ಧೀರಜ್ ಸಾಹು ಐಟಿ ದಾಳಿ ಕೇಸ್‌; ಇಂಡಿ ಒಕ್ಕೂಟ ಮೌನಕ್ಕೆ ಶರಣಾಗಿದೆ: ಅಮಿತ್‌ ಶಾ

By Suvarna NewsFirst Published Dec 11, 2023, 2:51 PM IST
Highlights

ಕಾಂಗ್ರೆಸ್ ಸಂಸದ ಧೀರಜ್ ಸಾಹು ಭ್ರಷ್ಟಚಾರ ವಿರುದ್ಧ ಇಂಡಿಯಾ ಒಕ್ಕೂಟ ಮೌನಕ್ಕೆ ಶರಣಾಗಿರುವುದ್ಯಾಕೆ? ಪ್ರತಿಪಕ್ಷಗಳು ತಮ್ಮ ಭ್ರಷ್ಟಾಚಾರ ಬಹಿರಂಗಗೊಳ್ಳುವ ಭಯದಲ್ಲಿವೆ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಾಗ್ದಾಳಿ 

ಪಾಟ್ನಾ (ಡಿ.11): ಜಾರ್ಖಂಡ್ನ ಕಾಂಗ್ರೆಸ್ ಸಂಸದ ಧೀರಜ್ ಸಾಹುವಿಗೆ (Dhiraj Prasad Sahu) ಸಂಬಂಧಿಸಿದ ನಿವೇಶನ ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನೆಡೆಸಿದ್ದು, ಸುಮಾರು 350 ಕೋಟಿಗೂ ಅಧಿಕ ನಗದು ವಶಪಡಿಸಿಕೊಂಡಿರುವ ಕುರಿತು ರಾಹುಲ್ ಗಾಂಧಿ (Rahul Gandhi )ಮತ್ತು ಇತರ ವಿರೋಧ ಪಕ್ಷದ ನಾಯಕರು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಾಯಿಸಿದ್ದಾರೆ. 

ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಪ್ರತಿಪಕ್ಷಗಳ ಹಿಂದಿನ ಹೇಳಿಕೆಗಳು ಕೇವಲ ಪ್ರಚಾರವಾಗಿದ್ದು, ಸ್ವಾತಂತ್ರ್ಯದ ನಂತರ ಸಂಸದರೊಬ್ಬರ ಮನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದು, ನನಗೆ ತುಂಬಾ ಆಶ್ಚರ್ಯವಾಗಿದೆ. ಇಷ್ಡು ದೊಡ್ಡ ಪ್ರಮಾಣದ ಹಣ ವಸೂಲಿಯಾದರೂ ಇಂಡಿಯಾ ಮೈತ್ರಿಕೂಟ (INDIA Alliance ) ಮಾತ್ರ ಮೌನವಾಗಿದೆ. ಭ್ರಷ್ಟಾಚಾರ ಕಾಂಗ್ರೆಸ್ (Congress) ಸ್ವಭಾವದಲ್ಲಿಯೇ ಇರುವುದರಿಂದ ಕಾಂಗ್ರೆಸ್ ಮೌನಕ್ಕೆ ಶರಣಾಗಿದೆ. ಆದರೆ ಜೆಡಿಯು, ಆರ್ಜೆಡಿ, ಡಿಎಂಕೆ ಮತ್ತು ಎಸ್ಪಿ ಏಕೆ ಮೌನವಾಗಿ ಕುಳಿತಿವೆ” ಎಂದು ಶಾ ಪ್ರಶ್ನಿಸಿದ್ದಾರೆ. 

Latest Videos

ಇದನ್ನೂ ಓದಿ: ಐತಿಹಾಸಿಕ ಬಿಲ್; J&K ಅಸೆಂಬ್ಲಿಯಲ್ಲಿ ಕಾಶ್ಮೀರಿ ಪಂಡಿತರು, PoK ನಿರಾಶ್ರಿತರಿಗೆ ಸೀಟು ಕಾಯ್ದಿರಿಸಿದ ಕೇಂದ್ರ!

ಪೂರ್ವ ವಲಯ ಕೌನ್ಸಿಲ್ ಸಭೆಯಲ್ಲಿ (Eastern Zonal Council meeting) ಪಾಲ್ಗೊಳ್ಳಲು ಪಾಟ್ನಾಗೆ ಬಂದಿದ್ದ ಅಮಿತ್ ಶಾ (Amit Shah) ವಿರೋಧ ಪಕ್ಷಗಳು, ಅದರಲ್ಲೂ ನಿರ್ದಿಷ್ಟವಾಗಿ ಇಂಡಿಯಾ ಮೈತ್ರಿಕೂಟದ ಸದಸ್ಯರು ಈ ವಿಷಯದ ಬಗ್ಗೆ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರ ರಹಸ್ಯ ಬಹಿರಂಗ: ಪ್ರಧಾನಿ ಮೋದಿ (Narendra Modi)  ತನಿಖಾ ಏಜೆನ್ಸಿಗಳನ್ನು (Investigative Agencies) ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಹೇಳಿಕೆಗೆ ಕಾರಣವೇನು ಎಂಬುದು ನನಗೆ ಈಗ ಅರ್ಥವಾಗುತ್ತಿದೆ. ಅವರ ಭ್ರಷ್ಟಾಚಾರದ ರಹಸ್ಯ ಬಹಿರಂಗಗೊಳ್ಳುತ್ತದೆ ಎಂಬ ಭಯದಿಂದ ಹೀಗೆ ಆರೋಪ ಮಾಡುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದರು.

ಇದನ್ನೂ ಓದಿ: ಭಾರತದ 2 ಪ್ರಧಾನಿ, 2 ಸಂವಿಧಾನ, 2 ಧ್ವಜ ಪ್ರಮಾದ ಸರಿಪಡಿಸಿದ ಮೋದಿ, ಶಾ ಮಾತಿಗೆ ಸದನ ಸೈಲೆಂಟ್!

ಇನ್ನಾ ಸಾಹುವಿನ ವ್ಯಾಪಾರ ವಹಿವಾಟುಗಳಿಗೂ ಕಾಂಗ್ರೇಸ್ ಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಪಾದಿಸುವ ಮೂಲಕ ಸಾಹುವಿನಿಂದ ಕಾಂಗ್ರೇಸ್ ದೂರ ಉಳಿದರೆ, ಗ್ರ್ಯಾಂಡ್ ಓಲ್ಡ್ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಬಲಪಡಿಸಲು ಬಿಜೆಪಿ ಮುಂದಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪಕ್ಷದ ಬದ್ಧತೆಯನ್ನು ಒತ್ತಿಹೇಳುವ ಮೂಲಕ ಬಿಜೆಪಿ (BJP) ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರಲಿದೆ ಎಂದು ಶಾ ಪ್ರತಿಜ್ಞೆ ಮಾಡಿದರು.  

-ಸಿಂಧು ಕೆ ಟಿ 
ಕುವೆಂಪು ವಿಶ್ವವಿದ್ಯಾಲಯ 

click me!