ಯಾರು ಒಂದು ಕಾಲು ಒಳಗೆ, ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಅವರೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು: ಸೇಠ
ಬೆಳಗಾವಿ(ಜು.31): ಮುಂಬರುವ ವಿಧಾನಸಭೆ, ಲೋಕಸಭೆ ದೃಷ್ಟಿಯಿಂದ ಕಾಂಗ್ರೆಸ್ ನಾಯಕರು ಒಗ್ಗೂಡಿ ಕೆಲಸ ಮಾಡಬೇಕು. ಒಗ್ಗೂಡಿ ಕೆಲಸ ಮಾಡದಿದ್ದರೆ ಮುಂದಿನ 25 ವರ್ಷ ಇದೇ ಪರಿಸ್ಥಿತಿ ನೋಡಬೇಕಾಗುತ್ತದೆ ಎಂದು ಮಾಜಿ ಶಾಸಕ ಫಿರೋಜ್ ಸೇಠ್ ಹೇಳಿದರು. ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ಯಾರ ಜೊತೆಗೂ ನನ್ನ ಜಗಳ ಇಲ್ಲ. ನಾವು ಯಾರ ಜೊತೆಗೂ ಪೈಪೋಟಿ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದವರು ಎಲ್ಲರೂ ಒಗ್ಗೂಡಿ, ಅದು ಯಾರೇ ಇರಲಿ. ಯಾರು ಹೋಗಿದ್ದಾರೆ. ಹೋಗಲು ತಯಾರಾಗಿದ್ದಾರೆ. ಯಾರು ಒಂದು ಕಾಲು ಒಳಗೆ, ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಅವರೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು ಎಂದರು.
ಇಡೀ ನಮ್ಮ ರಾಷ್ಟ್ರದ ಶಾಂತಿ, ಸುಖದ ವಿಚಾರ ಇದೆ. ಇದರ ಜೊತೆಗೆ ನಾವ್ಯಾರೂ ಆಟವಾಡಬಾರದು. ರಾಜಕಾರಣಕ್ಕೆ ಯುವಕರು ಬಲಿಯಾಗಿದ್ದಾರೆ. ಈಗ ದೊಡ್ಡವರು ಇದರ ಬಗ್ಗೆ ಚಿಂತನೆ ಮಾಡಿ ಯಾರು ಒಳ್ಳೆಯ ಹಿಂದೂಸ್ತಾನ ಬಯಸುತ್ತಾರೋ ಹೊರಗೆ ಬರಬೇಕು. ಹೊರಗೆ ಬಂದು ಎಲ್ಲರಿಗೂ ತಿಳಿವಳಿಕೆ ನೀಡಬೇಕು. ವಿಧಾನಸಭೆ, ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಒಗ್ಗಟ್ಟಾಗಿ ಕಾರ್ಯಮಾಡಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿಹತ್ಯೆ ಪ್ರಕರಣ ನಡೆಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಕಾವು ನಾಳೆ ಈ ಭಾಗಕ್ಕೂ ಸ್ವಲ್ಪ ಬರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಶಾಸಕ ಜಮೀರ್‌ಗೆ ಸಾಲ ಕೊಟ್ಟಿದ್ದಕ್ಕೆ ಇಡಿ ವಿಚಾರಣೆ: ಕೆಜಿಎಫ್ ಬಾಬು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ ಮನೆಗೆ ತೆರಳಿದ ಸಿಎಂ ಬೊಮ್ಮಾಯಿ ಅವರು ಫಾಜಿಲ್ ಮನೆಗೂ ತೆರಳಿದ್ದಾರೆ. ಇದು ರಾಜಕಾರಣ. ಅಲ್ಲಿ ಹೋಗಿ . 25 ಲಕ್ಷ ನೀಡಿದರೆ ಅಸಮಾಧಾನಗೊಳ್ಳುತ್ತಾರೆಂಬ ಭಯ ಇದೆ. ಹೀ ಕ್ಯಾಸ್ ಟು ಬಿಕಮ್ ಅ ಲೀಡರ್ ವಿಥೌಟ್ ಫೀಯರ್. ಸಿಎಂ ಬೊಮ್ಮಾಯಿ ಅಂಜಿಕೆ ಇಲ್ಲದ ನಾಯಕರಾಗಬೇಕು. ನಾನು ಎಲ್ಲರನ್ನೂ ಪ್ರೀತಿ ಮಾಡುತ್ತೇನೆ ಎಂಬ ದೃಷ್ಟಿಕೋನದಲ್ಲಿ ಇರಬೇಕು. ನಮ್ಮ ಯೋಚನೆ ಆ ರೀತಿ ಇದ್ದರೆ ನಾವು ಲೀಡರ್ ಇಲ್ಲ ಎಂದರೆ ಲೀಡರ್ ಅಲ್ಲ. ಕೇವಲ ಕರ್ನಾಟಕ ಅಷ್ಟೇ ಅಲ್ಲ. ಇಡೀ ರಾಷ್ಟ್ರದಲ್ಲಿಯೂ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದರು.
ಇಡಿ, ಐಟಿ ಎಂದು ಎಲ್ಲರನ್ನೂ ಹೆದರಿಸಿ ತಮ್ಮತ್ತ ಸೆಳೆಯುವ ಕೆಲಸ ಆಗುತ್ತಿದೆ. ಹಿಂದೂ ಬಹುಸಂಖ್ಯಾತರು ಇರುವಂತಹ ದೇಶ, ನಾನು ಅಲ್ಪಸಂಖ್ಯಾತನಿದ್ದೇನೆ. ಜಾತಿಯಿಂದ ನಾನು ಅಲ್ಪಸಂಖ್ಯಾತ ಇದ್ದರೂ ನನಗೆ ಹಿಂದೂ ವ್ಯಕ್ತಿಗಳ ಬೆಂಬಲವಿದೆ. ಬಾಲ್ಯದಿಂದಲೂ ನನ್ನನ್ನು ಹಿಂದೂಗಳೇ ಬೆಂಬಲಿಸಿದ್ದಾರೆ. ಹತ್ತು ಮಂದಿ ಆ ರೀತಿ ಮಾಡಿದ್ದಾರೆ ಎಂದು ಹತ್ತು ಸಾವಿರ ಜನರಿಗೆ ನಾನು ದೂಷಿಸುವುದಿಲ್ಲ. ಹಿಂದೂಗಳು ಇಡೀ ಜಗತ್ತಿನಲ್ಲಿಯೇ ಒಳ್ಳೆಯ ವ್ಯಕ್ತಿಗಳು. ಬಿಜೆಪಿಯಿಂದ ದಾರಿತಪ್ಪಿದವರು ಬಿಟ್ಟು ಎಲ್ಲ ಹಿಂದೂಗಳು ಒಳ್ಳೆಯ ವ್ಯಕ್ತಿಗಳು. ಹಿಂದೂ ಐಡಿಯಾಲಾಜಿ ಅವರು ಕಲಿಯಬೇಕು. ಅದಕ್ಕೆ ನಾನು ಶಾಲೆ ಓಪನ್ ಮಾಡಬೇಕು ಎಂದು ಪ್ರಶ್ನಿಸಿದರು.