Karnataka Politics: ಮತ್ತೆ ರಾಜ್ಯದ ಸಿಎಂ ಆಗುವೆ: ಎಚ್‌.ಡಿ.ಕುಮಾರಸ್ವಾಮಿ

By Govindaraj SFirst Published Jun 27, 2022, 5:00 AM IST
Highlights

ದೀನದಲಿತರು, ಬಿಜೆಪಿ ದುರಾಡಳಿತದಿಂದ ಬೇಸತ್ತವರಿಗಾಗಿ ನಾನು ಮುಖ್ಯಮಂತ್ರಿ ಆಗಬೇಕಿದೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಲು ನನಗೆ ವೈಯಕ್ತಿಕವಾಗಿ ಇಷ್ಟಇಲ್ಲ, ಸ್ವತಂತ್ರವಾಗಿ ಅಧಿಕಾರಕ್ಕೇರಬೇಕೆಂಬುದು ನನ್ನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗ (ಜೂ.27): ದೀನದಲಿತರು, ಬಿಜೆಪಿ ದುರಾಡಳಿತದಿಂದ ಬೇಸತ್ತವರಿಗಾಗಿ ನಾನು ಮುಖ್ಯಮಂತ್ರಿ ಆಗಬೇಕಿದೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಲು ನನಗೆ ವೈಯಕ್ತಿಕವಾಗಿ ಇಷ್ಟಇಲ್ಲ, ಸ್ವತಂತ್ರವಾಗಿ ಅಧಿಕಾರಕ್ಕೇರಬೇಕೆಂಬುದು ನನ್ನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಈ ಹಿಂದೆ ಎರಡು ಬಾರಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಸಾಕಷ್ಟುಅನುಭವ ಪಡೆದಿದ್ದೇನೆ. ಹೀಗಾಗಿ, ವೈಯಕ್ತಿಕವಾಗಿ ಮತ್ತೆ ಸಮ್ಮಿಶ್ರ ಸರ್ಕಾರದ ಸಿಎಂ ಆಗಲು ಇಷ್ಟಇಲ್ಲ. ಜೆಡಿಎಸ್‌ ಬಹುಮತ ಪಡೆದು ಮುಖ್ಯಮಂತ್ರಿ ಆಗಬೇಕೆಂಬ ಗುರಿಯೊಂದಿಗೆ ಹಲವು ಯೋಜನೆ ರೂಪಿಸಿದ್ದೇನೆ. 

ಜನರ ಬಳಿ ಹೋಗುತ್ತೇನೆ, ನಮ್ಮ ಮನೆ ದೇವರ ಆಶೀರ್ವಾದ ಇದೆ, ಜನರ ಮೇಲೆ ನಂಬಿಕೆಯೂ ಇದೆ. ಮುಖ್ಯಮಂತ್ರಿ ಸ್ಥಾನ ದೊರಕಲಿದೆ ಎಂಬ ವಿಶ್ವಾಸ ಇದೆ ಎಂದರು. ವೈ.ಎಸ್‌.ವಿ.ದತ್ತ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಎಲ್ಲ ಪಡೆದುಕೊಂಡು ಹೋಗ್ತಿನಿ ಅಂದ್ರೆ ಅವರೇ ಯೋಚಿಸಬೇಕು. ಶಿವಸೇನೆಯಲ್ಲಿ 50 ಮಂದಿ ಬಿಟ್ಟು ಹೋಗುತ್ತಿದ್ದಾರೆ. ಅವರೆಲ್ಲ ಹೋದರೂ ಆ ಪಕ್ಷ ಏನಾದ್ರು ಮುಳುಗಿದೆಯಾ? ನಾನೂ ಆಗಸ್ಟ್‌ನಿಂದ ಪ್ರತಿದಿನ ಒಂದೊಂದು ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದರು.

ಬಹುಮತ ಸರ್ಕಾರವನ್ನೂ ಬಿಜೆಪಿ ಉಳಿಸಲ್ಲ: ಎಚ್‌.ಡಿ.ಕುಮಾರಸ್ವಾಮಿ

ಅಸ್ಥಿರತೆ ಹಿಂದೆ ಶಾ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ಅಸ್ಥಿರಗೊಳಿಸುವ ಕಾರ್ಯದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದ್ದಾರೆ. ಕರ್ನಾಟಕದಲ್ಲೂ ಜೆಡಿಎಸ್‌ ನೇತೃತ್ವದ ಮೈತ್ರಿ ಸರ್ಕಾರದ ಕೆಡಹುವ ಕಾರ್ಯದ ನೇತೃತ್ವವನ್ನೂ ಶಾ ಅವರೇ ವಹಿಸಿದ್ದರು ಎಂದು ಕುಮಾರಸ್ವಾಮಿ ಆರೋಪಿಸಿದರು. ಜತೆಗೆ, ಮುಂದೆ ರಾಜಸ್ಥಾನ, ಜಾರ್ಖಂಡ್‌ನಲ್ಲೂ ಸರ್ಕಾರಗಳನ್ನು ಅಸ್ಥಿರಗೊಳಿಸೋ ಕೆಲಸ ನಡೆಯಲಿದೆ ಎಂದು ಭವಿಷ್ಯ ನುಡಿದರು.

ಮೋದಿ ಭೇಟಿ ಖರ್ಚಿನಲ್ಲಿ ಒಂದು ಗ್ರಾಮ ಉದ್ಧಾರವಾಗ್ತಿತ್ತು: ಕುಮಾರಸ್ವಾಮಿ

ಬಿಜೆಪಿ ಸಚಿವರಿಂದ ಹಣ ಸುಲಿಯುತ್ತಿರುವ ಆರೆಸ್ಸೆಸ್‌: ಮುಂದಿನ ಚುನಾವಣೆ ನೇತೃತ್ವ ವಹಿಸಿಕೊಳ್ಳಲು ಆರೆಸ್ಸೆಸ್‌ ಸಿದ್ಧವಾಗಿದೆ. ಇದಕ್ಕಾಗಿ ಬಿಜೆಪಿ ಸಚಿವರಿಂದ ಪರ್ಸೆಂಟೇಜ್‌ ಲೆಕ್ಕದಲ್ಲಿ ಹಣ ವಸೂಲಿ ಮಾಡುತ್ತಿದೆ ಎಂದು ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರತಿ ಕ್ಷೇತ್ರಕ್ಕೂ .10 ರಿಂದ .20 ಕೋಟಿ ಖರ್ಚು ಮಾಡಲು ಆರೆಸ್ಸೆಸ್‌ನವರು ಸಿದ್ಧರಾಗಿದ್ದಾರೆ. ಅದಕ್ಕಾಗಿ ಆರೆಸ್ಸೆಸ್‌ನಿಂದ ಹಣ ಸಂಗ್ರಹ ಕಾರ್ಯ ನಡೆಯುತ್ತಿದೆ. ಚುನಾವಣೆ ಉದ್ದೇಶದಿಂದ ಬೆಂಗಳೂರಿನಲ್ಲಿ ಸಾವಿರಾರು ಕೋಟಿಗಳ ಅಭಿವೃದ್ಧಿ ಕಾಮಗಾರಿ ಘೋಷಿಸಲಾಗುತ್ತಿದೆ. ಅದರಲ್ಲಿ ಆರೆಸ್ಸೆಸ್‌ನ ಕೆಲ ಮುಖಂಡರಿಗೆ ಪರ್ಸೆಂಟೇಜ್‌ ಲೆಕ್ಕದಲ್ಲಿ ಹಣ ಕೊಡುತ್ತಾರೆ. ಎಷ್ಟೆಷ್ಟುಪಾಲು ಹೋಗುತ್ತಿದೆ ಎಂಬುದನ್ನು ಸಂಬಂಧಿಸಿದ ಸಚಿವರು ಧೈರ್ಯವಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.

click me!