ದೇಶದ ನಾರಿ ಶಕ್ತಿ ಮತ್ತು ಮಾತೃ ಸಂಕಲ್ಪದ ಆಶೀರ್ವಾದ ಮತ್ತು ಸುರಕ್ಷಾ ಕವಚದಿಂದಾಗಿ ಈ ರೀತಿಯ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ (ಏ.21): ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ದೇಶ, ವಿದೇಶದ ಪ್ರಭಾವಿ ವ್ಯಕ್ತಿಗಳು ಒಂದಾಗಿದ್ದಾರೆ. ಆದರೆ, ದೇಶದ ನಾರಿ ಶಕ್ತಿ ಮತ್ತು ಮಾತೃ ಸಂಕಲ್ಪದ ಆಶೀರ್ವಾದ ಮತ್ತು ಸುರಕ್ಷಾ ಕವಚದಿಂದಾಗಿ ಈ ರೀತಿಯ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಇಲ್ಲಿ ತಾಯಂದಿರು ಮತ್ತು ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದೀರಿ.
ನಿಮ್ಮ ಹೋರಾಟ ಮತ್ತು ಕುಟುಂಬವನ್ನು ಸಲಹಲು ನೀವು ಎದುರಿಸುವ ಸವಾಲುಗಳನ್ನು ನಾನು ನನ್ನ ಮನೆಯಲ್ಲೇ ನೋಡಿದ್ದೇನೆ. ಇತ್ತೀಚೆಗೆ ದೇಶ ಮತ್ತು ವಿದೇಶದ ದೊಡ್ಡ ಮತ್ತು ಪ್ರಭಾವಿ ವ್ಯಕ್ತಿಗಳು ಒಂದಾಗಿ ನನ್ನನ್ನು ಅಧಿಕಾರದಿಂದ ತೆಗೆಯಲು ಒಂದಾಗಿದ್ದಾರೆ. ನಿಮ್ಮ ಆಶೀರ್ವಾದದಿಂದ ನಾನು ಆ ಸವಾಲನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದರು. ಮಹಿಳೆಯರ ಕಲ್ಯಾಣಕ್ಕಾಗಿ ಲಖ್‌ಪತಿ ದೀದಿ, ಡ್ರೋನ್ ಹಾರಿಸುವ ತರಬೇತಿ ಸೇರಿದಂತೆ ಕೇಂದ್ರ ಸರ್ಕಾರ 10 ವರ್ಷಗಳಲ್ಲಿ ಜಾರಿಗೆ ತಂದ ಯೋಜನೆಗಳನ್ನು ತಮ್ಮ ಭಾಷಣದಲ್ಲಿ ಪಟ್ಟಿ ಮಾಡಿದ ಮೋದಿ, ದೇಶದ ತಾಯಂದಿರು ಮತ್ತು ಹೆಣ್ಣುಮಕ್ಕಳ ಸೇವೆ ಮತ್ತು ಅವರ ರಕ್ಷಣೆಯೇ ಮೋದಿಯ ಪ್ರಥಮ ಆದ್ಯತೆ ಎಂದರು.
ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಒಕ್ಕೂಟಕ್ಕೆ ನಾಯಕನಾಗಲಿ, ದೂರದೃಷ್ಟಿ ಮತ್ತು ಭವಿಷ್ಯವಾಗಲಿ ಇಲ್ಲ. ಇದ್ದರೆ ಅದು ಹಗರಣದ ಇತಿಹಾಸ ಮಾತ್ರ ಎಂದು ಇದೇ ವೇಳೆ ಮೋದಿ ವ್ಯಂಗ್ಯವಾಡಿದರು. ನಾನು ದೇಶದ ಜನರ ಒಳಿತಿಗಾಗಿ ಹಗಲು, ರಾತ್ರಿ ಕೆಲಸ ಮಾಡುತ್ತಿದ್ದೇನೆ. 2047ರ ದೂರದೃಷ್ಟಿ ಇಟ್ಟುಕೊಂಡು ದಿನದ 24 ಗಂಟೆ ಕೆಲಸ ಮಾಡುತ್ತಿದ್ದೇನೆ. ನಾನು ಸದುದ್ದೇಶದಿಂದ ಯೋಜನೆಗಳನ್ನು ರೂಪಿಸುತ್ತೇನೆ ಮತ್ತು ಆ ಯೋಜನೆಗಳ ಅನುಷ್ಠಾನದ ಗ್ಯಾರಂಟಿಯನ್ನೂ ಕೊಡುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ತಾಲಿಬಾನ್ ಆಡಳಿತ ಇದೆಯೇ?: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ
ದೇವೇಗೌಡರ ಬಗ್ಗೆ ಶ್ಲಾಘನೆ: ಇದೇ ವೇಳೆ ವೇದಿಕೆಯಲ್ಲಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಹೊಗಳಿದ ಮೋದಿ, 90ರ ಹರೆಯದಲ್ಲೂ ಅವರ ಮಾತಿನಲ್ಲಿರುವ ಹುಮ್ಮಸ್ಸು ಮತ್ತು ಕರ್ನಾಟಕದ ಕುರಿತಾದ ಬದ್ಧತೆ ಅವರ ಧ್ವನಿಯಲ್ಲಿ ಕಾಣುತ್ತಿದೆ. ಅವರ ಮಾತಿನಿಂದ ನಾನೂ ಪ್ರೇರಣೆ ಪಡೆದಿದ್ದೇನೆ ಎಂದರು. ಲೋಕಸಭೆಗೆ ಮೊದಲ ಹಂತದಲ್ಲಿ ನಡೆದ ಮತದಾನವು ದೇಶ