ನಾನು ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರುತ್ತೇನೆಂಬುದು ಸುಳ್ಳು: ಮಾಜಿ ಸಚಿವ ಮಾಧುಸ್ವಾಮಿ

By Kannadaprabha News  |  First Published Jul 3, 2023, 3:00 AM IST

‘ನಾನು ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರುತ್ತೇನೆಂಬುದು ಸುಳ್ಳು. ಇಂತಹ ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ’ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.


ಚಿಕ್ಕನಾಯಕನಹಳ್ಳಿ (ಜು.03): ‘ನಾನು ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರುತ್ತೇನೆಂಬುದು ಸುಳ್ಳು. ಇಂತಹ ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ’ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸಮಾಲೋಚನಾ ಸಭೆ ನಡೆಸಿ ಮಾತನಾಡಿದ ಅವರು, ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಎಲ್ಲಾ ರೀತಿಯ ಮಂತ್ರಿ ಪದವಿ, ಗೌರವ ನೀಡಿದ್ದು, ನನ್ನನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದೆ. 

ಅಂತಹ ಪಕ್ಷವನ್ನು ತೊರೆದು ನಾನು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಭವಿಷ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಈ ಸರ್ಕಾರ ಹೆಚ್ಚು ಕಾಲ ಅಸ್ತಿತ್ವದಲ್ಲಿ ಇರುವುದಿಲ್ಲ. ಉಭಯ ನಾಯಕರ ನಡುವೆ ಅಧಿಕಾರ ಹಂಚಿಕೆಯ ಒಳ ಜಗಳ ನಡೆಯುತ್ತಿದ್ದು, ಲೋಕಸಭಾ ಚುನಾವಣೆಯ ನಂತರ ಈ ಸರ್ಕಾರ ಪತನಗೊಳ್ಳುತ್ತದೆ ಎಂದರು.

Tap to resize

Latest Videos

ಕಷ್ಟದ ಕಲಿ​ಕೆ​ಗಿಂತ ಇಷ್ಟದ ಕಲಿ​ಕೆಯೇ ಮುಖ್ಯ: ಡಾ.ನಾ.ಸೋಮೇಶ್ವರ

ಹೆದ್ದಾರಿಯಲ್ಲಿ ಅಪಘಾತ ತಡೆಗೆ ಕ್ರಮ ಕೈಗೊಳ್ಳಿ: ಜಿಲ್ಲೆಯಾದ್ಯಂತ ಹಾದು ಹೋಗಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತವಾಗುವ ಸ್ಥಳಗಳನ್ನು ಗುರುತಿಸಿ, ವೈಜ್ಞಾನಿಕ ರೀತಿಯಲ್ಲಿ ನ್ಯೂನತೆಗಳನ್ನು ಸರಿಪಡಿಸಿ ಅಪಘಾತ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ಸೂಚಿಸಿದರು. ಅಪಘಾತಗಳಿಗೆ ಕಾರಣವಾಗುವಂತಹ ನ್ಯೂನತೆಗಳನ್ನು ಗುರುತಿಸಿ ಪೊಲೀಸ್‌ ಅಧಿಕಾರಿಗಳು ವರದಿಯನ್ನು ಸಲ್ಲಿಸಿದ್ದು, ವರದಿಯನ್ನು ಆಧರಿಸಿ ಇನ್ನೊಂದು ತಿಂಗಳೊಳಗಾಗಿ ಕ್ರಮವಹಿಸಿ ತಮಗೆ ವರದಿ ನೀಡುವಂತೆ ಎನ್‌ಎಚ್‌ಎಐ, ಕೆಶಿಪ್‌, ಪಿಡಬ್ಲ್ಯೂಡಿ, ಕೆಆರ್‌ಡಿಸಿಎಲ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶನಿವಾರ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಪಘಾತಗಳು ಸಂಭವಿಸಬಹುದಾದ ಸ್ಥಳಗಳಲ್ಲಿ ಕಡ್ಡಾಯವಾಗಿ ಸೂಚನಾ ಫಲಕಗಳು, ಸೋಲಾರ್‌ ಬ್ಲಿಂಕ​ರ್‍ಸ್, ವೈಜ್ಞಾನಿಕವಾದ ಉಬ್ಬುಗಳನ್ನು ಅಳವಡಿಸಬೇಕು. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ಅದಕ್ಕೆ ಪರ್ಯಾಯವಾಗಿ ಚಲಿಸಬೇಕಾದ ರಸ್ತೆಗಳಲ್ಲಿ ಸೂಚನಾ ಫಲಕಗಳು, ರೇಡಿಯಂ ಸ್ಟಿಕರ್‌ಗಳನ್ನು ಮೊದಲೇ ಅಳವಡಿಸಬೇಕು. ಗ್ರಾಮೀಣ ಭಾಗದ ರಸ್ತೆಗಳು ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಕಡೆಗಳಲ್ಲಿ ವೈಜ್ಞಾನಿಕವಾದ ಉಬ್ಬುಗಳನ್ನು, ಬ್ಲಿಂಕರ್‌ ಹಾಗೂ ಸ್ಟ್ರೀಟ್‌/ಹೈಮಾಸ್ಟ್‌ ಲೈಟ್‌ಗಳನ್ನು ಅಳವಡಿಸಬೇಕು, ಇಲ್ಲವಾದರೆ ರಾತ್ರಿ ವೇಳೆಯಲ್ಲಿ ಅಪಘಾತಗಳು ಸಂಭವಿಸುತ್ತವೆ ಎಂದರು.

ವಿಜಯನಗರ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಜಮೀರ್‌ ಅಹ್ಮದ್‌ ಖಾನ್‌

ರಸ್ತೆ ಬದಿಗಳಲ್ಲಿ ಸಂಚಾರಕ್ಕೆ ತೊಂದರೆಯಾಗುವ ಗಿಡ ಮರಗಳನ್ನು ಕಾಲ ಕಾಲಕ್ಕೆ ತೆರವುಗೊಳಿಸಬೇಕು. ವಾಹನ ಚಾಲಕರಿಗೆ ಕಾಣುವ ರೀತಿಯಲ್ಲಿ ಸಂಚಾರಿ ಚಿಹ್ನೆಗಳನ್ನು ಅಳವಡಿಸಬೇಕು, ಮಳೆಗಾಲ ನಿಮಿತ್ತ ರಸ್ತೆಗಳು ದುರಸ್ತಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಆದ್ದರಿಂದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ವೈಟಾಪಿಂಗ್‌ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹೆದ್ದಾರಿಗಳಲ್ಲಿ ರಾತ್ರಿ ವೇಳೆಯಲ್ಲಿ ಭಾರಿ ಗಾತ್ರದ ವಾಹನಗಳು ದುರಸ್ತಿಗೊಳಗಾದ ವಾಹನಗಳನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಸೂಚಿಸಿದರಲ್ಲದೆ, ಟೋಲ್‌ ಪ್ಲಾಜಾದ ವ್ಯಾಪ್ತಿಯಲ್ಲಿರುವ ಆಂಬ್ಯುಲೆನ್ಸ್‌ ಹಾಗೂ ಟೋಯಿಂಗ್‌ ವಾಹನ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

click me!