ಪೆಹಲ್ಗಾಮ್ ದಾಳಿಗೆ ಉತ್ತರ ನೀಡಲು ಆಗದಿದ್ದರೆ ನಮಗೆ ಹೇಳಿ: ಮೌಲಾನಾ ಅಬು ತಾಲಿಬ್

Published : May 02, 2025, 11:04 PM ISTUpdated : May 02, 2025, 11:46 PM IST
ಪೆಹಲ್ಗಾಮ್ ದಾಳಿಗೆ ಉತ್ತರ ನೀಡಲು ಆಗದಿದ್ದರೆ ನಮಗೆ ಹೇಳಿ: ಮೌಲಾನಾ ಅಬು ತಾಲಿಬ್

ಸಾರಾಂಶ

ದೇಶದಲ್ಲಿ ಅಲ್ಲಾನನ್ನು ನಂಬುವ ಎಲ್ಲರನ್ನೂ ನಾವು ಮುಸ್ಲಿಂ ಎನ್ನುತ್ತೇವೆ. ಅವರು ಯಾವುದೇ ಧರ್ಮದವರಿರಲಿ. ಅಲ್ಲಾ ನಂಬಿದರವರು ಎಲ್ಲರು ಮುಸ್ಲಿಂಮರು ಎಂದು ವಿವಾದಿತ ಭಾಷಣಗಳ ಮೂಲಕ ಸುದ್ದಿಯಲ್ಲಿರುವ ದೆಹಲಿ ಮುಸ್ಲಿಂ ಮುಖಂಡ ಮೌಲಾನಾ ಅಬು ತಾಲಿಬ್ ರೆಹಮಾನಿ ತಿಳಿಸಿದರು. 

ವಿಜಯಪುರ (ಮೇ.02): ದೇಶದಲ್ಲಿ ಅಲ್ಲಾನನ್ನು ನಂಬುವ ಎಲ್ಲರನ್ನೂ ನಾವು ಮುಸ್ಲಿಂ ಎನ್ನುತ್ತೇವೆ. ಅವರು ಯಾವುದೇ ಧರ್ಮದವರಿರಲಿ. ಅಲ್ಲಾ ನಂಬಿದರವರು ಎಲ್ಲರು ಮುಸ್ಲಿಂಮರು ಎಂದು ವಿವಾದಿತ ಭಾಷಣಗಳ ಮೂಲಕ ಸುದ್ದಿಯಲ್ಲಿರುವ ದೆಹಲಿ ಮುಸ್ಲಿಂ ಮುಖಂಡ ಮೌಲಾನಾ ಅಬು ತಾಲಿಬ್ ರೆಹಮಾನಿ ತಿಳಿಸಿದರು. ಜಾರ್ಖಂಡ್ ಚುನಾವಣೆಯಲ್ಲಿ ಮೋದಿ ಮಾತನಾಡುತ್ತ ಬಟ್ಟೆಯಿಂದ ವ್ಯಕ್ತಿಯಿಂದ ಆಳತೆ ಮಾಡಬಾರದು. ದೇಶದಲ್ಲಿ ಹೆಸರು ಬದಲಾವಣೆ ಜೋರಾಗಿ ನಡೆಯುತ್ತಿದೆ. ನಮಗೆ ಅದರ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಮುಸ್ಲಿಂಮರು ಈ ದೇಶವನ್ನು ಆಳಿದರು ಸಹ ಎಂದಿಗೂ ದೇಶದ ಹೆಸರು ಬದಲಾವಣೆ ಮಾಡಿಲ್ಲ. 

ಹಜರತ್ ನರೇಂದ್ರ ಮೋದಿ ಸಾಬ್ ಎಂದು ವ್ಯಂಗ್ಯವಾಡಿದ ತಾಲಿಬ್ ರೆಹಮಾನಿ, 2014 ರಿಂದ ದೇಶದಲ್ಲಿ ಹೃದಯಗಳನ್ನ ಒಡೆದು ಹಾಕಲಾಗುತ್ತಿದೆ. ಪೆಹಲ್ಗಾಮ್ ದಾಳಿಗೆ ಉತ್ತರ ನೀಡಲು ಆಗದಿದ್ದರೆ ನಮಗೆ ಹೇಳಿ ನಾವು ಉತ್ತರ ನೀಡುತ್ತಿವೆ. ಒಂದು ಸಲ ನಮಗೆ ಅವಕಾಶ ಕೊಟ್ಟು ನೋಡಿ ಪಾಕಿಸ್ತಾನಕ್ಕೆ ಪಾಠ ಕಲಿಸುತ್ತೇವೆ. ಇಸ್ಲಾಂನಲ್ಲಿ ದೇಶದನ್ನ ಪ್ರತಿಸುವುದನ್ನ ಕಲಿತಿದ್ದೇವೆ. ಇಂದು ದೇಶದಲ್ಲಿ ದೇಶಭಕ್ತಿಯ ಹೆಸರಿನಲ್ಲಿ ವಸ್ತುಗಳನ್ನ ಮಾರಾಟ ಮಾಡಲಾಗಿದೆ. ದೇಶದಲ್ಲಿ ಹಿಂದೂ ಮುಸ್ಲಿಂ ಒಂದಾಗಿರಿ. ಹೆಂಡತಿ, ಮಕ್ಕಳಿಲ್ಲದ ಕೆಲವರಿಗೆ ಪ್ರೀತಿ ಅಂದರೇನು ಗೊತ್ತಿಲ್ಲ. ದೇಶದಲ್ಲಿ ಮೊದಲ ಮಸ್ಜಿದ್ ಕಟ್ಟಿದ್ದು ಒಬ್ಬ ಹಿಂದೂ‌ ರಾಜ ಎಂದರು.

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳ್ತಾರೆ ಅಖಂಡ ಭಾರತ ಕಟ್ಟೋಣ ಅನ್ನುತ್ತೆ. ಆದರೆ ದೇಶದ ಜನರಲ್ಲಿ ಯಾಕೆ ಅಖಂಡ ಭಾರತ ಕಟ್ಟಲ್ಲ ಎಂದು ಪ್ರಶ್ನಿಸಿದ ರೆಹಮಾನಿ. ಶರಬತ್ ಮಾರಾಟ ಮಾಡುವವರಿಗೆ ದೇಶದ ಅಖಂಡತೆ ಬಗ್ಗೆ ಏನು ಗೊತ್ತು. ಇಂದು ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅದನ್ನು ತಡೆಯುತ್ತೆ. ದೇಶವನ್ನ ಲೂಟಿ ಮಾಡೋದನ್ನ ಮುಸ್ಲಿಂಮರು ತಡೆಯುತ್ತಾರೆ. ಧರ್ಮ ಕೇಳಿ ಹೊಡೆಯುವವರಿಗೆ ಯಾವ ಶಿಕ್ಷಣ ಸಿಕ್ಕಿದೆ ಗೊತ್ತಿಲ್ಲ. ಅವರು ಯಾಕೆ ಧರ್ಮವನ್ನ ಕೇಳಿದರು ನಮಗೆ ಗೊತ್ತಿಲ್ಲ ಎಂದು ತಿಳಿಸಿದರು.

ತಾಕತ್ತಿದ್ದರೇ ಅಸಲಿ ರಾಜೀನಾಮೆ ಕೊಡಬೇಕು: ಮತ್ತೆ ಶಿವಾನಂದ ಪಾಟೀಲ್‌ಗೆ ಯತ್ನಾಳ್ ಸವಾಲ್‌

ಮದರಸಾಗಳಲ್ಲಿ ದೇಶ ರಕ್ಷಣೆ ಮಾಡುವುದನ್ನು ಕಲಿಸುತ್ತೇವೆ. ಕೆಲವು ದಿನಗಳ ಹಿಂದೆ ದಿಲ್ಲಿಯಲ್ಲಿ ಧರ್ಮ ಕೇಳಿ ಮಹಿಳೆಗೆ ಆಹಾರ ನೀಡಲಿಲ್ಲ. ಕೋವಿಡ್ ಸಮಯದಲ್ಲಿ ಕೆಲವರು ಚಪ್ಪಾಳೆ ತಟ್ಟಿದರು. ಆದರೆ ಕೆಲವರು ಆಹಾರ ಹಂಚಿದರು. ಕುಂಭಮೇಳದಲ್ಲಿ ಭಾಗಿಯಾಗಿದ್ದವರಿಗೆ ಮುಸ್ಲಿಂಮರು ಆಹಾರ ನೀಡಿದ್ದಾರೆ. ಈ‌ ದೇಶದಲ್ಲಿ ಹಿಂದೂ ಮುಸ್ಲಿಂ ಭಾತ್ರತ್ವ ಇದೆ. ಬ್ರಿಟಿಷರ ಕಾಲದಲ್ಲೂ ನಮಗೆ ಹಿಂಸೆ ನೀಡಲಾಗಿತ್ತು. ಇಂದು ನಾವಿದ್ದೇವೆ, ಮುಂದೆ ನಾವಿರೋದಿಲ್ಲ. ಆದರೆ ನಮ್ಮ ಮುಂದಿನ ಪಿಳಿಗೆ ಖುಷಿಯಾಗಿರಬೇಕು ಎಂದು ಮೌಲಾನಾ ಅಬು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!