ಲೋಕಸಭೆಯಲ್ಲಿ ಲೀಡ್‌ ಕೊಟ್ಟರೆ ಸಿಎಂ ಬಳಿ ಅನುದಾನ ಕೇಳುವ ಹಕ್ಕು ಸಿಗುತ್ತದೆ: ರಾಯರಡ್ಡಿ

By Kannadaprabha NewsFirst Published Apr 17, 2024, 8:03 AM IST
Highlights

ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಹೆಚ್ಚು ಮತ ನೀಡಿ ಲೀಡ್‌ ಕೊಡಿಸಿದರೆ ಇನ್ನಷ್ಟು ಅನುದಾನ ಮುಖ್ಯಮಂತ್ರಿಗಳ ಬಳಿ ಕೇಳಲು ನನಗೆ ಹಕ್ಕು ಸಿಗುತ್ತದೆ. ಇನ್ನಷ್ಟು ಹೆಚ್ಚು ಕೆಲಸ (ಯೋಜನೆ) ತೆಗೆದುಕೊಂಡು ಬರಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಕುಕನೂರು (ಏ.17): ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಹೆಚ್ಚು ಮತ ನೀಡಿ ಲೀಡ್‌ ಕೊಡಿಸಿದರೆ ಇನ್ನಷ್ಟು ಅನುದಾನ ಮುಖ್ಯಮಂತ್ರಿಗಳ ಬಳಿ ಕೇಳಲು ನನಗೆ ಹಕ್ಕು ಸಿಗುತ್ತದೆ. ಇನ್ನಷ್ಟು ಹೆಚ್ಚು ಕೆಲಸ (ಯೋಜನೆ) ತೆಗೆದುಕೊಂಡು ಬರಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಪಟ್ಟಣದಲ್ಲಿ ಜರುಗಿದ ಲೋಕಸಭೆ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಲೀಡ್ ಕೊಟ್ಟರೆ, ನಾನು ಇನ್ನಷ್ಟು ಹೆಚ್ಚು ಕೆಲಸ ತೆಗೆದುಕೊಂಡು ಬರಲು ಸಾಧ್ಯವಾಗುತ್ತದೆ. ನಮ್ಮ ಅಭಿವೃದ್ಧಿ ಮತ್ತು ಕಾಂಗ್ರೆಸ್‌ ಜನಪರ ಕಾರ್ಯ ಮೆಚ್ಚಿ ಹೆಚ್ಚು ಮತ ನೀಡಬೇಕು ಅಂದಾಗ, ನಮಗೆ ಇನ್ನಷ್ಟು ಅನುದಾನ ನೀಡಿ ಎಂದು ಸಿಎಂ ಅವರಲ್ಲಿ ಕೇಳಲು ನನಗೆ ಹಕ್ಕು ಸಿಗುತ್ತದೆ. ಲೀಡ್ ಕೊಟ್ಟು, ಕ್ಷೇತ್ರದ ಅಭಿವೃದ್ಧಿ ಕೆಲಸ ಪಡೆದುಕೊಳ್ಳಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ: ಕೆಫೆ ಕೇಸ್‌ಗೆ ನಂಟು?

ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿ: ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ. ಇಡೀ ವಿಶ್ವಕ್ಕೆ ಮಾದರಿ ಸಂವಿಧಾನವಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.  ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರ್‌ ರಚಿಸಿದ ಸಂವಿಧಾನ ಇಂದು ಪ್ರತಿಯೊಬ್ಬರ ಪಾಲಿಗೆ ಮಹಾ ಗ್ರಂಥವಾಗಿದೆ. ಎಲ್ಲ ವರ್ಗದ ಜನರಿಗೆ ಒಂದೇ ರೀತಿ ಕಾನೂನು ಹಾಗೂ ಪ್ರಜಾಪ್ರಭುತ್ವ ವ್ಯವ್ಯಸ್ಥೆ ದೇಶದ ಸಂವಿಧಾನದಲ್ಲಿದೆ ಎಂದರು.

ಈ ದೇಶದ ಸಂಸ್ಕೃತಿಯಿಂದ ಜಾತಿ ವ್ಯವಸ್ಥೆ ನಿರ್ಮಾಣವಾಗಿದೆ. ದೇಶದಲ್ಲಿರುವ ಜಾತಿ ನಿರ್ಮೂಲನೆಗೆ ಬಾಬಾಸಾಹೇಬ ಅಂಬೇಡ್ಕರ್ ಹೋರಾಟವನ್ನು ಮೊದಲು ಎಲ್ಲರೂ ಸ್ಮರಿಸಬೇಕು. ದೇಶದಲ್ಲಿ ದಲಿತ ವರ್ಗವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ಅಂಬೇಡ್ಕರ್‌ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದವರು. ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಅಂಬೇಡ್ಕರ್‌ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಬ್ಬರು ಶಿಕ್ಷಣವಂತರಾದಾಗ ಮಾತ್ರ ಈ ಜಾತಿ ವ್ಯವಸ್ಥೆ ದೂರವಾಗಲು ಸಾಧ್ಯ ಎಂದರು.

ಲೋಕಸಭೆಯಲ್ಲಿ ಲೀಡ್‌ ಕೊಡದಿದ್ದರೆ ನಾನು ಮಂತ್ರಿ ಸ್ಥಾನ ಬಿಡಬೇಕಾಗುತ್ತೆ: ಸಚಿವ ದರ್ಶನಾಪುರ

ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತಗೌಡ ಪಾಟೀಲ, ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಸಂಗಣ್ಣ ಟೆಂಗಿನಕಾಯಿ, ಕೆರಿಬಸಪ್ಪ ನಿಡಗುಂದಿ, ಮಲ್ಲನಗೌಡ ಪಾಟೀಲ, ಶರಣಪ್ಪ ಗಾಂಜಿ, ಸಿದ್ದಪ್ಪ ಕಟ್ಟಮನಿ, ರೇವಣೆಪ್ಪ ಹಿರೇಕುರಬರ, ಆನಂದ ಉಳ್ಳಾಗಡ್ಡಿ, ಮಲ್ಲೇಶ ಹಣಗಿ, ಶಿವು ಬಣಕಾರ, ಮಲ್ಲು ಜಕ್ಕಲಿ, ಮಲ್ಲೇಶಗೌಡ ಪಾಟೀಲ, ಪ್ರಕಾಶ ಮಾಲಿಪಾಟೀಲ, ಹನುಮಂತ ಭಜೇಂತ್ರಿ, ಪರುಶುರಾಮ ಸಂಗನಾಳ, ಚಂದ್ರಪ್ಪ ದೊಡ್ಮನಿ ಮತ್ತಿತರರು ಇದ್ದರು.

click me!