ಕಾಂಗ್ರೆಸ್‌ ಕೋಲಾರಕ್ಕೆ ರಾಹುಲ್‌ರನ್ನು ಕರೆಸಿದರೆ ನಾವು ಪ್ರಧಾನಿ ಮೋದಿ ಕರೆಸುತ್ತೇವೆ: ವರ್ತೂರು ಪ್ರಕಾಶ್‌

Published : Apr 02, 2023, 02:00 AM IST
ಕಾಂಗ್ರೆಸ್‌ ಕೋಲಾರಕ್ಕೆ ರಾಹುಲ್‌ರನ್ನು ಕರೆಸಿದರೆ ನಾವು ಪ್ರಧಾನಿ ಮೋದಿ ಕರೆಸುತ್ತೇವೆ: ವರ್ತೂರು ಪ್ರಕಾಶ್‌

ಸಾರಾಂಶ

ಕಾಂಗ್ರೆಸ್‌ ಕೋಲಾರಕ್ಕೆ ರಾಹುಲ್‌ ಗಾಂಧಿಯನ್ನು ಕರೆ ತಂದರೆ ನಾವು ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆ ತರುತ್ತೇವೆ. ರಾಹುಲ್‌ ಗಾಂಧಿ ಬಂದರೇ ಸತ್ಯವೂ ಇಲ್ಲ ಜಯವೂ ಇಲ್ಲ. ಇದರಿಂದ ಸಿದ್ದರಾಮಯ್ಯ ಸಂಪೂರ್ಣ ವಿಫಲರಾಗಲಿದ್ದಾರೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ತಿಳಿಸಿದರು. 

ಕೋಲಾರ (ಏ.02): ಕಾಂಗ್ರೆಸ್‌ ಕೋಲಾರಕ್ಕೆ ರಾಹುಲ್‌ ಗಾಂಧಿಯನ್ನು ಕರೆ ತಂದರೆ ನಾವು ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆ ತರುತ್ತೇವೆ. ರಾಹುಲ್‌ ಗಾಂಧಿ ಬಂದರೇ ಸತ್ಯವೂ ಇಲ್ಲ ಜಯವೂ ಇಲ್ಲ. ಇದರಿಂದ ಸಿದ್ದರಾಮಯ್ಯ ಸಂಪೂರ್ಣ ವಿಫಲರಾಗಲಿದ್ದಾರೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ತಿಳಿಸಿದರು. ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕಳೆದ ಒಂದು ವರ್ಷದಿಂದ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದ್ದರೆ ಚುನಾವಣಾ ರಂಗ ರಂಗೇರಿತ್ತಿತ್ತು. ಇಲ್ಲದೆ ಹೋದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷವು ಬಿಜೆಪಿಗೆ ಸ್ಪರ್ಧೆ ನೀಡುವಲ್ಲಿ ವಿಫಲವಾಗಲಿವೆ ಎಂದು ಅಭಿಪ್ರಾಯಪಟ್ಟರು.

ರಾಹುಲ್‌ ಗಾಂಧಿಗೆ ಇಮೇಜ್‌ ಇಲ್ಲ: ರಾಹುಲ್‌ ಗಾಂಧಿಯನ್ನು ಕರೆದುಕೊಂಡು ಬಂದರೆ ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಬದಲಾಗುತ್ತಾರಾ. ರಾಹುಲ್‌ ಗಾಂಧಿಗೆ ಇಮೇಜ್‌ ಇಲ್ಲ. ಏನೊಂದು ಬದಲಾವಣೆಯೂ ಆಗುವುದಿಲ್ಲ. ಹಿಂದುಳಿದ ವರ್ಗದವರ, ಅಲ್ಪಸಂಖ್ಯಾತರ ಮೀಸಲಾತಿ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ ಅದೇ ಭಾಷಣ ಮಾಡುತ್ತಾರೆ. ತಲೆ ಕೆಟ್ಟಿರುವರು ಓಟ್‌ಗಾಗಿ ಇನ್ನೊಂದು ಅರ್ಜಿ ಹಾಕಿಕೊಳ್ಳುತ್ತಾರೆ ಎಂದು ವ್ಯಂಗವಾಡಿದರು.

ನನ್ನ ಅಭಿವೃದ್ಧಿ ನೋಡಿ ಮತ್ತೊಮ್ಮೆ ನನಗೆ ಆಶೀರ್ವದಿಸಿ: ಶಾಸಕ ಹರ್ಷವರ್ಧನ್‌

ಕಾಂಗ್ರೆಸ್‌ ಪಕ್ಷದವರು ರಾಹುಲ್‌ ಗಾಂದಿ ಸಮಾವೇಶಕ್ಕೆ ಇಡೀ ರಾಜ್ಯದಿಂದ ಜನರನ್ನು ಕರೆ ತಂದರೂ ಅವರ ಕೈಯಲ್ಲಿ 50 ಸಾವಿರ ಜನರನ್ನು ಸೇರಿಸಲು ಸಾಧ್ಯವಿಲ್ಲ. ಜೆಡಿಎಸ್‌ ಬಗ್ಗೆ ನನಗೆ ಮೊದಲಿಂದಲೂ ಸಾಫ್ಟ್‌ ಕಾರ್ನರ್‌ ಇದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಬಗ್ಗೆಯೂ ಮೊದಲಿನಿಂದಲೂ ನಂಬಿಕೆ ಇದೆ. ಬಿಜೆಪಿ ಯಾರಿಗೆ ಟಿಕೆಟ್‌ ನೀಡಿದರೂ ಕೆಲಸ ಮಾಡಿ ಗೆಲ್ಲಿಸುತ್ತೇನೆ. ಚುನಾವಣೆಯಲ್ಲಿ ಕೆ.ಶ್ರೀನಿವಾಸಗೌಡರು ಕಳೆದ 5 ವರ್ಷದಿಂದ ಮಲಗಿರುವುದೇ ನನಗೆ ಆಶೀರ್ವಾದ ಎಂದರು.

ಒಂದು ವರ್ಷದಿಂದ ಬಿಜೆಪಿ ಪಕ್ಷ ಸಂಘಟನೆ: ನಾನು ಒಂದು ವರ್ಷದಿಂದ ಬಿಜೆಪಿ ಪಕ್ಷದ ಸಂಘಟನೆಗೆ ಮಾಡಿದ್ದೇನೆ, ಮಾಜಿ ಸಿಎಂ ಸಿದ್ದರಾಮಯ್ಯ ಇಲ್ಲಿ ಸ್ಪರ್ಧೆ ಮಾಡಿದ್ದರೆ ಚೆನ್ನಾಗಿತ್ತು, ಸಿದ್ದರಾಮಯ್ಯ ಬಂದಿದ್ರೆ ಇಲ್ಲವಾದ್ರೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷ ಇಲ್ಲಿ ವೀಕ್‌ ಆಗಿರುತ್ತಿತ್ತು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಅಭಿಪ್ರಾಯಪಟ್ಟರು. ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ಸುದ್ಧಿಗಾರರೊಂದಿಗೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರಚಾರ ಮುಗಿಸಿದ್ದೇನೆ. ಇವತ್ತಿನಿಂದ ನಗರ ಭಾಗದಲ್ಲಿ ಪ್ರಚಾರ ಮಾಡಲಾಗುವುದು, ಯಾರೇ ಪ್ರತಿಸ್ಪರ್ಧಿ ಆದರೂ ಚುನಾವಣೆ ಎದುರಿಸುತ್ತೇನೆ ಎಂದು ತಿಳಿಸಿದರು.

ರಾಹುಲ್‌ ಗಾಂಧಿ ಕೋಲಾರಕ್ಕೆ ಏ.5ರಂದು ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಹುಲ್‌ ಗಾಂಧಿ ಬಂದರೆ, ನಾವು ನರೇಂದ್ರ ಮೋದಿಯನ್ನು ಕರೆದುಕೊಂಡು ಬರುತ್ತೇವೆ. ರಾಹುಲ್‌ ಗಾಂಧಿಗೂ ಕೋಲಾರಕ್ಕೂ ಏನೂ ಸಂಬಂಧ. ರಾಹುಲ್‌ ಗಾಂಧಿ ಬಂದು ಹೋದರೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ವಿಫಲವಾಗುತ್ತದೆ. ರಾಹುಲ್‌ ಗಾಂಧಿಗೆ ಇಮೇಜ್‌ ಇಲ್ಲ, ಏನು ಬದಲಾವಣೆ ಆಗೋದಿಲ್ಲ ಎಂದರು. ಹಿಂದುಳಿದ ವರ್ಗದ ನಾಯಕನ ಬಗ್ಗೆ ಮಾತನಾಡಿದಕ್ಕೆ ಕೋರ್ಟ್‌ ಕ್ರಮವಹಿಸಿದೆ. ಈ ಬಾರಿಯೂ ಅದೇ ರೀತಿ ಭಾಷಣ ಕೋಲಾರದಲ್ಲಿ ಮಾಡಿದರೆ ತಲೆಕೆಟ್ಟಿರೋರು ಕೋರ್ಟ್‌ಗೆ ಇನ್ನೊಂದು ಅರ್ಜಿ ಹಾಕ್ತಾರೆ. 

ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಡಿಶುಂ... ಡಿಶುಂ...: ಪರೋಕ್ಷವಾಗಿ ಹೆಚ್.ಡಿ.ತಮ್ಮಯ್ಯ ವಿರುದ್ಧ ಕಾಂಗ್ರೆಸ್ಸಿಗರು ಕಿಡಿ

ರಾಹುಲ್‌ ಕಾರ್ಯಕ್ರಮಕ್ಕೆ ಮೂರು ಜಿಲ್ಲೆಯಲ್ಲ ಇಡೀ ರಾಜ್ಯದವರನ್ನು ಕರೆತಂದರೂ 50 ಸಾವಿರ ಜನ ಸೇರಿಸೋಕೆ ಆಗೋದಿಲ್ಲ ಎಂದು ವ್ಯಂಗ್ಯವಾಡಿದರು. ಜೆಡಿಎಸ್‌ ಬಗ್ಗೆ ನನಗೆ ಮೊದಲಿಂದಲೂ ಸಾಫ್ಟ್‌ ಕಾರ್ನರ್‌ ಇದೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಬಗ್ಗೆ ಮೊದಲಿಂದಲೂ ನಂಬಿಕೆ ಇದೆ. ಬಿಜೆಪಿ ಟಿಕೆಟ್‌ ಯಾರಿಗೂ ನೀಡಿದರೂ ಕೆಲಸ ಮಾಡಿ ಗೆಲ್ಲಿಸುತ್ತೇನೆ. ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ಮನೆಯಲ್ಲಿ 5 ವರ್ಷ ಮಲಗಿದ್ದೆ ನನಗೆ ಆಶೀರ್ವಾದ ಎಂದು ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!