ರಮೇಶ ಕತ್ತಿ ಕಾಂಗ್ರೆಸ್‌ ಬಂದರೆ ಸ್ವಾಗತಿಸುತ್ತೇನೆ: ಸಚಿವ ಸತೀಶ್‌ ಜಾರಕಿಹೊಳಿ

By Kannadaprabha News  |  First Published Mar 20, 2024, 6:23 AM IST

ಚಿಕ್ಕೋಡಿ ಲೋಕಸಭೆ ಅಭ್ಯರ್ಥಿ ಆಯ್ಕೆ ಕುರಿತು ಕಾರ್ಯಕರ್ತರ ಸಭೆ ಮಾಡುತ್ತಿದ್ದೇವೆ. ರಮೇಶ ಕತ್ತಿ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. 


ಚಿಕ್ಕೋಡಿ (ಮಾ.20): ಚಿಕ್ಕೋಡಿ ಲೋಕಸಭೆ ಅಭ್ಯರ್ಥಿ ಆಯ್ಕೆ ಕುರಿತು ಕಾರ್ಯಕರ್ತರ ಸಭೆ ಮಾಡುತ್ತಿದ್ದೇವೆ. ರಮೇಶ ಕತ್ತಿ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಲಕ್ಷ್ಮಣ ಸವದಿ, ಪ್ರಕಾಶ ಹುಕ್ಕೇರಿ ಸೇರಿದಂತೆ ರಮೇಶ ಕತ್ತಿ ಜೊತೆಗೆ ನಮ್ಮದು ಯಾವುದೇ ಮಾತುಕತೆ ಆಗಿಲ್ಲ. ರಮೇಶ ಕತ್ತಿ ಅಥವಾ ಬೇರೆ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ ಮಾಡುತ್ತೇವೆ ಎಂದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಚಿಕ್ಕೋಡಿ ಭಾಗದ ಕಾರ್ಯಕರ್ತರ ಹಾಗೂ ನಾಯಕರ ಅಭಿಪ್ರಾಯ ಪಡೆಯಲು ಆಯೋಜಿಸಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗೆಲ್ಲುವ ಅಭ್ಯರ್ಥಿ ಕಡೆಗೆ ನಮ್ಮ ಒಲುವು ಇದೆ. ಹೀಗಾಗಿ ಗೆಲ್ಲುವ ಅಭ್ಯರ್ಥಿಗಳು ಯಾರೇ ಆದರೂ ಅವರನ್ನು ಸ್ವಾಗತ ಮಾಡುತ್ತೇವೆ. ರಮೇಶ ಕತ್ತಿ ಪಕ್ಷ ಸೇರ್ಪಡೆ ವಿಚಾರವಾಗಿ ಲಕ್ಷ್ಮಣ ಸವದಿ, ಪ್ರಕಾಶ ಹುಕ್ಕೇರಿ ಸೇರಿದಂತೆ ಯಾರ ಜೊತೆಗೆ ಯಾವುದೇ ಮಾತುಕತೆ ಆಗಿಲ್ಲ ಎಂದು ಹೇಳಿದರು.

Tap to resize

Latest Videos

ಅಭ್ಯರ್ಥಿ ಆಯ್ಕೆ ಕುರಿತು ಮುಖಂಡರು, ಕಾರ್ಯಕರ್ತರ ಜೊತೆಗೆ ಸಭೆ ಮಾಡುತ್ತಿದ್ದೇನೆ.ಇಂದು, ನಾಳೆ ಇನ್ನೂ ಎರಡು ದಿನ ಸಭೆ ಮಾಡುತ್ತೇನೆ .8 ಕ್ಷೇತ್ರದ ಹಾಲಿ, ಮಾಜಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ರವಾನೆ ಮಾಡಲಾಗುವುದು. ಮುಂದಿನ ನಿರ್ಧಾರ ಹೈಕಮಾಂಡ್‌ ಮಾಡಲಿದೆ ಎಂದು ತಿಳಿಸಿದರು. ಪ್ರಿಯಂಕಾ ಜಾರಕಿಹೋಳಿ ಸ್ಪರ್ಧೆ ಇದುವರೆಗೂ ಫೈನಲ್ ಆಗಿಲ್ಲ. ಚಿಕ್ಕೋಡಿ ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರ ಒಪ್ಪಿಗೆ ಬಳಿಕ ಪ್ರಿಯಾಂಕಾ ಅಥವಾ ಯಾರೇ ಆಗಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಚುನಾವಣೆ ಬಂದಾಗ ಆಸ್ಪತ್ರೆಯಿಂದ ಬರ್ತಾರೆ: ಸಂಸದ ಅನಂತ್‌ ಬಗ್ಗೆ ಸತೀಶ್‌ ವ್ಯಂಗ್ಯ

ಸಭೆಯಲ್ಲಿ ಬುಡಾ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮಣರಾವ ಚಿಂಗಳೆ ಅವರನ್ನು ಸಚಿವ ಸತೀಶ ಜಾರಕಿಹೊಳಿ ಅವರು ಸನ್ಮಾನಿಸಿ ಗೌರವಿಸಿದರು. ಮಾಜಿ ಸಚಿವ ವೀರಕುಮಾರ ಪಾಟೀಲ, ಎಸ್.ಬಿ. ಘಾಟಗೆ, ಕಾಕಾಸಾಹೇಬ ಪಾಟೀಲ, ಲಕ್ಷ್ಮಣರಾವ ಚಿಂಗಳೆ, ಪ್ರಭಾಕರ ಕೋರೆ, ಮಹಾವೀರ ಮೋಹಿತೆ, ಎಚ್.ಎಸ್.ನಸಲಾಪೂರೆ, ಸಾಬಿರ ಜಮಾದಾರ,ರಾಜು ಕೋಟಗಿ ಉಪಸ್ಥಿತರಿದ್ದರು.

click me!