ಪಕ್ಷ ಬಯಸಿದರೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ: ಶ್ರೀರಾಮುಲು

By Govindaraj S  |  First Published Sep 28, 2022, 2:58 PM IST

ಮುಂಬರುವ ಚುನಾವಣೆಯಲ್ಲಿ ನಾನು ಮೊಣಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ, ಪಕ್ಷ ಬಯಸಿದರೆ ಸಿದ್ದರಾಮಯ್ಯನವರ ವಿರುದ್ಧವೂ ಸ್ಪರ್ಧಿಸಲು ಸಿದ್ಧ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.


ಹರಪನಹಳ್ಳಿ (ಸೆ.28): ಮುಂಬರುವ ಚುನಾವಣೆಯಲ್ಲಿ ನಾನು ಮೊಣಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ, ಪಕ್ಷ ಬಯಸಿದರೆ ಸಿದ್ದರಾಮಯ್ಯನವರ ವಿರುದ್ಧವೂ ಸ್ಪರ್ಧಿಸಲು ಸಿದ್ಧ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಅವರು ಹರಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಭಾರತ್‌ ಜೋಡೋ ಮೂಲಕ ಬೃಹತ್‌ ಸಮಾವೇಶ ಮಾಡಿ ಇತಿಹಾಸ ಸೃಷ್ಟಿಮಾಡಲು ರಾಹುಲ್‌ಗಾಂಧಿ ಹೊರಟಿದ್ದಾರೆ, ಅವರು ಎಲ್ಲೆಲ್ಲಿ ಹೆಜ್ಜೆ ಇಟ್ಟಿದ್ದಾರೋ ಅಲ್ಲೇಲ್ಲ ಇತಿಹಾಸ ಸೃಷ್ಟಿಯಾಗಿದ್ದು,ಅವರು ಕಾಲು ಇಟ್ಟಕಡೆ ಕಾಂಗ್ರೆಸ್‌ ಪಕ್ಷ ಮಾಯವಾಗುತ್ತಿದೆ ಎಂದರು. 

ರಾಹುಲ್‌ ಗಾಂಧಿಯವರು ಪಾದಯಾತ್ರೆ ಮಾಡುತ್ತಿರುವ ತಮಿಳುನಾಡು, ಕೇರಳ ಕಡೆಗಳಲ್ಲಿ ಈಗಾಗಲೇ ಕಾಂಗ್ರೆಸ್‌ ಮಟಾಶ್‌ ಆಗುತ್ತಾ ಬಂದಿದೆ. ಭವಿಷ್ಯ ಬಳ್ಳಾರಿ ಜಿಲ್ಲೆಗಳಲ್ಲಿ ಕೂಡ ಕಾಂಗ್ರೆಸ್‌ಗೆ ಅದೇ ಪರಿಸ್ಥಿತಿ ಬರುತ್ತದೆ ಎಂದರು. ರಾಹುಲ್‌ ಗಾಂಧಿಯವರು ರಾಜಕೀಯ ಕಲಿಯಬೇಕಿದೆ. ಅವರ ಭವಿಷ್ಯ ರೂಪಿಸಿಕೊಳ್ಳಲು ಈ ಹೋರಾಟ ನಡೆಸುತ್ತಿದ್ದು, ಈಗ ಭಾರತ ಜೊಡೋ ಯಾತ್ರೆ ಮಾಡ್ತಾ ಇದ್ದಿರಾ, ಭಾರತದ ಯಾವ ಭಾಗ ತೆಗೆದು, ಯಾವ ಭಾಗಕ್ಕೆ ಜೋಡಿಸುತ್ತಿರೋ ಗೊತ್ತಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಕರ್ನಾಟಕದಲ್ಲಿ ಕೂಡ ಅಧಿಕಾರಕ್ಕೆ ಬರುತ್ತೆ. ಆಖಂಡ ಬಳ್ಳಾರಿಯ 10 ಕ್ಷೇತ್ರಗಳಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Videos

undefined

ಶ್ರೀರಾಮುಲು ಕಾಂಗ್ರೆಸ್‌ಗೆ ಬರಲಿ: ಶಾಸಕ ನಾಗೇಂದ್ರ

ಶೇ.40 ಕಮಿಷನ್‌ ತನಿಖೆಯಾಗಲಿ: ಶೇ. 40ರಷ್ಟುಕಮಿಷನ್‌ ಕುರಿತು ಪ್ರತಿಕ್ರಿಯೆಸಿದ ಅವರು ಸಿದ್ದರಾಮಯ್ಯನವರು ತಮ್ಮ ಚಸ್ಮಾವನ್ನು ಒರೆಸಿಕೊಂಡು ಸರಿಯಾಗಿ ನೋಡಲಿ, ಯಾರನ್ನು ಪಕ್ಕದಲ್ಲಿ ಇಟ್ಟುಕೊಂಡು ಪೇ ಸಿಎಂ ಎಂದು ಹೋರಾಟ ಮಾಡ್ತಾ ಇದ್ದಾರೆ ನೋಡಿಕೊಳ್ಳಲಿ. ಅವರ ಪಕ್ಷದ ಡಿಕೆಶಿ ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬೇಲ್‌ ಮೇಲೆ ಇರುವ ವ್ಯಕ್ತಿ,ರಾಹುಲ್‌ಗಾಂಧಿ ಕೂಡ ಬೇಲ್‌ ಮೇಲೆ ಇದ್ದಾರೆ, ಇಂತವರನ್ನು ಪಕ್ಕದಲ್ಲಿಟ್ಟುಕೊಂಡು ಪೇ ಸಿಎಂ ಅಭಿಯಾನ ಮಾಡ್ತಾ ಇದ್ದಾರೆ. ಅವರಂತೆ ನಾನು, ಕರುಣಾಕರರೆಡ್ಡಿ, ಬೊಮ್ಮಾಯಿಯವರು ಜೈಲ್‌ಗೆ ಹೋಗಿ ಬಂದಿಲ್ಲ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವಾಗದೆ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ. ಬೇಕಿದ್ದರೆ ಲೋಕಾಯುಕ್ತ ತನಿಖೆಯಾಗಲಿ ಎಂದರು. ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟುಮೀಸಲಾತಿ ಹೆಚ್ಚಳ ಆಗೇ ಆಗುತ್ತದೆ, ಅ.8 ಸರ್ವಪಕ್ಷ ಸಭೆಯ ನಂತರ ಅಂತಿಮ ತೀರ್ಮಾನವಾಗುತ್ತದೆ, ನನ್ನ ಸಮುದಾಯಕ್ಕೆ ಎಲ್ಲ ರೀತಿಯ ಸಹಾಯ ಮಾಡುತ್ತೇನೆ ಎಂದು ಹೇಳಿದರು.

ಸಿದ್ದು, ಎಚ್ಡಿಕೆ ಸತ್ಯಹರಿಶ್ಚಂದ್ರರ ಮನೇಲಿ ಹುಟ್ಟಿದ್ದರಾ?: ರಾಜ್ಯ ಸರ್ಕಾರಕ್ಕೆ ಕಟ್ಟೆಹೆಸರಲು ತರಲು ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿರುವ ಗುತ್ತಿಗೆದಾರರ ಸಂಘ ಸ್ವಯಂ ಪ್ರೇರಣೆಯಿಂದ ಹೇಳಿಕೆ ಕೊಟ್ಟಿದೆಯಾ ಅಥವಾ ಯಾರದೋ ಪ್ರಚೋಧನೆಯಿಂದ ಹೇಳಿಕೆ ಕೊಟ್ಟಿದೆಯಾ ಎಂದು ಸಾರಿಗೆ ಸಚಿವ ಬಿ.ಶ್ರೀರಾಮಲು ಪ್ರಶ್ನಿಸಿದರು. ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿಯ ಮಲ್ಲಸಂದ್ರ ಗ್ರಾಮದಲ್ಲಿ 22 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಿರುವ ಪರಿಶಿಷ್ಟವರ್ಗದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯನ್ನು ಗುರುವಾರು ಉದ್ಘಾಟಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ಸಿಗರು ಆಲಿಬಾಬಾ ಚಾಲೀಸ್ ಪರ್ ಚಾರ್ ಚೋರ್‌ಗಳಿದ್ದಂತೆ: ಸಚಿವ ಶ್ರೀರಾಮುಲು ವ್ಯಂಗ್ಯ

ಕಾಂಗ್ರೆಸ್‌ ಅವಧಿಯಲ್ಲಿ ರಾಜ್ಯ ಲೂಟಿ: ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ರಾಜ್ಯ ಬಿಜೆಪಿ ಸರ್ಕಾರವನ್ನು ಶೇ.40 ಪರ್ಸೆಂಟ್‌ ಸರ್ಕಾರ ಎಂದು ಕರೆದಿರುವ ಕುರಿತು ಕೇಳಿದ ಪ್ರಶ್ನೆಗೆ ತೀಕ್ಷ ಪ್ರತಿಕ್ರಿಯೆ ನೀಡಿದ ರಾಮಲು, ದೆವ್ವದ ಬಾಯಲ್ಲಿ ಭಗವದ್ಗೀತೆ ಪಠಿಸಿದ್ದಂತೆ ಇಬ್ಬರೂ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಸತ್ಯಹರಿಶ್ಚಂದ್ರ ಮನೆಯಲ್ಲಿ ಹುಟ್ಟಿದ್ದಾರೆ. ಇವರ ಸರ್ಕಾರದ ಅವಧಿಯಲ್ಲಿ ರಾಜ್ಯವನ್ನು ಲೂಟಿ ಮಾಡಿದ್ದಾರೆಂದು ಸಚಿವರು ವಾಗ್ದಾಳಿ ನಡೆಸಿದರು.

click me!