ಡಿ.ಕೆ.ಸುರೇಶ್ ಜೊತೆ ಹೊಂದಾಣಿಕೆ : ಗೆದ್ದ ಮುನಿರತ್ನ

By Kannadaprabha News  |  First Published Nov 11, 2020, 8:58 AM IST

ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿದೆ. ಇದೇ ವೇಳೆ ಗೆದ್ದ ನಾಯಕರು ತಮ್ಮ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. 


ಬೆಂಗಳೂರು (ನ.11): ‘ಸಚಿವ ಸ್ಥಾನ ಕೇಳುವುದು ಧರ್ಮವಲ್ಲ. ಇಂತಹ ಖಾತೆ ಬೇಕೆಂದು ಕೇಳಿಲ್ಲ, ಕೇಳುವುದೂ ಇಲ್ಲ. ಖಾತೆ ವಿಚಾರ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ಹಾಗೂ ವರಿಷ್ಠರಿಗೆ ಬಿಟ್ಟವಿಚಾರ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದು ರಾಜರಾಜೇಶ್ವರಿ ನಗರದಲ್ಲಿ ಹ್ಯಾಟ್ರಿಕ್‌ ಜಯ ಸಾಧಿಸಿದ ಮುನಿರತ್ನ ಹೇಳಿದ್ದಾರೆ.

‘ನಂಬಿಕೆ ಇಟ್ಟು, ಮತ ದೇವರು ಮತ ಭಿಕ್ಷೆ ನೀಡಿದ್ದಾರೆ. ಮತದಾರ ದೇವರ ಋುಣ ತೀರಿಸಲು ಸಾಧ್ಯವಿಲ್ಲ. ಪ್ರಾಮಾಣಿಕವಾಗಿ ಇನ್ನು ಎರಡೂವರೆ ವರ್ಷ ಹಗಲಿರುಳು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಾಯಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಇಂದಿನಿಂದಲೇ ದಿನದ 20 ತಾಸು ದುಡಿಯುತ್ತೇನೆ’ ಎಂದು ಮತದಾರರಿಗೆ ಕೈ ಮುಗಿದು ಧನ್ಯವಾದ ಅರ್ಪಿಸಿದರು.

Latest Videos

undefined

RR ನಗರದಲ್ಲಿ JDS-BJP ಹೊಂದಾಣಿಕೆ? ಜೊತೆಗೆ ಗಂಭೀರ ಅನುಮಾನ

ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಅವರು ಈ ಕ್ಷೇತ್ರದ ಸಂಸದರಾಗಿದ್ದು, ಹೊಂದಾಣಿಕೆಯಿಂದ ಕೆಲಸ ಮಾಡಿಕೊಂಡು ಹೋಗುತ್ತೇವೆ. ಯಾವುದೇ ದ್ವೇಷ ಇಲ್ಲ ಎಂದು ತಿಳಿಸಿದರು.

click me!