ರಾಜ್ಯದಲ್ಲಿ 150 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮತ್ತೆ ಅಧಿಕಾರಕ್ಕೆ ತರುವುದಾಗಿ ಸದನದಲ್ಲೇ ವಿಪಕ್ಷಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದು, ಅವರು ಸವಾಲು ಹಾಕಿದರೆ ಏನಾಗುತ್ತದೆಂಬ ಅರಿವು ವಿಪಕ್ಷಗಳಿಗೆ ಇದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.
ದಾವಣಗೆರೆ (ಫೆ.26): ರಾಜ್ಯದಲ್ಲಿ 150 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮತ್ತೆ ಅಧಿಕಾರಕ್ಕೆ ತರುವುದಾಗಿ ಸದನದಲ್ಲೇ ವಿಪಕ್ಷಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದು, ಅವರು ಸವಾಲು ಹಾಕಿದರೆ ಏನಾಗುತ್ತದೆಂಬ ಅರಿವು ವಿಪಕ್ಷಗಳಿಗೆ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ನಗರದ ಮಾಗನೂರು ಬಸಪ್ಪ ಮೈದಾನದಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿ, ಆಧುನಿಕ ಭಗೀರಥ ಯಡಿಯೂರಪ್ಪನವರು.
ರೈತರಿಗಾಗಿ ಪ್ರತ್ಯೇಕ ಬಜೆಟ್, ಬಡ್ಡಿ ರಹಿತ ಸಾಲ ಕೊಟ್ಟು, ಉಚಿತವಾಗಿ ಪಂಪ್‌ಸೆಟ್‌ಗಳನ್ನು ನೀಡಿದ್ದರು. ಆದರೆ, ಯಾವುದೇ ಕಾಂಗ್ರೆಸ್ ಸರ್ಕಾರವೂ ಕೊಟ್ಟಿರಲಿಲ್ಲ ಎಂದರು. ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ಯಡಿಯೂರಪ್ಪ ಪ್ರವಾಸ ಮಾಡಿ, ಬಿಜೆಪಿಯನ್ನು 150 ಕ್ಷೇತ್ರಗಳಲ್ಲಿ ಗೆಲ್ಲಿಸಿ ಅಧಿಕಾರಕ್ಕೆ ತರಲಿದ್ದಾರೆ. ಯಡಿಯೂರಪ್ಪನವರಂತೆ ನಾನೂ ಕೂಡ ಮುಂದಿನ 40-45 ವರ್ಷ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.
Grama Vastavya: ಶೀಘ್ರದಲ್ಲಿಯೇ ಮಹಿಳೆಯರ ಖಾತೆಗೆ 1000 ರೂ ಜಮೆ: ಸಚಿವ ಅಶೋಕ್
ದಿವಾಳಿಯಾದ ಕಾಂಗ್ರೆಸ್ಸಿಗೆ ಅಧಿಕಾರದ ಹಗಲುಗನಸು ಆರು ದಶಕ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಈಗ ದಿವಾಳಿಯಾಗಿದೆ. ಇಡೀ ದೇಶಾದ್ಯಂತ 60 ಸಂಸದರೂ ಇಲ್ಲದ ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ರಾಜ್ಯದಲ್ಲಿ ಮತ್ತೆ ಸಿಎಂ ಆಗುತ್ತೇನೆಂಬ ಕನಸು ಕಾಣುತ್ತಿರುವ ನಾಯಕು 5 ವರ್ಷದ ಹಿಂದೆ ಹಿಂದುಗಳ ಹತ್ಯೆ ಮಾಡಿದರು. ನಂತರ ಕಾಂಗ್ರೆಸ್ಸಿಗೆ ಜನತೆ ಮನ್ನಣೆ ನೀಡಲಿಲ್ಲ. ತನ್ನದೇ ಪಕ್ಷದ ಪರಿಶಿಷ್ಟಜಾತಿಯ ಶಾಸಕನ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳದೇ, ಅಲ್ಪಸಂಖ್ಯಾತರ ಮತ ಕಳೆದುಕೊಳ್ಳಬೇಕಾಗುತ್ತದೆಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪರ ನಿಲ್ಲುವ ಕೆಲಸವನ್ನೂ ಕಾಂಗ್ರೆಸ್ಸಿಗರು ಮಾಡಲಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.
ಬಿಜೆಪಿ ಅಧಿಕಾರಕ್ಕೆ ಬರಲಿ ಎಂದು ನಿತ್ಯ ದೇವರಿಗೆ ಹೂ ಹಾಕಿ: ಪ್ರಧಾನಿ ಮೋದಿ ಅವರಿಗೆ ಒಳ್ಳೆಯದಾಗಲಿ, ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿ ಇಂತ ನಿತ್ಯ ದೇವರಿಗೆ ಹೂ ಹಾಕಿ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಶನಿವಾರ ಇಲ್ಲಿ ಆಯೋಜಿಸಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಯಾರೂ ತಪ್ಪಿಸಲಾಗದು ಎಂದರು. 60 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಈಗ ಚುನಾವಣೆ ವೇಳೆ ಉಚಿತ ವಿದ್ಯುತ್, 10 ಕೇಜಿ ಅಕ್ಕಿ ಸೇರಿ ನಾನಾ ಭರವಸೆ ನೀಡುತ್ತಿದೆ. ಕಾಂಗ್ರೆಸ್ ಪೊಳ್ಳು ಭರವಸೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ನನ್ನ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ: ಸಚಿವ ಮುರುಗೇಶ್ ನಿರಾಣಿ ಗುಡುಗು
ದಿವಾಳಿ ಕಾಂಗ್ರೆಸ್ಸಿಗೆ ಅಧಿಕಾರದ ಹಗಲುಗನಸು: ಆರು ದಶಕ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಈಗ ದಿವಾಳಿಯಾಗಿದೆ. ಇಡೀ ದೇಶಾದ್ಯಂತ 60 ಸಂಸದರೂ ಇಲ್ಲದ ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ರಾಜ್ಯದಲ್ಲಿ ಮತ್ತೆ ಸಿಎಂ ಆಗುತ್ತೇನೆಂಬ ಕನಸು ಕಾಣುತ್ತಿರುವ ನಾಯಕು 5 ವರ್ಷದ ಹಿಂದೆ ಹಿಂದುಗಳ ಹತ್ಯೆ ಮಾಡಿದರು. ಹಿಂದುಗಳ ದಾರುಣ ಹತ್ಯೆ ಮಾಡಿದವರಿಗೆ ಅಧಿಕಾರ ಕೊಡದೇ, ತಿರಸ್ಕರಿಸಿದರು. ನಂತರ ಕಾಂಗ್ರೆಸ್ಸಿಗೆ ಜನತೆ ಮನ್ನಣೆ ನೀಡಲಿಲ್ಲ. ತನ್ನದೇ ಪಕ್ಷದ ಪರಿಶಿಷ್ಟಜಾತಿಯ ಶಾಸಕನ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳದೇ, ಅಲ್ಪಸಂಖ್ಯಾತರ ಮತ ಕಳೆದುಕೊಳ್ಳಬೇಕಾಗುತ್ತದೆಂದು ಅಖಂಡ ಶ್ರೀನಿವಾಸಮೂರ್ತಿ ಪರ ನಿಲ್ಲುವ ಕೆಲಸವನ್ನೂ ಕಾಂಗ್ರೆಸ್ಸಿಗರು ಮಾಡಲಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.