
ನವದೆಹಲಿ (ಫೆ. 12): ದಿಲ್ಲಿ ಕರ್ನಾಟಕ ಭವನದಲ್ಲಿ ಪಾನಗೋಷ್ಠಿ ನಡೆಸಿ ಉದ್ಧಾಮ ಸಾಹಿತಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ಉಗಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ.
ಆದರೆ ಇದಾದ ಮರುದಿನ ಬೆಳಿಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅಷ್ಟೂಸಂಸದರು ಪತ್ರಿಕಾಗೋಷ್ಠಿ ಮಾಡುತ್ತೇವೆ ಜಾಗ ಕೊಡಿ ಎಂದರೂ ಹಿಂದಿನ ರಾತ್ರಿಯ ಘಟನೆಯ ಹೆದರಿಕೆಯಲ್ಲಿದ್ದ ಅಧಿಕಾರಿಗಳು ಏನೇ ಮಾಡಿದರೂ ಸಂಸದರಿಗೆ ಒಂದು ಕೋಣೆ ಕೊಡಲು ತಯಾರಿರಲಿಲ್ಲ. ಉಗ್ರಪ್ಪ , ಡಿ ಕೆ ಸುರೇಶ್, ಧ್ರುವನಾರಾಯಣ ಫೋನ್ ಮಾಡಿ ಪರಿಪರಿಯಾಗಿ ವಿನಂತಿಸಿದರೂ ಆಯುಕ್ತ ನಿಲಯ್ ಮಿತಾಶ ಕ್ಯಾರೇ ಅಂದಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಸಂಸದರು ಭವನದ ಹೊರಗಡೆ ಬಂದು ಪತ್ರಿಕಾಗೋಷ್ಠಿ ನಡೆಸಬೇಕಾಯಿತು. ಈ ಬಾರಿ ಫಾರ್ ಎ ಚೇಂಜ್ ‘ಸಾಹಿತಿಗಳ ಚೆಲ್ಲಾಟ ರಾಜಕಾರಣಿಗಳ ಪರದಾಟ’ಕ್ಕೆ ಕಾರಣವಾಯಿತು.
- ಇಂಡಿಯಾ ಗೇಟ್, ಪ್ರಶಾಂತ್ ನಾತು
ರಾಜಕಾರಣದ ಸುದ್ಧಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.