲ್, ಇದು ಒಂದು ಹುದ್ದೆ ಪ್ರಶ್ನೆ ಅಲ್ಲ, ಇಡೀ ದೇಶದ ಪ್ರಶ್ನೆ' ಎಂದಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ಒಂದು ದಿನದ ನಂತರ ಸಿಬಲ್ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಸುಮಾರು ಏಳು ಗಂಟೆಗಳಿಗೂ ಅಧಿಕ ಕಾಲ ಕಾಂಗ್ರೆಸ್ ಉನ್ನತ ಮಟ್ಟದ ನಾಯಕರು ಸಭೆ ನಡೆಸಿದರು. ಸೀನಿಯರ್ಸ್ ಮತ್ತು ಜ್ಯೂನಿಯರ್ಸ್ ನಡುವೆ ಸದ್ದಿಲ್ಲದೆ ಸಮರವೂ ನಡೆದು ಹೋಯಿತು. ಗಾಂಧಿ ಕುಟುಂಬದವರೆ ಅಧ್ಯಕ್ಷ ಗಾದಿಯಲ್ಲಿ ಮುಂದುವರಿಯಬೇಕು ಎಂದು ಒಂದು ಗುಂಪು ಹೇಳಿದರೆ, ಬದಲಾವಣೆ ಅವಶ್ಯಕ ಎಂದು ಇನ್ನೊಂದು ಗುಂಪಿನ ನಾಯಕರು ಪ್ರತಿಪಾದನೆ ಮಾಡಿದರು.
ಸಭೆ ನಡೆಸಿ ಭಿನ್ನಾಭಿಪ್ರಾಯ ಉಂಟಾಗಿದ್ದಕ್ಕೆ ತೇಪೆ ಬಿದ್ದಿದೆ. ಕಾಂಗ್ರೆಸ್ ಮತ್ತೆ ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಕಪಿಲ್ ಸಿಬಲ್ ಹೇಳಿಕೆ ಇದೀಗ ಮಹತ್ವ ಕಳೆದುಕೊಂಡಿದೆ.
It’s not about a post
It’s about my country which matters most