
ಪೀಣ್ಯ ದಾಸರಹಳ್ಳಿ(ಏ.09): ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸುಭದ್ರವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಭದ್ರತೆ ಹಾಗೂ ಗಡಿಗಳ ರಕ್ಷಣೆಗಾಗಿ ಮೋದಿಯವರು ದುಡಿದಿದ್ದಾರೆ ಎಂದು ಉತ್ತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಬಾಗಲಗುಂಟೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಚುನಾವಣಾ ಕಚೇರಿ ಉದ್ಘಾಟಿಸಿ ಸಭೆಯಲ್ಲಿ ಮಾತನಾಡಿದರು.
ವಿದೇಶದಲ್ಲಿಯೂ ಕೂಡ ಭಾರತೀಯರೆಂದರೆ ಹೆಚ್ಚಿನ ಗೌರವ ಸಿಗುತ್ತದೆ. ಅದಕ್ಕೆ ಕಾರಣ ಮೋದಿಯವರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೂಡ ಮೋದಿಯವರಿಗೆ ಎದ್ದು ನಿಂತು ಅಲ್ಲಿನ ಪ್ರಧಾನಿಗಳು ಕೆಂಪು ಹಾಸಿನ ಸ್ವಾಗತ ಮಾಡುತ್ತಿದ್ದಾರೆ. ಇದು ನಮ್ಮ ದೇಶಕ್ಕೆ ಸಿಗುತ್ತಿರುವ ಗೌರವ ಎಂದರು.
Loksabha Eection 2024: ಬೆಂಗಳೂರು ಉತ್ತರದಲ್ಲಿ ಯಾರ ಬಲ ಹೇಗಿದೆ ? ಏನಂತಾರೆ ಜನ ?
ದೇಶದ ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಇಲಾಖೆ ಬದಲಾವಣೆ, ಪ್ರತಿ ಹಳ್ಳಿಗಳಿಗೂ ರಸ್ತೆ ನಿರ್ಮಾಣ ಮಾಡಿಸಿದ್ದಾರೆ. ಜನಸಾಮಾನ್ಯರ ಬದುಕಿಗಾಗಿ ಮನೆಗಳು, ಶೌಚಾಲಯಗಳು, ವಿದ್ಯುತ್, ಆಯುಷ್ಮಾನ್ ಕಾರ್ಡ್, ಜನ ಔಷಧಿ ಕೇಂದ್ರಗಳು, ಉಜ್ವಲ ಗ್ಯಾಸ್ ನೀಡಿದವರು ನರೇಂದ್ರ ಮೋದಿ ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಶಕ್ತಿಯಿಂದ ಮತ್ತೊಮ್ಮೆ ಮೋದಿಯವರಿಗೆ ಬೆಂಬಲ ಸಿಗಬೇಕು. ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ದೇಶದ ಅಭಿವೃದ್ಧಿ ಮತ್ತು ಮೋದಿಜಿ ಅವರ ಸಾಧನೆಯ ತಿಳಿಸಬೇಕು ಎಂದರು.
ಶಾಸಕ ಎಸ್.ಮುನಿರಾಜು ಮಾತನಾಡಿ, ಎನ್‌ಡಿಎ ಮೈತ್ರಿ ಕೂಟದಲ್ಲಿ ಭಾಗಿಯಾಗುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ಕಾರ್ಯಕ್ಕೆ ಜೆಡಿಎಸ್ ಹಾಗೂ ಬಿಜಿಪಿ ಮುಖಂಡರು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರಿನ ಡೋರ್‌ಗೆ ಡಿಕ್ಕಿ ಹೊಡೆದು ಬಿಜೆಪಿ ಕಾರ್ಯಕರ್ತ ಸಾವು!
ದೇವೇಗೌಡರ ನೆರಳಿನಲ್ಲಿ ಬೆಳೆದ ಸಿದ್ದರಾಮಯ್ಯಇಂದು ಅವರನ್ನೇ ಏಕವಚನದಲ್ಲಿ ಮಾತಾನಾಡುತ್ತಾರೆ. ಅಂತಹವರಿಗೆ ನಾವು ನೀವು ತಕ್ಕ ಪಾಠ ಕಲಿಸಬೇಕು. ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದಲ್ಲಿ ಪರಿವರ್ತನೆಯಾಗಿದೆ. ಅದಕೋಸ್ಕರ ದೇವೇಗೌಡರು ಎನ್‌ಡಿಎ ಜೊತೆ ಕೈಜೋಡಿಸಿ ದೇಶದಲ್ಲಿ ಕಾಂಗ್ರೆಸ್ ಕಿತ್ತೊಗೆರಯರಿ ಎಂಬ ಸಂದೇಶ ನೀಡಿದ್ದಾರೆ. ಬಿಟ್ಟಿ ಭಾಗ್ಯಗಳಿಗೋಸ್ಕರ 1ಲಕ್ಷದ 3ಸಾವಿರ ಕೋಟಿ ಸಾಲ ಮಾಡಿದ್ದಾರೆ. ರಾಜ್ಯವನ್ನು ಸಾಲಗಾರರನ್ನಾಗಿ ಮಾಡಿ ಅದೋಗತಿಗೆ ತಂದಿದ್ದಾರೆ. ನಿಮಗೆ ಧೈರ್ಯವಿದ್ದರೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿ. 40 ಸ್ಥಾನಗಳು ಸಿಗದಂತಹ ಪರಿಸ್ಥಿತಿ ರಾಜ್ಯದಲ್ಲಿ ಇದೆ ಎಂದು ಕಿಡಿಕಾರಿದರು.
ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಅಂದಾನಪ್ಪ, ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ.ಮುನಿಸ್ವಾಮಿ, ನೆ.ಲ.ನರೇಂದ್ರ ಬಾಬು, ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹರೀಶ್, ಬಿಜೆಪಿ ಮಂಡಲ ಅಧ್ಯಕ್ಷ ಸೋಮಶೇಖರ್, ಶೆಟ್ಟಿಹಳ್ಳಿ ವಾರ್ಡ್ ಅಧ್ಯಕ್ಷ ಬಿ.ಸುರೇಶ್, ಬಿಜೆಪಿ ಮುಖಂಡರಾದ ಟಿ.ಎಸ್.ಗಂಗರಾಜು, ಪಿ.ಎಚ್.ರಾಜು, ಬಿ.ಎಂ.ನಾರಾಯಣ್, ಕೃಷ್ಣಮೂರ್ತಿ, ಭರತ್ ಸೌಂದರ್ಯ, ನಾಗಣ್ಣ, ಬಿ.ಟಿ.ಶ್ರೀನಿವಾಸ್, ನಿಸರ್ಗ ಕೆಂಪರಾಜು, ಪಾಂಡುರಂಗ ರಾವ್, ಟಿ.ಶಿವಕುಮಾರ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.