
ಕಲಬುರಗಿ(ಸೆ.19): ಕಾಂಗ್ರೆಸ್ ಸೇರಿ ಹಲವಾರು ಪಕ್ಷಗಳ ಕೂಟವಾಗಿರುವ ಇಂಡಿಯಾ ಒಕ್ಕೂಟ ಯಾವುದೇ ಧರ್ಮದ ವಿರೋಧಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗಾಗಿ ಧರ್ಮ ಇರಬೇಕೆ ಹೊರತು ಧರ್ಮಕ್ಕಾಗಿ ಧಮರ್ಮ ಇರುವುದು ಬೇಡ. ದಯ, ಕರುಣೆ, ಮಾನವೀಯ ಮೌಲ್ಯಗಳೊಂದಿಗೆ ಧರ್ಮ ಜನರನ್ನು ಪೊರೆಯಬೇಕು. ಧರ್ಮ ನಮ್ಮ ಬದುಕಿನ ದಾರಿಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಕಲ್ಯಾಣ ರಾಜ್ಯ ಸಂಕಲ್ಪ ಸಾಕಾರಕ್ಕೆ ಬದ್ಧ: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ 3 ಡಿಸಿಎಂಗಳು ಬೇಕೆಂದು ಸಚಿವ ರಾಜಣ್ಣ ಪತ್ರ ಬರೆಯೋದಾಗಿ ಹೇಳಿದ್ದಾರಲ್ಲ ಎಂದು ಗಮನ ಸೆಳೆದಾಗ ಈಗಾಗಲೇ ಒಬ್ಬರು ಡಿಸಿಎಂ ಇದ್ದಾರೆ. ರಾಜಣ್ಣ ಹೀಗೆ ಹೇಳಿದ್ದಾರೆ. ಇವೆಲ್ಲ ವಿಚಾರ ಹೈಕಮಾಂಡ್ ತೀರ್ಮಾನಿಸಲಿದೆ. ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ತಾವು ಪಾಲಿಸೋದಾಗಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.