ಚಿಂಚೋಳಿಗೆ ನಾನೇ ಸಿಎಂ, ಮಿನಿಸ್ಟರ್‌: ಬಿಜೆಪಿ ಶಾಸಕ ಡಾ. ಜಾಧವ ಗುಡುಗು

By Kannadaprabha News  |  First Published Jul 2, 2023, 4:29 AM IST

ಚಿಂಚೋಳಿಯಲ್ಲಿ ನಾನೇ ಸಿಎಂ, ನಾನೇ ಮಂತ್ರಿ, ನೀವು ಯಾರೂ ಹೇಳಲು ಬರಬೇಡಿರೆಂದು ಬಿಜೆಪಿ ಶಾಸಕ ಡಾ.ಅವಿನಾಶ ಜಾಧವ್‌ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಗುಡುಗಿದ ಪ್ರಸಂಗ ನಡೆದಿದೆ.


ಚಿಂಚೋಳಿ (ಜು.2) : ಚಿಂಚೋಳಿಯಲ್ಲಿ ನಾನೇ ಸಿಎಂ, ನಾನೇ ಮಂತ್ರಿ, ನೀವು ಯಾರೂ ಹೇಳಲು ಬರಬೇಡಿರೆಂದು ಬಿಜೆಪಿ ಶಾಸಕ ಡಾ.ಅವಿನಾಶ ಜಾಧವ್‌ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಗುಡುಗಿದ ಪ್ರಸಂಗ ನಡೆದಿದೆ.

ತಾಲೂಕಿನ ಪೋಲಕಪಳ್ಳಿ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಶನಿವಾರ ತಾಲೂಕ ವಲಯ ಅರಣ್ಯ ಇಲಾಖೆಯಿಂದ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಡಾ.ಅವಿನಾಶ ಜಾಧವ್‌ ಮತ್ತು ಕಾಂಗ್ರೆಸ ಮುಖಂಡ ಲಕ್ಷ್ಮಣ ಆವಂಟಿ ಇನ್ನಿತರ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಾಗ ಕೋಪಗೊಂಡ ಶಾಸಕ ಡಾ. ಜಾಧವ್‌ ಮೇಲಿನಂತೆ ಗುಡುಗಿದರು.

Tap to resize

Latest Videos

undefined

 

Chincholi Election Results 2023: ಚಿಂಚೋಳಿಯಲ್ಲಿ ಗೆದ್ದ ಪಕ್ಷಕ್ಕೆ ರಾಜ್ಯಾಧಿಕಾರ ಮಾತು ಈ ಬಾರಿ ಹುಸಿಯಾಯ್ತು..!

ನನಗೆ ಏನು ಹೇಳಲು ಬರಬೇಡಿರಿ ಶಾಲೆ ಅಭಿವೃದ್ಧಿಗಾಗಿ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರಕಾರದಿಂದ ಸಾಕಷ್ಟುಅನುದಾನ ತಂದಿದ್ದೇನೆ. ಯಾರು ನಮ್ಮನ್ನು ಪ್ರಶ್ನಿಸುವುದಕ್ಕೆ ನೀವೆಲ್ಲ ? ಎಂದು ಸವಾಲ್‌ ಹಾಕಿದರು.

ಸದರಿ ಶಾಲೆ ಅವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಅಹ್ವಾನ ಕೊಡುತ್ತಿಲ್ಲ ಎಂದು ಶಾಲೆ ಮುಖ್ಯಸ್ಥ ನಾಗೇಶ ಭಧ್ರಶೆಟ್ಟಿಅವರನ್ನು ಕಾಂಗ್ರೆಸ ಮುಖಂಡ ಲಕ್ಷ್ಮಣ ಆವಂಟಿ ತರಾಟೆಗೆ ತೆಗೆದುಕೊಂಡಾಗ ಈ ಗಲಾಟೆ ತಾರಕ್ಕೇರಿತು. ಶಾಲಾ ಶಿಕ್ಷಕರಾದ ನಿಮ್ಮ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ತಿಳಿಸುತ್ತೇನೆ ಎಂದು ಆವಂಟಿ ಗುಡುಗಿದಾಗ ಕೋಪಗೊಂಡ ಶಾಸಕರು, ಇವೆಲ್ಲ ನಡೆಯೋದಿ ಲ್ಲವೆಂದರು. ತಮ್ಮ ಅಧ್ಯಕ್ಷತೆಯಲ್ಲಿ ಚಿಂಚೋಳಿಯಲ್ಲಿ ನಡೆಯುವ ಸರ್ಕಾರದ ಸಭೆ ಸಮಾರಂಭ ಕಾರ್ಯಕ್ರಮಗಳ ನಡೆಯುತ್ತವೆ ಎಂಬುದನ್ನು ಮರೆಯಬಾರದು. ಶಿಷ್ಟಾಚಾರ ಎಲ್ಲರೂ ಅನುಸರಿಸಬೇಕು ಎಂದು ಸ್ಥಳದಲ್ಲಿ ಇದ್ದ ಅರಣ್ಯಾ​ಧಿಕಾರಿಗಳ ಶಾಂತರೆಡ್ಡಿ, ಸಂಜೀವ ಚವ್ಹಾಣ, ಶ್ರೀಕಾಂತ ರಾಠೋಡ ಹಾಗೂ ಅರಣ್ಯ ಸಿಬ್ಬಂದಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ/ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆಮ ಕೂಗಾಟ ಚೀರಾಟ ಗದ್ದಲ ಉಂಟಾಗಿರುವುದರಿಂದ ಶಾಲೆಯಲ್ಲಿ ನಡೆಯಬೇಕಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಶಾಸಕ ಡಾ.ಅವಿನಾಶ ಜಾಧವ್‌ ಭಾಗವಹಿಸದೇ ಅಲ್ಲಿಂದ ಹೊರಟು ಹೋದರು.

 

ಚಿಂಚೋಳಿ: ಮೃತ ಹಣಮಂತ ಭೋವಿ ಕುಟುಂಬಕ್ಕೆ ಸಂಸದ ಉಮೇಶ ಜಾಧವ್‌ ಸಾಂತ್ವನ

click me!