Karnataka Politics: ಕುತೂಹಲ ಮೂಡಿಸಿದ ಯಡಿಯೂರಪ್ಪ ಪುತ್ರನ ಹೇಳಿಕೆ

By Girish Goudar  |  First Published Mar 16, 2022, 4:30 AM IST

*  ಉಪಾಧ್ಯಕ್ಷನಾಗಿ ತೃಪ್ತ, ಸಚಿವ ಸ್ಥಾನಕ್ಕೂ ಸಿದ್ಧ: ವಿಜಯೇಂದ್ರ
*  ಜವಾಬ್ದಾರಿಗೆ ರೆಡಿ
*  ಚುನಾ​ವಣಾ ಫಲಿ​ತಾಂಶ​ದಿಂದ ಕಾಂಗ್ರೆಸ್‌ ಪಕ್ಷ​ದ​ವರು ಹತಾ​ಶ​ರಾಗಿದ್ದಾರೆ 
 


ಹಾಸ​ನ(ಮಾ.16):  ಬಿಜೆಪಿ(BJP) ರಾಜ್ಯ ಉಪಾ​ಧ್ಯ​ಕ್ಷ​ನಾಗಿ ಕೆಲಸ ಮಾಡಿದ ಬಗ್ಗೆ ನನಗೆ ಸಂತೃಪ್ತಿ ಇದೆ. ಒಂದು ವೇಳೆ ಸಂಪುಟ ಪುನಾ​ರ​ಚನೆ ವೇಳೆ ಸಚಿ​ವ ಸ್ಥಾನ ಕೊಟ್ಟರೆ ನಿಭಾ​ಯಿ​ಸಲು ಸಿದ್ಧ ಎಂದು ಬಿಜೆ​ಪಿ ರಾಜ್ಯ ಉಪಾ​ಧ್ಯಕ್ಷ ಬಿ.ವೈ.ವಿಜ​ಯೇಂದ್ರ(BY Vijayendra) ಹೇಳಿ​ದ​ರು.

ನಗ​ರ​ದಲ್ಲಿ ಮಂಗ​ಳ​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾ​ಡಿದ ಅವರು, ಕ್ಯಾಬಿನೆಟ್‌ ವಿಸ್ತರಣೆ(Cabinet Expansion) ಹಾಗೂ ಪುನರ್‌ರಚನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ಹೈಕಮಾಂಡ್‌ ಜೊತೆ ಸೇರಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಿ.ಟಿ.ರವಿ(CT Ravi) ಅವರು ಬಿಜೆ​ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಸಂಪುಟ ಪುನಾರಚನೆ ವಿಚಾರದಲ್ಲಿ ಅವರ ಮಾತನ್ನು ನಾವು ಪರಿಗಣಿಸಬೇಕು ಎಂದರು.

Tap to resize

Latest Videos

ಕರುನಾಡು ಕೈವಶಕ್ಕೆ ಬಿಜೆಪಿ ಹೈಕಮಾಂಡ್‌ ಬತ್ತಳಿಕೆಯಲ್ಲಿ ವಿಜಯೇಂದ್ರ ಅಸ್ತ್ರ

ಕಾಂಗ್ರೆ​ಸ್‌ಗೆ ವ್ಯಂಗ್ಯ:

ಕಾಂಗ್ರೆಸ್‌(Congress) ನಾಯಕರು ಯಾವಾಗ ಚುನಾವಣೆ(Election) ನಡೆದರೂ ಎದುರಿಸಲು ಸಿದ್ಧ ಎಂದು ಹಿಂದೆ ಹೇಳು​ತ್ತಿ​ದ್ದರು. ಆದರೆ ಅವರು ಚುನಾ​ವ​ಣೆ ಎದು​ರಿ​ಸಲು ಸಿದ್ಧ​ರಿ​ದ್ದಾರಾ ಅಂತ ಈಗ ಕೇಳಿ ನೋಡಿ ಎಂದು ವ್ಯಂಗ್ಯ​ವಾ​ಡಿದ ವಿಜ​ಯೇಂದ್ರ, ನಾಲ್ಕು ರಾಜ್ಯ​ಗಳ ಚುನಾ​ವಣಾ ಫಲಿ​ತಾಂಶ​ದಿಂದ ಕಾಂಗ್ರೆಸ್‌ ಪಕ್ಷ​ದ​ವರು ಹತಾ​ಶ​ರಾಗಿದ್ದಾರೆ ಎಂದರು.

ಜವಾಬ್ದಾರಿಗೆ ರೆಡಿ

ಬಿಜೆಪಿ ರಾಜ್ಯ ಉಪಾ​ಧ್ಯ​ಕ್ಷ​ನಾಗಿ ಕೆಲಸ ಮಾಡಿದ ಬಗ್ಗೆ ನನಗೆ ಸಂತೃಪ್ತಿ ಇದೆ. ಸಂಪುಟ ಪುನಾ​ರ​ಚನೆ ವೇಳೆ ಸಚಿ​ವ ಸ್ಥಾನ ಕೊಟ್ಟರೆ ನಿಭಾ​ಯಿ​ಸಲು ಸಿದ್ಧ. ಸಂಪುಟ ಪುನಾರಚನೆ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ಮಾತನ್ನು ನಾವು ಪರಿಗಣಿಸಬೇಕು ಅಂತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.  

ವಿಜಯೇಂದ್ರಗೆ ದೊಡ್ಡ ಹುದ್ದೆಯೋ, ಮಂತ್ರಿಗಿರಿಯೋ?

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರರೂ ಆಗಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಸಿಗಲಿದೆಯೇ ಅಥವಾ ಪಕ್ಷದ ಸಂಘಟನೆಯಲ್ಲಿ ಬಡ್ತಿ ಕೊಡುವ ಮೂಲಕ ಹೆಚ್ಚು ಜವಾಬ್ದಾರಿ ಹೊಂದಿರುವ ದೊಡ್ಡ ಸ್ಥಾನ ನೀಡಲಾಗುತ್ತದೆಯೇ ಎಂಬುದು ಕುತೂಹಲಕರವಾಗಿದೆ.

ಬರುವ ಏಪ್ರಿಲ್‌ ತಿಂಗಳಲ್ಲಿ ರಾಜ್ಯದ ಸರ್ಕಾರ ಮತ್ತು ಬಿಜೆಪಿ (BJP) ಸಂಘಟನೆಯ ಸ್ವರೂಪದಲ್ಲಿ ಕೆಲವು ಮಹತ್ತರ ಬದಲಾವಣೆ ಆಗುವ ಸಾಧ್ಯತೆಯಿದ್ದು, ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಯಡಿಯೂರಪ್ಪ ಅವರನ್ನೂ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಸದುದ್ದೇಶದಿಂದ ಪುತ್ರ ವಿಜಯೇಂದ್ರ ಅವರಿಗೆ ಪ್ರಮುಖ ಸ್ಥಾನ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಪಕ್ಷದ ವರಿಷ್ಠರಲ್ಲಿ ವ್ಯಕ್ತವಾಗಿದೆ.

ಸಚಿವ ಸ್ಥಾನ ನೀಡಿದಲ್ಲಿ ವಿಜಯೇಂದ್ರ ಅವರನ್ನು ಪಕ್ಷದ ಸಂಘಟನೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಸಾಧ್ಯವಾಗಲಿಕ್ಕಿಲ್ಲ. ಅದರ ಬದಲು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಥವಾ ಹೊಸದಾಗಿ ಕಾರ್ಯಾಧ್ಯಕ್ಷರಂಥ ಹುದ್ದೆಯನ್ನು ಸೃಷ್ಟಿಸಿ ಅವರ ಸಂಘಟನಾ ಶಕ್ತಿ ಬಳಸಿಕೊಳ್ಳುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ

Karnataka Politics ದಿಲ್ಲಿಯಲ್ಲಿ ನಡ್ಡಾ-ವಿಜಯೇಂದ್ರ ಭೇಟಿ

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುವ ವೇಳೆ ವಿಜಯೇಂದ್ರ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಯಿತು. ಆದರೆ, ಬಿಜೆಪಿ ಸಂಘಟನಾ ಸ್ವರೂಪದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಅಧಿಕಾರವಿಲ್ಲ. ಜವಾಬ್ದಾರಿಯೂ ಇಲ್ಲ. ಆ ವೇಳೆಯೇ ವಿಜಯೇಂದ್ರ ಅವರು ಪ್ರಧಾನ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿಯಾಗಿದ್ದರೂ ವರಿಷ್ಠರು ಮೊದಲು ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿ ಎಂಬ ಸಲಹೆ ನೀಡಿದ್ದರು.

ಈ ಹಿಂದೆಯೇ ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿದಾಗ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ತಮ್ಮ ಸಂಘಟನಾ ಚಾತುರ್ಯ ತೋರಿದ್ದ ವಿಜಯೇಂದ್ರ ಅವರಿಗೆ ಬಳಿಕ ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನ ನೀಡಿದಾಗ ಸಂಘಟನೆಯಲ್ಲಿ ತೊಡಗಿಸಿಕೊಂಡರೂ ಅಷ್ಟಾಗಿ ಫಲ ನೀಡಲಿಲ್ಲ. ಅದಕ್ಕೆ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಅಧಿಕಾರ ಅಥವಾ ಜವಾಬ್ದಾರಿ ಇಲ್ಲದಿರುವುದು. ಹೀಗಾಗಿಯೇ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಅವರ ಬೆಂಬಲಿಗರಿಂದ ಬಲವಾಗಿ ಕೇಳಿಬಂದಿತ್ತು.

click me!