ಲೋಕಸಭಾ ಚುನಾವಣೆಯಲ್ಲಿ ನಮ್ಮದು ಜನಬಲ, ಕಾಂಗ್ರೆಸ್‌ನದ್ದು ಹಣಬಲ: ಸಿ.ಪಿ.ಯೋಗೇಶ್ವರ್

Published : Jun 01, 2024, 05:34 PM IST
ಲೋಕಸಭಾ ಚುನಾವಣೆಯಲ್ಲಿ ನಮ್ಮದು ಜನಬಲ, ಕಾಂಗ್ರೆಸ್‌ನದ್ದು ಹಣಬಲ: ಸಿ.ಪಿ.ಯೋಗೇಶ್ವರ್

ಸಾರಾಂಶ

ಈ ಚುನಾವಣೆಯಲ್ಲಿ ನಮ್ಮದು ಜನಬಲ, ಕಾಂಗ್ರೆಸ್‌ನವರದ್ದು ಹಣಬಲ. ಡಿಕೆ ಬ್ರದರ್ಸ್‌ರವರ ದೈತ್ಯಶಕ್ತಿ, ಹಣಬಲ, ಅಧಿಕಾರ ಬಲ. ಅವರೇ ಸಮಸ್ಯೆ ಸೃಷ್ಠಿಸಿ ಅವರೇ ಅದನ್ನ ಬಗೆಹರಿಸುತ್ತಾರೆ. ಅಂತವರ ನಡುವೆ ನಮ್ಮದು ರೋಚಕ ಹೋರಾಟ ಎಂದು ಲೋಕಸಭಾ ಚುನಾವಣೆ ಫಲಿತಾಂಶ ವಿಚಾರವಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು. 

ರಾಮನಗರ (ಜೂ.01): ಈ ಚುನಾವಣೆಯಲ್ಲಿ ನಮ್ಮದು ಜನಬಲ, ಕಾಂಗ್ರೆಸ್‌ನವರದ್ದು ಹಣಬಲ. ಡಿಕೆ ಬ್ರದರ್ಸ್‌ರವರ ದೈತ್ಯಶಕ್ತಿ, ಹಣಬಲ, ಅಧಿಕಾರ ಬಲ. ಅವರೇ ಸಮಸ್ಯೆ ಸೃಷ್ಠಿಸಿ ಅವರೇ ಅದನ್ನ ಬಗೆಹರಿಸುತ್ತಾರೆ. ಅಂತವರ ನಡುವೆ ನಮ್ಮದು ರೋಚಕ ಹೋರಾಟ ಎಂದು ಲೋಕಸಭಾ ಚುನಾವಣೆ ಫಲಿತಾಂಶ ವಿಚಾರವಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು. ಈ ಚುನಾವಣೆ ನಮ್ಮ ಲೆಕ್ಕಕ್ಕೇ ಸಿಗ್ತಿಲ್ಲ. ಊಹೆಗೂ ಮೀರಿದ ಫಲಿತಾಂಶ ಬರುತ್ತೆ ಎಂಬ ನಿರೀಕ್ಷೆ ಇದೆ. ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ ಅನ್ನೋ ವಿಶ್ವಾಸ ಇದೆ. ಆದರೂ ಅವರ ಹಣಬಲ ವರ್ಕೌಟ್ ಆಗುತ್ತಾ ನೋಡಬೇಕು. ಚುನಾವಣೆ ಹೊಸ ಹಿಂದಿನ ಮಹಿಳೆಯರಿಗೆ ಎರಡು ಸಾವಿರ ಜಮಾ ಮಾಡಿದ್ದಾರೆ ಎಂದರು.

ಎಲ್ಲರ ಅಕೌಂಟ್‌ಗೆ ಹಣ ಹಾಕಿದ್ದೀವಿ, ಮಹಿಳಾ ಮತದಾರರು ಗೆಲ್ತಾರೆ ಅಂತ ಕಾಂಗ್ರೆಸ್ ನವರು ಹೇಳ್ತಾರೆ. ಕಾದು ನೋಡೊಣ, ಜನಾಭಿಪ್ರಾಯ ಏನಿದೆ ಅನ್ನೋದನ್ನ. ನಾವೇನು ಕಾನ್ಫಿಡೆನ್ಸ್ ಕಳೆದುಕೊಂಡಿಲ್ಲ. ನಮಗೆ ಎರಡೂ ಪಕ್ಷಗಳ ಬಲ, ಶಕ್ತಿ ಇದೆ. ಆದರೆ ಕಾಂಗ್ರೆಸ್ ನವರು ಆಪ್ ದ ರೆಕಾರ್ಡ್ 400-500ಕೋಟಿ ಖರ್ಚು ಮಾಡಿದ್ದೀವಿ ಅಂತವ್ರೆ‌. ಅಷ್ಟು ಖರ್ಚು ಮಾಡಿ ಗೆಲ್ಲಲೇಬೇಕು ಅನ್ನೋ ಹಠ ಇದೆ. ಡಿಕೆಶಿ ಸಿಎಂ ಆಗಬೇಕು ಅಂತ ಆಸೆ ಇಟ್ಕೊಂಡಿದ್ದಾರೆ. ಈ ಚುನಾವಣೆಯಲ್ಲಿ ತಮ್ಮ ಸೋತರೆ ಅವರ ಸಿಎಂ ಕನಸಿಗೆ ಹಿನ್ನಡೆ ಆಗುತ್ತೆ ಅಂತ ಚುನಾವಣೆಗೆ ಖರ್ಚು ಮಾಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಮತದಾರರನ್ನ ಬೆದರಿಸಿದ್ದಾರೆ ಎಂದು ತಿಳಿಸಿದರು,

ನಾವು ಡಾಕ್ಟರ್ ಒಳ್ಳೆತನ ಮುಂದಿಟ್ಟುಕೊಂಡು ಜನರ ಓಟ್ ಕೇಳಿದ್ದೇವೆ‌. ಹಾಗಾಗಿ ಫಲಿತಾಂಶ ಏನಾಗುತ್ತೋ ನೋಡೊಣ. ಡಾಕ್ಟರ್ ಗೆದ್ದರೆ ಜನಶಕ್ತಿಗೆ ಬೆಲೆ ಇದೆ ಅನ್ನೋದು ಗೊತ್ತಾಗುತ್ತೆ ಎಂದ ಅವರು, ಡಿಕೆಶಿ ವಿರುದ್ಧ ಶತ್ರು ಭೈರವಿ ಯಾಗ ವಿಚಾರವಾಗಿ, ಈ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಕೇರಳದ ಸಚಿವರು, ದೇವಾಲಯ ಆಡಳಿತ ಮಂಡಳಿ ಆರೀತಿ ಯಾವುದೇ ಪೂಜೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಡಿಕೆಶಿ ಅವರನ್ನೇ ಕೇಳಬೇಕು ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಖಜಾನೆ ಲೂಟಿ: ಮಾಜಿ ಡಿಸಿಎಂ ಗೋವಿಂದ ಕಾರಜೋಳ

ವಿಧಾನಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿದ ಯೋಗೇಶ್ವರ್, ಎನ್‌ಡಿಎ ಅಭ್ಯರ್ಥಿ ಅ.ದೇವೇಗೌಡರು ಕಣದಲ್ಲಿದ್ದಾರೆ. ನಮ್ಮ ತಾಲೂಕಿನಲ್ಲಿ ಐದುವರೆ ಸಾವಿರ ಪದವೀಧರರು ಇದ್ದಾರೆ. ಹಾಗಾಗಿ ಇಂದು ಸಭೆ ಮಾಡಿ ಎನ್‌ಡಿಎ ಅಭ್ಯರ್ಥಿ ಗೆಲುವಿನ ಬಗ್ಗೆ ಸಮಾಲೋಚನೆ ಮಾಡ್ತೇವೆ. ಹಿಂದೆಯೂ ಅ.ದೇವೇಗೌಡರು ಪರಿಷತ್ತ್ ಸದಸ್ಯರಾಗಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈ ಬಾರಿಯೂ ಪದವೀಧರರ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ