ಎಚ್.ಡಿ. ದೇವೇಗೌಡ ತಮ್ಮ ಕುಟುಂಬಕ್ಕೆ 48 ನಿವೇಶನ ಹಂಚಿಕೆ ಮಾಡಿರುವುದಾಗಿ 2011ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅವರು ಪರಿಷತ್ ಸಭಾಪತಿಗಳಿಗೆ ದಾಖಲೆ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ 300/200 (60,000 ಅಡಿ) ಹಂಚಿಕೆ ಮಾಡಿರುವುದಾಗಿ ಯಡಿಯೂರಪ್ಪ ಹೇಳಿದ್ದರು. ಇದು ಪರಿಷತ್ ನಡಾವಳಿ ಯಲ್ಲೂ ದಾಖಲಾಗಿದೆ. ಈ ಬಗ್ಗೆ ಬಿಜೆಪಿಯವರ ನಿಲುವೇನು ಎಂದ ಕೆಪಿಸಿಸಿ ವಕ್ತಾರ ರಮೇಶ್ ಬಾಬು
ಬೆಂಗಳೂರು(ಜು.14): 'ಮುಡಾ ನಿವೇಶನ ಹಂಚಿಕೆಯಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅಕ್ರಮ ನಡೆಸಿದ್ದು, ತಮ್ಮ ಕುಟುಂಬ ಸದಸ್ಯರಿಗೇ 48 ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಪರಿಷತ್ ಯಡಿಯೂರಪ್ಪ ಸಭಾಪತಿಗಳಿಗೆ ದಾಖಲೆ ಸಲ್ಲಿಸಿದ್ದರು. ಈ ಬಗ್ಗೆ ಸಿಬಿಐ ತನಿಖೆಗೆ ಬಿಜೆಪಿ ಈಗ ಒತ್ತಾಯಿಸುತ್ತದೆಯೇ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರರಾದ ರಮೇಶ್ ಬಾಬು, 'ಎಚ್.ಡಿ. ದೇವೇಗೌಡ ತಮ್ಮ ಕುಟುಂಬಕ್ಕೆ 48 ನಿವೇಶನ ಹಂಚಿಕೆ ಮಾಡಿರು ವುದಾಗಿ 2011ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅವರು ಪರಿಷತ್ ಸಭಾಪತಿಗಳಿಗೆ ದಾಖಲೆ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ 300/200 (60,000 ಅಡಿ) ಹಂಚಿಕೆ ಮಾಡಿರುವುದಾಗಿ ಯಡಿಯೂರಪ್ಪ ಹೇಳಿದ್ದರು. ಇದು ಪರಿಷತ್ ನಡಾವಳಿಯಲ್ಲೂ ದಾಖಲಾಗಿದೆ. ಈ ಬಗ್ಗೆ ಬಿಜೆಪಿಯವರ ನಿಲುವೇನು' ಎಂದರು.
undefined
ಬೆನ್ನು ಬೆನ್ನಿಗೆ ಎರಡು ಕಂಟಕ.. ! ಅವಳಿ ಕಂಟಕದ ಸುಳಿಯಲ್ಲಿ ಸಿಲುಕಿದರಾ ಸಿಎಂ ಸಿದ್ದರಾಮಯ್ಯ?
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ರೂಪದಲ್ಲಿ ಭೂ ಮಾಲೀಕರಿಗೆ ನಿವೇಶನ ನೀಡಿರುವ ವಿರುದ್ಧ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಆರೋಪಮಾಡುತ್ತಿದ್ದಾರೆ. ಆದರೆ ತಮ್ಮ ರಾಜಕೀಯ ಪ್ರಭಾವದ ಮೂಲಕ ಒಂದೇ ಕುಟುಂಬ 48 ನಿವೇಶನಗ ಳನ್ನು ಪಡೆದುಕೊಂಡ ಅಕ್ರಮ ಕುರಿತು ಬಿಜೆಪಿ ಚಕಾರ ಎತ್ತುತ್ತಿಲ್ಲ ಎಂದರು.