ಯಾರ ಮೇಲೂ ನನಗೆ ಸೇಡು, ದುರುದ್ದೇಶವಿಲ್ಲ: ಸಿ.ಟಿ.ರವಿ

Published : Mar 09, 2025, 09:34 PM IST
ಯಾರ ಮೇಲೂ ನನಗೆ ಸೇಡು, ದುರುದ್ದೇಶವಿಲ್ಲ: ಸಿ.ಟಿ.ರವಿ

ಸಾರಾಂಶ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 19ರಂದು ನಡೆದಿದ್ದು ಅಹಿತಕರ ಘಟನೆ. ನಾನು ಯಾರ ಮೇಲೂ ಆರೋಪ ಹೊರಿಸಲ್ಲ. ಯಾರ ಮೇಲೂ ನನಗೆ ಸೇಡು ಮತ್ತು ದುರುದ್ದೇಶವಿಲ್ಲ. ಎಲ್ಲವನ್ನೂ ಯಲ್ಲಮ್ಮ ದೇವಿ ಬಳಿ ನಿವೇದಿಸಿಕೊಂಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.  

ಸವದತ್ತಿ (ಮಾ.09): ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 19ರಂದು ನಡೆದಿದ್ದು ಅಹಿತಕರ ಘಟನೆ. ನಾನು ಯಾರ ಮೇಲೂ ಆರೋಪ ಹೊರಿಸಲ್ಲ. ಯಾರ ಮೇಲೂ ನನಗೆ ಸೇಡು ಮತ್ತು ದುರುದ್ದೇಶವಿಲ್ಲ. ಎಲ್ಲವನ್ನೂ ಯಲ್ಲಮ್ಮ ದೇವಿ ಬಳಿ ನಿವೇದಿಸಿಕೊಂಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ಸವದತ್ತಿಯ ಸುಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಭೇಟಿ ನೀಡಿ, ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದ ನಂತರ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು. ಎಲ್ಲರಿಗೂ ಒಳಿತಾಗುವಂತೆ ಪೂಜಿಸುವ ಜತೆಗೆ, ಹರಕೆ ತೀರಿಸಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು. ಲಕ್ಷಾಂತರ ಭಕ್ತರ ಮನೆದೇವತೆ ಯಲ್ಲಮ್ಮ ದೇವಿ. ಈ ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಬೇಕು. ಯಲ್ಲಮ್ಮ ದೇವಸ್ಥಾನ ಒಂದು ಪ್ರಮುಖ ಶಕ್ತಿಪೀಠ. 

ಇಲ್ಲಿಗೆ ಬರುವ ಭಕ್ತರಲ್ಲಿ ಭಕ್ತಿ–ಭಾವ ಮೂಡುವಂತೆ ಸೌಕರ್ಯ ಕಲ್ಪಿಸಬೇಕು. ಅಲ್ಲದೆ ನಿರಂತರವಾಗಿ ಇಲ್ಲಿ ದಾಸೋಹ ನಡೆಯಬೇಕು ಎಂದರು. ಯಲ್ಲಮ್ಮ ದೇವಸ್ಥಾನದ ಪರವಾಗಿ ಸವದತ್ತಿಯ ಬಿಜೆಪಿ ತಾಲೂಕು ಅಧ್ಯಕ್ಷ ವಿರೂಪಾಕ್ಷಣ್ಣ ಮಾಮನಿಯವರು ಸಿ.ಟಿ.ರವಿ ಅವರನ್ನು ಸತ್ಕರಿಸಿದರು. ಶಾಸಕ ಮಹೇಶ ಟೆಂಗಿನಕಾಯಿ, ರತ್ನಾ ಆನಂದ ಮಾಮನಿ, ಸಂಜಯ ಪಾಟೀಲ, ಸುಭಾಷ ಪಾಟೀಲ, ಎಫ್.ಎಸ್.ಸಿದ್ದನಗೌಡರ, ಕುಮಾರಸ್ವಾಮಿ ತಲ್ಲೂರಮಠ, ನಯನಾ ಭಸ್ಮೆ, ಜಗದೀಶ ಕೌಜಗೇರಿ, ಜಿ.ಎಸ್.ಗಂಗಲ, ಈರಣ್ಣ ಚಂದರಗಿ, ಸಿದ್ದಯ್ಯ ವಡಿಯರ, ಪುಂಡಲೀಕ ಮೇಟಿ, ಭರಮಪ್ಪ ಅಣ್ಣಿಗೇರಿ, ರಾಜು ಲಮಾಣಿ, ಬಾಬು ಕಾಳೆ, ಅರ್ಜುನ ಅಮ್ಮೋಜಿ, ಗೌಡಪ್ಪ ಸವದತ್ತಿ, ಮಲ್ಲೇಶ ಸೂಳೆಭಾವಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಸ್ವಾರ್ಥಕ್ಕಾಗಿ ಕಚ್ಚಾಡಿದರೆ ಪಕ್ಷಕ್ಕೆ ಉಳಿಗಾಲ ಇಲ್ಲ: ಜನಹಿತ ಮರೆತು ವೈಯಕ್ತಿಕ ಸ್ವಾರ್ಥಕ್ಕೆ ಕಚ್ಚಾಡಿದರೆ ನಮಗೂ ಉಳಿಗಾಲ ಇಲ್ಲ. ನಮ್ಮ ಪಕ್ಷಕ್ಕೂ ಉಳಿಗಾಲವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ ಕುರಿತು ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಹೊರತು ಬಹಿರಂಗವಾಗಿ ಮಾತನಾಡುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಕುರಿತು ಬೇರೆಯವರು ಮಾತನಾಡುವುದು ಬೇರೆ. ನಾನು ಮಾತನಾಡಲು ಆಗುವುದಿಲ್ಲ. ಅಮಿತ್‌ ಶಾ ಅವರು ಪೇಜಾವರ ಶ್ರೀಗಳ ಸ್ಮಾರಕ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದರು. 

ಹಿಂದೂಗಳ ನಂಬಿಕೆಗಳಿಗೆ ಘಾಸಿ ಮಾಡುವುದೇ ಕಾಂಗ್ರೆಸ್ ಉದ್ದೇಶ: ಸಿ.ಟಿ.ರವಿ

ಆ ಕಾರ್ಯಕ್ರಮಕ್ಕೂ ಮುನ್ನ ಅಮಿತ್‌ ಶಾ ಸ್ವಾಗತಕ್ಕೆ ನಾನು ಏರ್‌ಪೋರ್ಟ್‌ಗೆ ಹೋಗಿದ್ದೆ. ಮುಂದೆ ಏನಾಯಿತು ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಅಮಿತ್‌ ಶಾ ಅವರಿಗೆ ಪತ್ರದ ಮೂಲಕ ದೂರು ನೀಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಅದರ ಬಗ್ಗೆ ಏನೂ ಮಾಹಿತಿ ಇಲ್ಲ. ನಾವೆಲ್ಲರೂ ಪಕ್ಷದ ಕಾರ್ಯಕರ್ತರೇ. ಏನೇ ಚರ್ಚೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ. ಭಿನ್ನಮತಕ್ಕೆ ಬ್ರೇಕ್‌ ಹಾಕದಷ್ಟು ನಮ್ಮ ಹೈಕಮಾಂಡ್‌ ವೀಕ್‌ ಏನೂ ಇಲ್ಲ. ಯಾವುದೇ ‌ರೋಗಿಗೆ ಬಿಪಿ, ಶುಗರ್ ಇದ್ದಾಗ ಶಸ್ತ್ರಚಿಕಿತ್ಸೆ ಮಾಡಬಾರದು. ಅದು‌ ನಿಯಂತ್ರಣಕ್ಕೆ ಬಂದಾಗಲೇ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!