ಕಾಂಗ್ರೆಸ್ ಪಕ್ಷದಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ವ್ಯಂಗ್ಯವಾಡಿದ್ದಾರೆ. ಆಗಿನ ಕಾಂಗ್ರೆಸ್ಸೇ ಬೇರೆ. ಈಗಿರುವುದು ನಕಲಿ ಕಾಂಗ್ರೆಸ್ , ನಕಲಿ ಗಾಂಧಿಗಳು ಎಂದಿದ್ದಾರೆ.
ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್
ಹಾವೇರಿ ( ಅಗಸ್ಟ್ 14): ಕಾಂಗ್ರೆಸ್ ಪಕ್ಷದಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ವ್ಯಂಗ್ಯವಾಡಿದ್ದಾರೆ. ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶಿಗ್ಗಾವಿಗೆ ಆಮಿಸಿದ್ದ ಅವರು, ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತಾಡಿದರು. ಕಾಂಗ್ರೆಸ್ ನವರು ಇದರಲ್ಲಿ ರಾಜಕೀಯ ಮಾಡಬಾರದಿತ್ತು. ಕಾಂಗ್ರೆಸ್ ಮತ್ತು ಅನೇಕ ಘಟನೆಗಳು, ಕ್ರಾಂತಿಕಾರಿಗಳ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಈಗಿರುವ ಕಾಂಗ್ರೆಸ್ ನವರು ಒರಿಜಿನಲ್ ಕಾಂಗ್ರೆಸ್ ನವರಲ್ಲ. ಈ ಕಾಂಗ್ರೆಸ್ ಗೂ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಇದ್ದ ಆಗಿನ ಕಾಂಗ್ರೆಸ್ ಗೂ ಸಂಬಂಧವೇ ಇಲ್ಲ. ಇದು ಡುಬ್ಲಿಕೇಟ್ ಕಾಂಗ್ರೆಸ್, ಮತ್ತು ಈಗಿರುವವರು ಡುಬ್ಲಿಕೇಟ್ ಗಾಂಧಿಗಳು.ಅಂದಿನ ಹೋರಾಟವನ್ನು ನಮ್ಮ ಹೋರಾಟ ಎಂದು ಕ್ಲೇಮ್ ಮಾಡಿಕೊಳ್ಳಲು ಇವರಿಗೆ ಯಾವುದೇ ಅರ್ಹತೆ ಇಲ್ಲ. ಕಾಂಗ್ರೆಸ್ ನವರಿಗೆ ಯಾವುದೇ ನೈತಿಕ ಅಧಿಕಾರ ಇಲ್ಲ. ಈಗಿರುವುದು 'ಐ' ಕಾಂಗ್ರೆಸ್ ಅಂದರೆ ಇಂದಿರಾ ಕಾಂಗ್ರೆಸ್. ಇದರಲ್ಲಿ ಬ್ರಷ್ಟರು, ದೇಶಕ್ಕೆ ಸುಳ್ಳು ಹೇಳಿರುವರು ಬಂದಿದ್ದಾರೆ. ಇದೊಂದು ನಕಲಿ ಕಾಂಗ್ರೆಸ್, ಮತ್ತು ನಕಲಿ ಗಾಂಧಿಗಳ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅಧೀಕೃತವಾಗಿ 1980 ರಲ್ಲಿ ಬಂತು. ಹಿಂದಿನ ಲೆಕ್ಕ ತೆಗೆದರೆ ನಮ್ಕ ಜನ ಸಂಘ ಬಂದಿದ್ದು 1952 ರಲ್ಲಿ. ಇದಕ್ಕಿಂತ ಮೊದಲು ನಮ್ಮ ಸಂಘ ಪರಿವಾರದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಆದರೆ ಇವರೆಲ್ಲಿ ಭಾಗವಹಿಸಿದ್ರು? ಆ ಬಗ್ಗೆ ನಾನು ಚರ್ಚೆ ಮಾಡಲ್ಲ. ಆಗಿನ ಕಾಂಗ್ರೆಸ್ಸೇ ಬೇರೆ , ಈಗಿನ ಕಾಂಗ್ರೆಸ್ಸೇ ಬೇರೆ. ನಾವು ಹೋರಾಟ ಮಾಡಿದ್ದೆವು ಅನ್ನೋಕೆ ಇವರಿಗೆಲ್ಲಿ ಅಧಿಕಾರ ಇದೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕರನ್ನು ಭಿಕ್ಷುಕರಂತೆ ಕಾಣಲಾಗುತ್ತಿದೆ: ಶಾಸಕ ಕೆ.ವೈ ನಂಜೇಗೌಡ
ಶಿವಮೊಗ್ಗದಲ್ಲಿ ಸಾವರ್ಕರ್ ಬ್ಯಾನರ್ ಹರಿದು ಹಾಕಿದ ವಿಚಾರವಾಗಿ ಮಾತನಾಡಿದ ಪ್ರಹ್ಲಾದ ಜೋಷಿ, ಆ ರೀತಿ ಯಾರೂ ಮಾಡಬಾರದು.
ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಗೆ ಯಾರೂ ಹೋಲಿಸಬಾರದು. ಸೌಹಾರ್ದತೆ ಯಾರೂ ಹಾಳು ಮಾಡಬಾರದು. ಬ್ಯಾನರ್ ಗಳ ಬಗ್ಗೆ ಆಕ್ಷೇಪಣೆ ಇದ್ದರೆ ಕಾನೂನಿನ ಮೂಲಕ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲಿ.ನಾನು ಎಲ್ಲರಿಗೂ ಇದನ್ನ ಸಲಹೆ ಕೊಡ್ತಾ ಇದ್ದೇನೆ ಎಂದರು.
INDIA@75: ಭಾಲ್ಕಿಯಲ್ಲಿ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯಅಮೃತ ಮಹೋತ್ಸವ ನಡಿಗೆ
ಇನ್ನು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಜೋಷಿ, ಅದು ಕಾರ್ಪೋರೇಶನ್ ಗೆ ಸೇರಿದ ಮೈದಾನ. ಅಲ್ಲಿ ಯಾರಿಗೆ ಪರ್ಮಿಷನ್ ಕೊಡಬೇಕು ಬಿಡಬೇಕು ಅನ್ನೋ ಬಗ್ಗೆ ಕಾರ್ಪೋರೇಶನ್ ನವರು ತೀರ್ಮಾನ ಮಾಡ್ತಾರೆ. ಅಲ್ಲಿ ಪರ್ಮಿಷನ್ ಕೊಡೋದ್ರ ಬಗ್ಗೆ ಕಾರ್ಪೋರೇಶನ್ ಹಾಗೂ ಅದಕ್ಕೆ ಸಂಬಂಧಿಸಿದ ಲಾ ಇಂಪ್ಲಿಮೆಂಟೇಶನ್ ಏಜನ್ಸಿಗಳು ತೀರ್ಮಾನ ಮಾಡುತ್ತವೆ ಎಂದರು.