ಕಮಿಷನ್‌ ದಂಧೆಗೆ ಬಿಜೆಪಿ ಕಾರ್ಯಕರ್ತರೇ ಬೇಸರ; ರಣದೀಪ್‌ ಸಿಂಗ್‌ ಸುರ್ಜೇವಾಲ

By Kannadaprabha NewsFirst Published Sep 28, 2022, 12:59 PM IST
Highlights
  • ಕಮಿಷನ್‌ ದಂಧೆಗೆ ಬಿಜೆಪಿ ಕಾರ್ಯಕರ್ತರು ಬೇಸರ
  • ಚಿತ್ರದುರ್ಗದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ರಣದೀಪ್‌ ಸಿಂಗ್‌ ಸುರ್ಜೇವಾಲ ಆರೋಪ

ಚಿತ್ರದುರ್ಗ (ಸೆ.28) : ಶೇಕಡಾ ನಲವತ್ತು ಪರ್ಸೆಂಟ್‌ ಕಮಿಷನ್‌ ದಂಧೆಯಿಂದ ಸ್ವತಃ ಬಿಜೆಪಿ ಕಾರ್ಯಕರ್ತರೇ ಬೇಸರಗೊಂಡಿದ್ದಾರೆಂದು ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲ ಹೇಳಿದರು. ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ಭಾರತ್‌ ಜೋಡೋ ಯಾತ್ರೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಚಿತ್ರದುರ್ಗ - ದಾವಣಗೆರೆ ಜಿಲ್ಲೆಯ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿ ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ಮಠಾಧೀಶರಿಂದಲೂ ಶೇ 30ರಷ್ಟುಕಮಿಷನ್‌ ಪೀಕಿದೆ ಎಂದರು.

40% Commission: ನಮ್ಮ ಕಾಲದ್ದೂ ತನಿಖೆ ಆಗ್ಲಿ: ಡಿಕೆಶಿ, ಸಿದ್ದು!

ಬೊಮ್ಮಾಯಿ ಸರ್ಕಾರದಲ್ಲಿ ಲಂಚ ಇಲ್ಲದೇ ಕೆಲಸವೇ ನಡೆಯುವುದಿಲ್ಲ. ಸಚಿವರೊಬ್ಬರು ಲಂಚ ಕೇಳಿದ್ದಕ್ಕೆ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಬಿಜೆಪಿ ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ ಎನ್ನುವಂತೆ ಕಾರ್ಯನಿರ್ವಹಿಸುತ್ತಿದೆ. ಜವಾಬ್ದಾರಿಯುತ ಮಂತ್ರಿಯೋರ್ವರು ನಾವು ಸರ್ಕಾರ ನಡೆಸುತ್ತಿಲ್ಲ, ನಿರ್ವಹಣೆ ಮಾಡುತ್ತಿದ್ದೇವೆಂದು ಹೇಳಿಕೆ ನೀಡಿದ್ದಾರೆ. ಓರ್ವ ಮಂತ್ರಿ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಹಗರಣ ಮಾಡಿದ್ದಾರೆ. ಮಂತ್ರಿಗಳ ಈ ಹಗರಣಗಳ ವಿರುದ್ದ ನಾವು ಬೀದಿಗೆ ಇಳಿದಿದ್ದೇವೆ ಎಂದರು.

ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ದೇಶದ ಎಲ್ಲ ವರ್ಗದ ಜನರ ಕಷ್ಟುಸುಖಗಳನ್ನು ಆಲಿಸುತ್ತಿದ್ದಾರೆ. ಗ್ಯಾಸ್‌ ಸಿಲಿಂಡರ್‌, ಅಕ್ಕಿ, ಬೇಳೆ, ತರಕಾರಿ, ಹಾಲು, ಮೊಸರು, ಬೇಳೆ ಎಲ್ಲ ದರಗಳು ಏರಿಕೆಯಾಗಿದ್ದು, ಮಹಿಳೆಯರು ಪ್ರತಿ ದಿನವೂ ಅಡುಗೆ ಮಾಡುವಾಗ ಕೈ ಸುಟ್ಟುಕೊಳ್ಳುವಂತಾಗಿದೆ ಎಂದು ಸುರ್ಜೇವಾಲ ಹೇಳಿದರು.

ಭಾರತ್‌ ಜೋಡೋ ಯಾತ್ರೆಯ ಕರ್ನಾಟಕ ಉಸ್ತುವಾರಿ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ, ಬಿ.ಎನ್‌. ಚಂದ್ರಪ್ಪ, ಜಿಲ್ಲಾ ಉಸ್ತುವಾರಿ ಕೆ.ಎನ್‌.ರಾಜಣ್ಣ, ಶಾಸಕ ಟಿ.ರಘುಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ.ತಾಜ್‌ಫೀರ್‌, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್‌, ತಿಪ್ಪೇಸ್ವಾಮಿ, ಯೋಗೇಶ್‌ ಬಾಬು, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ದಾವಣಗೆರೆ ಡಿಸಿಸಿ ಅಧ್ಯಕ್ಷ ಎಚ್‌.ಬಿ.ಮಂಜಪ್ಪ, ದಾವಣಗೆರೆ ಜಿಲ್ಲಾ ಉಸ್ತುವಾರಿ ಎಂ.ಸಿ. ವೇಣುಗೋಪಾಲ್‌, ಎಐಸಿಸಿ ಮುಖಂಡ ಮಯೂರ್‌ ಜಯಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್‌.ಮಂಜುನಾಥ್‌, ಮಾಜಿ ಶಾಸಕ ಎ.ವಿ.ಉಮಾಪತಿ, ಡಿಸಿಸಿ ಕಾರ್ಯಾಧ್ಯಕ್ಷ ಹಾಲೇಶ್‌, ಡಿ.ಎನ್‌.ಮೈಲಾರಪ್ಪ, ಸಂಪತ್‌ ಕುಮಾರ್‌ ಇದ್ದರು.

.ಚಿತ್ರದುರ್ಗ ಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ಭಾಗಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ ರಾಹುಲ್‌ ಗಾಂಧಿ ಕರ್ನಾಟಕದಲ್ಲಿ 22 ದಿನ ಪಾದಯಾತ್ರೆ ಮಾಡುತ್ತಿದ್ದಾರೆ. ಭಾರತವನ್ನು ಶಾಂತಿಯುತ ದೇಶವಾಗಿಸುವ ಆಶಯದೊಂದಿಗೆ ಪಾದಯಾತ್ರೆ ನಡೆಯುತ್ತಿದೆ. ಸಾಮರಸ್ಯದ ನಡಿಗೆ ಇದಾಗಿದೆ ಎಂದರು. ರಾಜ್ಯದಲ್ಲಿ 22 ದಿನ ಕಳೆದರೆ, ಚಿತ್ರದುರ್ಗ ಜಿಲ್ಲೆಯಲ್ಲೇ ನಾಲ್ಕೂ ವರೆ ದಿನ ಇರುತ್ತದೆ. ಎರಡೂ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಸಂಘಟಿತವಾಗಿ ಕೆಲಸ ಮಾಡಬೇಕು. ಪ್ರತಿ ದಿನ ಕನಿಷ್ಟಐದು ಸಾವಿರ ಜನ ಸೇರಿಸಬೇಕು. ದಾರಿಯುದ್ದಕ್ಕೂ ಲಘು ಉಪಾಹಾರ, ಪಾನೀಯ, ಊಟದ ವ್ಯವಸ್ಥೆ ಮಾಡಬೇಕು. ಜೋಡೋ ಚಿತ್ರದುರ್ಗಯಾತ್ರೆಯಲ್ಲಿ ಪ್ರಿಯಾಂಕ ಗಾಂಧಿ ಭಾಗವಹಿಸಲಿದ್ದಾರೆ. ಅಂದು 20 ಸಾವಿರ ಜನ ಹೆಣ್ಣು ಮಕ್ಕಳು, ತಾಯಂದಿರು ಹೆಜ್ಜೆ ಹಾಕಬೇಕು ಎಂದರು.

ರಸ್ತೆ ಸುರಕ್ಷತಾ ಸಮಿತಿ ಸಭಾ ನಡಾವಳಿಗಳು ಇನ್ನೂ ಸಿದ್ಧವಾಗಿಲ್ಲ!

ಬೆಲೆ ಏರಿಕೆ ಸಮಸ್ಯೆಗೆ ಹಿಂದೂ, ಮುಸ್ಲಿಂ, ಸಿಖ್‌, ಕ್ರೈಸ್ತ ಎಂಬ ಬೇಧವಿಲ್ಲ . 60 ಲಕ್ಷಕ್ಕೆ ಪಿಎಸ್‌ಐ ಹುದ್ದೆಗಳು ಹರಾಜಾಗಿವೆ. ಈ ಮೂಲಕ ಬಿಜೆಪಿ ಯುವಕರ ಭವಿಷ್ಯವನ್ನು ಮಾರಾಟಕ್ಕಿಟ್ಟಿದೆ. ಬಿಜೆಪಿ ಅಂದರೆ ಬೇಚೋ ರೋಜಗಾರ್‌ ಪಾರ್ಟಿ.

ರಣದೀಪ್‌ ಸಿಂಗ್‌ ಸುರ್ಜೆವಾಲ, ರಾಜ್ಯ ಉಸ್ತುವಾರಿ,

click me!