ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏನು ಗೌರವ ಕೊಡಬೇಕು ಕೊಟ್ಟೇ ಕೊಡುತ್ತೇವೆ. ಕೇಂದ್ರದಲ್ಲಿ ಬಿಜೆಪಿಯ ನರೇಂದ್ರ ಮೋದಿ ಅವರ ಸರ್ಕಾರ ಬರಬೇಕು. ಅದಕ್ಕಾಗಿ ಒಂದೇ ಗುರಿ ಇಟ್ಟು ಕೊಂಡು ಕೆಲಸ ಮಾಡುತ್ತೇವೆ. ಎಲ್ಲಾ ಸಹಕಾರವನ್ನೂ ಕೊಡುತ್ತೇವೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ, ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ನ.13): ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏನು ಗೌರವ ಕೊಡಬೇಕು ಕೊಟ್ಟೇ ಕೊಡುತ್ತೇವೆ. ಕೇಂದ್ರದಲ್ಲಿ ಬಿಜೆಪಿಯ ನರೇಂದ್ರ ಮೋದಿ ಅವರ ಸರ್ಕಾರ ಬರಬೇಕು. ಅದಕ್ಕಾಗಿ ಒಂದೇ ಗುರಿ ಇಟ್ಟು ಕೊಂಡು ಕೆಲಸ ಮಾಡುತ್ತೇವೆ. ಎಲ್ಲಾ ಸಹಕಾರವನ್ನೂ ಕೊಡುತ್ತೇವೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ನ್ಯಾಯ ಪೀಠ ಬದಲಾಗುವುದಿಲ್ಲ ನ್ಯಾಯಾಧೀಶರು ಮಾತ್ರ ಬದಲಾಗುತ್ತಿರುತ್ತಾರೆ. ನಾವು ಪಕ್ಷದ ಲಕ್ಷ್ಮಣ ರೇಖೆಯನ್ನು ಯಾವತ್ತು ದಾಟಿದ್ದೇವೆ? 20 ವರ್ಷ ಶಾಸಕನಾಗಿ ನನ್ನನ್ನ ನೋಡಿದ್ದೀರಿ. 35 ವರ್ಷದಿಂದ ಪಕ್ಷ ಕಾರ್ಯಕರ್ತನಾಗಿ ವಿವಿಧ ಜವಾಬ್ದಾರಿಗಳನ್ನು ಹೊತ್ತು ಕೆಲಸ ಮಾಡಿದ್ದೇನೆ. ಜಗಳವಾಡಿದರೂ ನಮ್ಮ ಮನೆಯೊಳಗೇ ಜಗಳ, ಹೊಸಿಲು ದಾಟಿ ಬೇರೆಯವರ ಮನೆಗೆ ಹೋಗಿ ನಮ್ಮ ಮನೆ ಸಮಸ್ಯೆ ಬಗೆಹರಿಸಿ ಎಂದು ಕೇಳಿಲ್ಲ ಎಂದರು.
undefined
ನನಗಿರುವುದು ಒಂದೇ ಪಕ್ಷ ಅದು ಬಿಜೆಪಿ: ಪಕ್ಷ ಏನೂ ಜವಾಬ್ದಾರಿ ಕೊಟ್ಟಿಲ್ಲ ಎಂದರೂ ಬಿಜೆಪಿಗೆ ಮತ ಕೊಡಿ ಎಂದೇ ಕೇಳುತ್ತೇನೆ. ಬೇರ ಪಕ್ಷಕ್ಕೆ ಮತ ಕೊಡಿ ಎಂದು ಕೇಳಲಿಕ್ಕಾಗುವುದಿಲ್ಲ. ನನಗೆ ಕೊಟ್ಟರೆ ಮಾತ್ರ ಬಿಜೆಪಿ ಇಲ್ಲವಾದರೆ ಬಿಜೆಪಿ ಅಲ್ಲ ಎಂದು ಹೇಳಲಿಕ್ಕಾಗುತ್ತದೆಯಾ? ಬುದ್ಧಿ ಬಂದಾಗಿನಿಂದ, ಬಿಜೆಪಿಗೆ ಸೇರಿದಾಗಿನಿಂದ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ವೋಟ್ ಕೇಳಿಲ್ಲ. ಬೇರೆ ಪಕ್ಷಕ್ಕೆ ವೋಟ್ ಹಾಕಿಲ್ಲ. ನನಗಿರುವುದು ಒಂದೇ ಪಕ್ಷ ಅದು ಬಿಜೆಪಿ. ಅಕಸ್ಮಾತ್ ರಾಜಕೀಯ ಬೇಡ ಎನ್ನಿಸಿದರೆ ರಾಜಕೀಯ ಬಿಟ್ಟು ಕುಳಿತುಕೊಳ್ಳುತ್ತೇನೆ. ಬಿಜೆಪಿಯನ್ನು ಬಿಟ್ಟು ಮತ್ತೊಂದು ಪಕ್ಷಕ್ಕೆ ಹೋಗಿ ರಾಜಕಾರಣ ಮಾಡುವುದಿಲ್ಲ ಎಂದರು.
ಬರ ನಿರ್ವಹಣೆ ಹಣ ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲ: ಆರಗ ಜ್ಞಾನೇಂದ್ರ
ಪದಗ್ರಹಣ ಕಾರ್ಯಕ್ರಮಕ್ಕೆ ಹೋಗುವುದಿಲ್ಲ: ನವೆಂಬರ್ 15 ರಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಜವಾಬ್ದಾರಿ ಸ್ವೀಕರಿಸಲಿದ್ದಾರೆ. ಈ ಸಂಬಂಧ ಅವರು ನನ್ನನೊಂದಿಗೆ ಎರಡು ಬಾರಿ ಮಾತನಾಡಿದ್ದಾರೆ. ಆದರೆ ಮಧ್ಯ ಪ್ರದೇಶದ ಚುನಾವಣಾ ಜವಾಬ್ದಾರಿ ಇರುವುದರಿಂದ ಇಂದು ರಾತ್ರಿಯೇ ಹೊರಡುತ್ತಿದ್ದೇನೆ. ನವೆಂಬರ್ 15 ರ ರಾತ್ರಿ ವರೆಗೆ ಪ್ರಚಾರಕ್ಕಾಗಿ ಅಲ್ಲಿಯೇ ಇರಬೇಕಾಗುತ್ತದೆ. ಹಾಗಾಗಿ ಅಂದು ನಾನು ಇರುವುದಿಲ್ಲ ಎನ್ನುವುದನ್ನು ಅವರಿಗೆ ತಿಳಿಸಿದ್ದೇನೆ ಎಂದರು.ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ನಾನೇನು ಹೇಳಲಿಕ್ಕಾಗುತ್ತದೆ. ಎಲ್ಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಾನಿದ್ದೇನಾ? ರಾಜ್ಯ ಸುತ್ತಬಹುದು, ಸುತ್ತುವ ಸಾಮರ್ಥ್ಯ ಇದೆ ಸುತ್ತಲಿ ಎಂದರು.
ಫರ್ನಿಚರ್ ತರೋದು ನಿಮ್ಮ ಸಮಾಜವಾದವಾ: ಸಿಎಂ ಸಿದ್ದರಾಮಯ್ಯ ನಾನು ಸಮಾಜವಾದದ ಹಿನ್ನೆಲೆಯವನು ಅಂತಾರೆ, ಆದ್ರೆ 3-4 ಕೋಟಿ ಖರ್ಚು ಮಾಡಿ ಫರ್ನಿಚರ್ ತರೋದು ನಿಮ್ಮ ಸಮಾಜವಾದವಾ...?ಸಮಾಜವಾದ ಅಂದ್ರೆ ಸರಳ ಅನ್ನೋದು ನಮಗೆ ಗೊತ್ತಿರೋದುನೀವು ಸಮಾಜವಾದದ ಪರಿಭಾಷೆಯನ್ನೂ ಬದಲಾಯಿಸಿದ್ರಿ, ಸಮಾಜವಾದ ಅಂದ್ರೆ ಎಷ್ಟಾಗುತ್ತೋ ಅಷ್ಟು ಕಂಡೋರ್ ದುಡ್ಡಲ್ಲಿ ಮಜಾ ಮಾಡೋದು , ನೀವು ಮಾಡಿದ್ದು ಸರಿಯಾ, ನಿಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ ಎಂದು ಪ್ರಶ್ನೆಸಿದ್ದಾರೆ. ರಾಜ್ಯದಲ್ಲಿ 223 ತಾಲೂಕುಗಳಲ್ಲಿ ಬರ ಎಂದು ಸರ್ಕಾರ ಘೋಷಿಸಿದೆ, ಮನೆಯಲ್ಲಿ ಅನಾರೋಗ್ಯ ಪೀಡಿತರಿದ್ದಾಗ ಸಂಭ್ರಮವನ್ನೂ ದೂರ ಮಾಡ್ತಾರೆ.
Chikkamagaluru: ವಸತಿ ಶಾಲೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ; ಮೂವರ ಬಂಧನ
ರೈತರು ಸಂಕಷ್ಟದಲ್ಲಿದ್ದಾರೆ, ನವೆಂಬರ್ ನಲ್ಲೆ ಕುಡಿಯೋ ನೀರಿನ ಸಮಸ್ಯೆ, ಹಳ್ಳಿಗಲ್ಲಿ 2-3 ಗಂಟೆಯೂ ಕರೆಂಟ್ ಇಲ್ಲ ಇಂತಹ ಸಂಕಷ್ಟದಲ್ಲಿದ್ದಾಗ ಮನೆಗೆ ಕೋಟ್ಯಾಂತರ ರೂಪಾಯಿ ಪೀಠೋಪಕರಣ ತರ್ತಾರೆ, ರೈತರಿಗೆ ಪರಿಹಾರ ಕೊಡಿ ಅಂದ್ರೆ ಕೇಂದ್ರದತ್ತ ಕೈ ತೋರಿಸ್ತಾರೆ ಎಂದು ಪ್ರಶ್ನೆಸಿ ಇವರ ಮನೆಗೆ ಪೀಠೋಪಕರಣ ತರಲು ಯಾವ ಕಾರಣವೂ ಇಲ್ಲ, ಕೋಟ್ಯಾಂತರ ರೂಪಾಯಿಯ ಪೀಠೋಪಕರಣ ತರುವಷ್ಟು ಸಮೃದ್ಧಿಯ ಕಾಲವಾ...ಜನರ ಕಷ್ಟ, ಸಂಕಷ್ಟಕ್ಕೂ ನಿಮಗೂ ಸಂಬಂಧವಿಲ್ಲ, ಬರಗಾಲಕ್ಕೂ-ಸರ್ಕಾರಕ್ಕೂ ಭಾವನೆಗಳೇ ಇಲ್ವಾ ಎಂದು ಟೀಕಿಸಿದರು.