ಗೆಲ್ಲಿಸಿದರೇ ತಲೆ ಎತ್ತಿ ನಡೆಯುವ ಹಾಗೆ ನೋಡಿಕೊಳ್ಳುತ್ತೇನೆ: ರಮೇಶ ಕತ್ತಿ

By Kannadaprabha News  |  First Published Apr 16, 2023, 10:24 PM IST

ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಬರುವ 20 ದಿನಗಳಲ್ಲಿ ಪಕ್ಷದ ಪರವಾಗಿ ದುಡಿದು ಬಿಜೆಪಿ ಅಭ್ಯರ್ಥಿಯಾಗಿರುವ ನನ್ನನ್ನು ಗೆಲ್ಲಿಸಿದರೇ ಬರುವ 25 ವರ್ಷ ಬಿಜೆಪಿ ಕಾರ್ಯಕರ್ತರು ತಲೆ ಎತ್ತಿ ನಡೆಯುವ ಹಾಗೆ ನೋಡಿಕೊಳ್ಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಭರವಸೆ ನೀಡಿದರು. 


ಚಿಕ್ಕೋಡಿ (ಏ.16): ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಬರುವ 20 ದಿನಗಳಲ್ಲಿ ಪಕ್ಷದ ಪರವಾಗಿ ದುಡಿದು ಬಿಜೆಪಿ ಅಭ್ಯರ್ಥಿಯಾಗಿರುವ ನನ್ನನ್ನು ಗೆಲ್ಲಿಸಿದರೇ ಬರುವ 25 ವರ್ಷ ಬಿಜೆಪಿ ಕಾರ್ಯಕರ್ತರು ತಲೆ ಎತ್ತಿ ನಡೆಯುವ ಹಾಗೆ ನೋಡಿಕೊಳ್ಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಭರವಸೆ ನೀಡಿದರು. ಪಟ್ಟಣದ ಕೇಶವ ಕಲಾ ಭವನದಲ್ಲಿ ಶುಕ್ರವಾರ ಚಿಕ್ಕೋಡಿ-ಸದಲಗಾ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ನಡೆದ ಕಾರ್ಯಕರ್ತರ ಪ್ರಥಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಮಲ ಅರಳಿಸಲು ಎಲ್ಲ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿರುವುದು ಖುಷಿ ತರಿಸಿದೆ. 

ಕ್ಷೇತ್ರದಲ್ಲಿ ಶಾಪ ವಿಮೋಚನಾ ಮಾಡಲು ರಮೇಶ ಕತ್ತಿ ಸ್ಪರ್ಧೆ ಮಾಡಬೇಕು ಎಂದಾಗ ನಾನು ಒಪ್ಪಿಕೊಂಡು ಸ್ಪರ್ಧೆಗೆ ಒಲುವು ತೋರಿಸಲಾಗಿದೆ. ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷನಾಗಿ ಚಿಕ್ಕೋಡಿ ತಾಲೂಕಿನ ರೈತ ಸದಸ್ಯರಿಗೆ ಪಿಕೆಪಿಎಸ್‌ಗಳ ಮೂಲಕ ಪಕ್ಷಾತೀತವಾಗಿ ಸಾಲ ನೀಡಿ ಅವರ ಏಳ್ಗೆಗೆ ಕೆಲಸ ಮಾಡಿದ್ದೇನೆ. ಚಿಕ್ಕೋಡಿ ತಾಲೂಕಿನ 78 ಪಿಕೆಪಿಎಸ್‌ಗಳಿಗೆ 316 ಕೋಟಿ ಸಾಲ ಮನ್ನಾ ಮಾಡಿಸಿದ್ದೇನೆ. 1 ಲಕ್ಷ 16 ಸಾವಿರ ಜನ ಫಲಾನುಭವಿಗಳಿದ್ದು ಅದರ ಪ್ರತಿಫಲವಾಗಿ ನರೇಂದ್ರ ಮೋದಿಯವರ ಕೈಬಲಪಡಿಸಲು ನನಗೊಂದು ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿ ಆರ್ಶೀವದಿಸಿ ನಿಮ್ಮ ಸೇವೆಯನ್ನು ಅರಸಾಗಿ ಮಾಡದೇ ಆಳನಾಗಿ ಮಾಡುತ್ತೇನೆ ಎಂದರು.

Tap to resize

Latest Videos

ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನತೆ ರೋಸಿ ಹೋಗಿದೆ: ಎಚ್.ಡಿ.ಕುಮಾರಸ್ವಾಮಿ

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ 8 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ. ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯಬೇಕು. ಚಿಕ್ಕೋಡಿ ಕ್ಷೇತ್ರ ಗೆಲ್ಲಲು ಪೈಲವಾನ ರಮೇಶ ಕತ್ತಿ ಸಿದ್ಧರಾಗಿದ್ದಾರೆ. ಎಲ್ಲ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಬರುವ 25ದಿನಗಳಲ್ಲಿ ಬಿಜೆಪಿ ಮಾಡಿದ ಕಾರ್ಯವನ್ನು ಜನರಿಗೆ ತಲುಪಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಪ್ರಯತ್ನಿಸಬೇಕು. ಚಿಕ್ಕೋಡಿ ಕ್ಷೇತ್ರದಲ್ಲಿ ವನವಾಸ ಮುಗಿಸಿ ರಾಮರಾಜ್ಯ ನಿರ್ಮಾಣ ಮಾಡಲು ರಮೇಶ ಕತ್ತಿಯವರನ್ನು ಗೆಲ್ಲಿಸಬೇಕು ಎಂದು ಕೋರಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, 20 ವರ್ಷದಲ್ಲಿ ಕಾಂಗ್ರೆಸ್‌ ನೇರ ಚುನಾವಣೆ ಮಾಡಿಲ್ಲ. ಬಿಜೆಪಿ ಪ್ರಬಲ ಅಭ್ಯರ್ಥಿ ಕೊಟ್ಟಿದೆ. ಕಾಂಗ್ರೆಸ್‌ ಅಭ್ಯರ್ಥಿಗೆ ಬಹು ದೊಡ್ಡ ಸವಾಲಾಗಿ ಬಿಜೆಪಿ ಟಿಕೇಟ್‌ ನೀಡಿದೆ. ರಮೇಶ ಕತ್ತಿ ಆಯ್ಕೆ ಚಿಕ್ಕೋಡಿ ಸದಲಗಾ ಕ್ಷೇತ್ರಕ್ಕೆ ಶಕ್ತಿ ತಂದಿದೆ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕಲ್ಲೋಳ ಬ್ಯಾರೇಜ ಮಂಜೂರು ಮಾಡಿದ್ಸು ಬಿಜೆಪಿ. ಆದರೆ ನಾವು ಮಾಡಿದ್ದು ಅಂತ ಕಾಂಗ್ರೆಸನವರು ಹೇಳುತ್ತಿದ್ದಾರೆ. ಎಲ್ಲ ನಾಯಕರು ಒಂದಾದರೇ ಗೆಲುವು ಸುಲಭವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಕೆಎಲ್‌ಇ ಕಾರಾರ‍ಯಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಸುಳ್ಳು ಹೇಳುವುದರಲ್ಲಿ ಕಾಂಗ್ರೇಸ್‌ ಪಕ್ಷದ ಅಭ್ಯರ್ಥಿ ನಿಶ್ಸಿಮರು ಅವರ ಮಾತಿಗೆ ಮರಳಾಗದೇ ನಾವಿಂದು ಎಲ್ಲರೂ ಒಗ್ಗಟ್ಟಾಗಿದ್ದು ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಮೇಶ ಕತ್ತಿಯವರನ್ನು ಎಲ್ಲರೂ ಬೆಂಬಲಿಸೋಣ ಎಂದರು.

ಕೃಷ್ಣಾ ಬಚಾವತ್‌ ಯೋಜನೆಯಡಿ ಈ ಭಾಗದಲ್ಲಿ ಸಾಕಷ್ಟುನೀರಾವರಿ ಯೋಜನೆಗಳು ಆಗಬೇಕಿದೆ. ಈಗಾಗಲೇ ಮಹಾಂತೇಶ ಕವಟಗಿಮಠ ಅವರು ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಮಂಜೂರು ಮಾಡಿಸಲು ಯಶಸ್ಸು ಕಂಡಿದ್ದಾರೆ. ಶಾಸಕ ಡಿ.ಎಂ.ಐಹೊಳೆ ಅವರು ಕರಗಾಂವ ಏತ ನೀರಾವರಿ ಯೋಜನೆಗೆ ಈಗಾಗಲೇ ಶಿಲಾನ್ಯಾಸ ಮಾಡಿ ಕೆಲಸಕ್ಕೆ ಚಾಲನೆ ನೀಡಿದ್ದಾರೆ, ಶಿವಶಕ್ತಿ ಏತ ನೀರಾವರಿ ಯೋಜನೆ ಮಂಜೂರಿ ಹಂತದಲ್ಲಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಶಾಸಕ ಡಿ.ಎಂ.ಐಹೊಳೆ ನ್ಯಾಯವಾದಿ ಎಂ.ಬಿ.ಜಿರಲಿ, ಜಗದೀಶ ಕವಟಗಿಮಠ, ಉಜ್ವಲಾ ಬಡವನಾಚೆ, ಚಂದ್ರಕಾಂತ ಕೋಟಿವಾಲೆ, ಭರತೇಶ ಬನವಣೆ, ಮಲ್ಲಿಕಾರ್ಜುನ ಕೋರೆ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಬಿಹಾರ ಶಾಸಕ ಸಂಜಯ ಚೌರಾಸಿ, ವಿಶ್ವನಾಥ ಕಮತೆ, ಪ್ರಕಾಶ ಪಾಟೀಲ, ಅಪ್ಪಾಸಾಹೇಬ ಜೊಲ್ಲೆ, ಪಪ್ಪು ಪಾಟೀಲ, ಶಾಂಭವಿ ಅಶ್ವಥಪುರ, ಶಕುಂತಲಾ ಡೋಣವಾಡೆ, ಸುರೇಶ ಬೆಲ್ಲದ, ಡಾ.ರಾಜೇಶ ನೇರ್ಲಿ, ಸತೀಶ ಅಪ್ಪಾಜಿಗೋಳ, ನಾಗೆಶ ಕಿವಡ ಉಪಸ್ಥಿತರಿದ್ದರು. ಸಂಜಯ ಪಾಟೀಲ ಸ್ವಾಗತಿಸಿದರು.

ಮಾದಪ್ಪ ನನ್ನ ಕಳುಹಿಸಿದ್ದಾನೆ, ಬರಿಗೈಲಿ ಕಳುಹಿಸಬೇಡಿ: ಸಚಿವ ಸೋಮಣ್ಣ

ಏನ್‌ ಕೇಳಿದರೇ ನಾನೇ ಮಾಡಿದ್ದೇನೆ ಎಂದು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್‌ ಮುಖಂಡ ಪ್ರಕಾಶ ಹುಕ್ಕೇರಿ ಅವರೊಮ್ಮೆ ಸೋಲಿನ ಅನುಭವ ನೋಡುವ ಇಚ್ಚೆ ನನಗಿದೆ.
-ಡಾ.ಪ್ರಭಾಕರ ಕೋರೆ, ಮಾಜಿ ಸಂಸದರು.

click me!