ಘಟನೆ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ. ಆದರೆ ದೇಶಭಕ್ತಿ, ಸಂಸ್ಕೃತಿ, ಇತಿಹಾಸದ ಬಗ್ಗೆ ದೊಡ್ಡದಾಗಿ ಬಿಜೆಪಿಯವರು ಮಾತನಾಡುತ್ತಾರೆ. ಚಿಂತಕರ ಚಾವಡಿ, ಹಿರಿಯರ ಮನೆ ಎನಿಸಿಕೊಂಡಿರುವ ವಿಧಾನ ಪರಿಷತ್‌ನಲ್ಲಿ ಇಂಥ ಪದ ಬಳಸಿರುವುದು ಘೋರ ಅಪರಾಧ. ಯಾವ ಹೆಣ್ಣುಮಗಳೂ ಷಡ್ಯಂತ್ರದಿಂದ ಇಂಥ ಪದ ಬಳಸಿದ್ದಾರೆಂದು ಹೇಳುವುದಿಲ್ಲ ಎಂದ ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು(ಡಿ.24): ಎಂಎಲ್ಸಿ ಸಿ.ಟಿ.ರವಿ ಅವರು ಪೊಲೀಸರು ಬಂಧಿಸಿದ ಕುರಿತು ತನಿಖೆಯಾಗಲಿ, ಈಗಾಗಲೇ ವಿಷಯ ಕೋರ್ಟ್‌ನಲ್ಲಿದೆ. ಆದರೆ ಮಾಡಿದ ತಪ್ಪು ಮುಚ್ಚಿಕೊಳ್ಳಲು ಫೇಕ್ ಎನ್‌ಕೌಂಟರ್ ಅಂತ ಕತೆ ಕಟ್ಟುತ್ತಿದ್ದಾರೆ. ನೇರವಾದ ದಾರಿಯೆಂದರೆ ತಾವು ಬಳಸಿದ ಪದ ತಪ್ಪು ಎಂದು ಬಹಿರಂಗವಾಗಿ ಕ್ಷಮೆ ಕೇಳಿದರೆ ಚಾಪ್ಟರ್ ಕ್ಲೋಸ್ ಆಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿ, ಘಟನೆ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ. ಆದರೆ ದೇಶಭಕ್ತಿ, ಸಂಸ್ಕೃತಿ, ಇತಿಹಾಸದ ಬಗ್ಗೆ ದೊಡ್ಡದಾಗಿ ಬಿಜೆಪಿಯವರು ಮಾತನಾಡುತ್ತಾರೆ. ಚಿಂತಕರ ಚಾವಡಿ, ಹಿರಿಯರ ಮನೆ ಎನಿಸಿಕೊಂಡಿರುವ ವಿಧಾನ ಪರಿಷತ್‌ನಲ್ಲಿ ಇಂಥ ಪದ ಬಳಸಿರುವುದು ಘೋರ ಅಪರಾಧ. ಯಾವ ಹೆಣ್ಣುಮಗಳೂ ಷಡ್ಯಂತ್ರದಿಂದ ಇಂಥ ಪದ ಬಳಸಿದ್ದಾರೆಂದು ಹೇಳುವುದಿಲ್ಲ ಎಂದರು.
undefined
ಸಿ.ಟಿ.ರವಿ ಪ್ರಕರಣ ನೈತಿಕ ಸಮಿತಿಗೆ ವಹಿಸಿದ್ದರೆ ತಿಕ್ಕಾಟ ತಪ್ಪುತ್ತಿತ್ತೆ? ಕಾನೂನು ತಜ್ಞರು ಹೇಳಿದ್ದಿಷ್ಟು!
ಒಂದು ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೆರಳಿಸಿದ್ದರೂ ಇಂಥ ಶಬ್ದ ಬಳಸುವುದು ಸರಿಯೇ ಎಂದು ಪ್ರಶ್ನಿಸಿದ ಅವರು, ಸಂಸ್ಕೃತಿ ಬಗ್ಗೆ ಮಾತನಾಡುವವರು ಈ ಪದ ಬಳಸಿದ್ದು ಖಂಡನೀಯ ಎಂದರು. ಬಿಜೆಪಿಯವರು ಬೆಳಗಾವಿ ಚಲೋ ನಡೆಸಲು ಮುಂದಾಗಿರುವುದನ್ನು ನೋಡಿದರೆ ಅವರ ಬಳಿ ಬೇರೆ ಯಾವ ಬಂಡವಾಳವೂ ಇದ್ದಂತಿಲ್ಲ ಎಂಬುದು ಗೊತ್ತಾಗುತ್ತದೆ. ಜನ ಎಲ್ಲವನ್ನೂ ನೋಡುತ್ತಾರೆ ಎಂದು ಹೇಳಿದರು.
ಲಕ್ಷ್ಮೀ ವೈದ್ಯರಲ್ಲ, ಗಾಯ ಜಗತ್ತೇ ನೋಡಿದೆ: ಸಿ.ಟಿ. ರವಿ
ಚಿಕ್ಕಮಗಳೂರು: ಸಿ.ಟಿ. ರವಿ ಅವರಿಗೆ ಏನೂ ಆಗಿಲ್ಲ, ತಲೆಗೆ ಗಾಯವಾಗಿ ಎಷ್ಟು ಹೊಲಿಗೆ ಬಿದ್ದಿದೆ ಎಂದು ಲಕ್ಷ್ಮೀ ಹೆಬ್ಬಾಳರ್ ಕೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಸಿ. ಟಿ.ರವಿ, ಅವರೇನು ವೈದ್ಯರಲ್ಲ. ಗಾಯ, ರಕ್ತ ಜಗತ್ತೇ ನೋಡಿದೆ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ಸಿಗರು ತುರ್ತು ಪರಿಸ್ಥಿತಿ ಮನಸ್ಥಿತಿಯಿಂದ ಹೊರಗೆ ಬರಬೇಕು. ಬೆಳಗಾವಿ ರಿಪಬ್ಲಿಕ್ ಆಗಲು ಜನ ಒಪ್ಪಲ್ಲ. ನಾವು ಅವಕಾಶ ಕೊಡಲ್ಲ. ನನ್ನ ಮೇಲೆ ದೈಹಿಕ ಹಲ್ಲೆ ಸಂಬಂಧ ಪರಿಷತ್ ಸದಸ್ಯರಾದ ಕಿಶೋರ್, ಅರುಣ್ ದೂರು ನೀಡಿದ್ದಾರೆ. ಏನು ಕ್ರಮ ಕೈಗೊಳ್ಳು ತ್ತಾರೆ ನೋಡೋಣ. ಖಾನಾಪುರದಲ್ಲಿ ನಾನು ದೂರು ನೀಡಿದ್ದೇನೆ. ಈವರೆಗೂ ಎಫ್‌ಐಆರ್ ಪ್ರತಿ ಕೊಟ್ಟಿಲ್ಲ ಎಂದು ತಿಳಿಸಿದರು. ಅವಾಚ್ಯ ಶಬ್ದ ಬಳಕೆ ಬಗ್ಗೆ ಪ್ರಧಾನಿ ಮೋದಿಗೆ ದೂರು ನೀಡುವುದಾಗಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ ಬಿಜೆಪಿಯವರು ಎಲ್ಲರೂ ದುಷ್ಯಾಸನರಾದರೆ ಅವರ ಬಳಿ ಏಕೆ ನ್ಯಾಯ ಕೇಳುತ್ತಾರೆ ಎಂದು ಅವರು ಹೇಳಿದರು. ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಬೇಲೂರು ಕ್ಷೇತ್ರದ ಶಾಸಕ ಸುರೇಶ್ ಇತರರು ಸಿ.ಟಿ. ರವಿ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಲೆಗೆ ಗಾಯದ ಬಳಿಕವೂ 3-4 ಗಂಟೆ ಚಿಕಿತ್ಸೆ ಕೊಡಿಸಲಿಲ್ಲ. ಪಕ್ಕೆ, ಬೆನ್ನಿನಲ್ಲಿ 3-4 ಗುರುತುಗಳು ಇನ್ನೂ ಇವೆ. ಓರ್ವ ಶಾಸಕನಿಗೆ ಸುತ್ತಾಡಿಸಿದ್ದು, ಹಿಂಸೆ ಕೊಟ್ಟಿದ್ದನ್ನು ಆ ಮಹಾತಾಯಿ ಹೇಗೆ ಒಪ್ಪಿಕೊಳ್ತಾರೆ. ತಪ್ಪು ಮುಚ್ಚಿಕೊಳ್ಳಲು ಆ ತಾಯಿ ಸುಳ್ಳುಗಳ ಸರಮಾಲೆ ಹೆಣೆದಿದ್ದಾರೆ ಎಂದರು.
ಸಿ.ಟಿ.ರವಿ ಅವಾಚ್ಯ ಪದ ಬಳಕೆ ಪ್ರಕರಣ ಮುಗಿದ ಅಧ್ಯಾಯ; ಸಭಾಪತಿ ಬಸವರಾಜ ಹೊರಟ್ಟಿ ತೀರ್ಪು!
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ತಲೆ ಕೆಟ್ಟಿಲ್ಲ: ರವಿ ಪತ್ನಿ ಪಲ್ಲವಿ
ಚಿಕ್ಕಮಗಳೂರು: ಸಿ.ಟಿ.ರವಿ ಒಳ್ಳೆ ಡ್ರಾಮಾ ಮಾಸ್ಟರ್ ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಸಿ.ಟಿ. ರವಿ ಅವರ ಪತ್ನಿ ಪಲ್ಲವಿ ರವಿ ಅವರು ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಹಾಳಾಗಿರಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಪ್ ಆಗಿ ಒಂದು ಹೋಲ್ ಆಗಿದೆ. 2 ದಿನ ಬ್ಯಾಂಡೇಜ್, ಆಮೇಲೆ ಒಯಿಂಟ್ಮೆಂಟ್ (ಮುಲಾಮು) ಹಾಕಬೇಕು. ಕೂದಲಿನ ಮೇಲೆ ಬ್ಯಾಂಡೇಜ್ ಸ್ಟಿಕ್ಕರ್ ನಿಲ್ಲಲ್ಲ ಅಂತ, ಬ್ಯಾಂಡೇಜ್ ಹಾಕಿದ್ದಾರೆ. ಗಾಯ ಆಗಿಲ್ಲ ಅಂದ್ರೆ ಎಷ್ಟು ದಿನಾ ಅಂತ ನಾಟಕ ಮಾಡಲು ಆಗುತ್ತೆ ಎಂದು ಹೇಳಿದ್ದಾರೆ