ಉಪಚುನಾವಣೆ ಕಣದಲ್ಲೊಂದು ಕೊನೆ ಕ್ಷಣದ ಟ್ವಿಸ್ಟ್/ ರಾಣೇಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ/ ಆದಾಯ ತೆರಿಗೆ ಜತೆಗೆ ಅಬಕಾರಿ ದಾಳಿ/ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಹಾವೇರಿ(ಡಿ. 03) ಉಪಚುನಾವಣೆ ಅಖಾಡದಲ್ಲಿ ಇದ್ದು ಮನೆ ಮನೆ ಪ್ರಚಾರಕ್ಕೆ ಸಜ್ಜಾಗಿದ್ದ ರಾಣೇಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ರಾಣೇಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಮನೆ ಮೇಲೆ ಐಟಿ ಹಾಗೂ ಅಬಕಾರಿ ದಾಳಿ ನಡೆದಿದೆ. ರಾಣೆಬೆನ್ನೂರಿನ ವಾಗೀಶ್ ನಗರ 6ನೇ ಕ್ರಾಸ್ ಬಳಿ ಇರುವ ಮನೆ ಮೇಲೆ ಮಂಗಳವಾರ ರಾತ್ರಿ 10.30ರ ವೇಳೆಗೆ ದಾಳಿ ನಡೆದಿದೆ.
undefined
ಉಪಚುನಾವಣೆ ಅಖಾಡದ ಸಮಗ್ರ ಸುದ್ದಿಗಳು
ಹುಬ್ಬಳ್ಳಿಯ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐಟಿ ದಾಳಿ ಹಿನ್ನೆಲೆ ಪ್ರದೇಶದಲ್ಲಿ ಪೊಲೀಸರ ಬಂದೋಬಸ್ತ್ ಹೆಚ್ಚು ಮಾಡಲಾಗಿದೆ.
ದಾಳಿನಂತರ ವಾಗೀಶ ನಗರದ 6 ನೇ ಕ್ರಾಸ್ ನಲ್ಲಿ ರಸ್ತೆಯ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಗೃಹಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ಧಿಕ್ಕಾರ ಕೂಗಿದ್ದು ಉಪಚುನಾವಣೆ ಸೋಲಿನ ಭಯದಿಂದ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಡಿಸೆಂಬರ್ 5ಕ್ಕೆ ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ.