
ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕಾಗಿ ಎರಡು ದಿನ ಗುಜರಾತ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು. ಗುಜರಾತ್ ಹೆಸರನ್ನು ಯಾರು ಕೆಡಿಸುತ್ತಿದ್ದಾರೋ ಅವರ ವಿರುದ್ಧ ಎಚ್ಚರದಿಂದಿರಬೇಕು ಎಂದರು.
ಶನಿವಾರ ವಲ್ಸದ್‌ನ (Valsad) ಜುಜ್ವಾದಲ್ಲಿ (Jujva) ನಡೆದ ರಾರಯಲಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 1 ಜಿಬಿ ಇಂಟರ್ನೆಟ್ (Internet) ಡೇಟಾದ ಬೆಲೆ 300 ರು. ಇತ್ತು. ಈಗ ಅದು 10 ರು.ಗೆ ಸಿಗುತ್ತಿದೆ. ಅಲ್ಲದೇ ಪ್ರಸ್ತುತ ತಿಂಗಳ ಡೇಟಾ ಬಿಲ್ ಸಹ 250ರಿಂದ 300 ರು. ಇದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರೆದಿದ್ದರೆ ಇದು 5 ಸಾವಿರ ರು.ಗೆ ಏರಿಕೆಯಾಗುತ್ತಿತ್ತು ಎಂದರು.
ಇಂದೂ ಸಹ ಮೋದಿ ರಾಲಿ
ಭಾನುವಾರವೂ ಸಹ ಅಮ್ರೇಲಿ (Amreli), ಭಾವನಗರ (Bhavanagar), ಜುನಾಗಢ ಜಿಲ್ಲೆಗಳಲ್ಲಿ ನಡೆಯಲಿರುವ ನಾಲ್ಕು ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ತವರು ರಾಜ್ಯಕ್ಕೆ ಇದು ಮೋದಿ ಅವರ ಎರಡನೇ ಭೇಟಿಯಾಗಿದ್ದು ನ.6 ರಂದು ನಡೆದ ವಿವಿಧ ಸಮಾವೇಶಗಳಲ್ಲಿ ಭಾಗಿಯಾಗಿದ್ದರು. ರಾಜ್ಯದ 182 ವಿಧಾನಸಭಾ ಕ್ಷೇತ್ರಗಳಿಗೆ ಡಿ.1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಮೋದಿ ನಾಡಿಗೆ ಯೋಗಿ ಎಂಟ್ರಿ: ಕಮಲ ಅರಳಿಸಲು 'ತ್ರಿಶೂಲವ್ಯೂಹ'
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.