ವರುಣ ನನ್ನ ಹುಟ್ಟೂರು ಭಾಗದ ಕ್ಷೇತ್ರ. ನನ್ನ ಕೊನೆಯ ಚುನಾವಣೆ ಹುಟ್ಟೂರಿನಲ್ಲಿಯೇ ಆಗಬೇಕು ಎಂಬುದು ನನ್ನ ಆಸೆ. ಯಾವ ಕ್ಷೇತ್ರವೂ ಅದೃಷ್ಟ ಅಂತ ಇಲ್ಲ. ಆದರೆ, ಈ ಕ್ಷೇತ್ರದಿಂದ ನಾನು ಗೆದ್ದಾಗಲೇ ಮುಖ್ಯಮಂತ್ರಿ ಆಗಿದ್ದು ಎಂದ ಸಿದ್ದರಾಮಯ್ಯ
ಮೈಸೂರು(ಮಾ.29): ‘ಕೋಲಾರದಿಂದಲೂ ಸ್ಪರ್ಧಿಸುವಂತೆ ತೀವ್ರ ಒತ್ತಡ ಬರುತ್ತಿದೆ. ಹೀಗಾಗಿ, ವರುಣ ಕ್ಷೇತ್ರದ ಜತೆ ಕೋಲಾರದಿಂದಲೂ ಸ್ಪರ್ಧಿಸಲು ಅವಕಾಶ ಕೇಳಿದ್ದೇನೆ. ಈ ಸಂಬಂಧ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆ ಮೂಲಕ ಈ ಬಾರಿಯೂ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಕುರಿತು ಸುಳಿವು ನೀಡಿದ್ದಾರೆ.
ಎಚ್.ಡಿ.ಕೋಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ವರುಣ ನನ್ನ ಹುಟ್ಟೂರು ಭಾಗದ ಕ್ಷೇತ್ರ. ನನ್ನ ಕೊನೆಯ ಚುನಾವಣೆ ಹುಟ್ಟೂರಿನಲ್ಲಿಯೇ ಆಗಬೇಕು ಎಂಬುದು ನನ್ನ ಆಸೆ. ಯಾವ ಕ್ಷೇತ್ರವೂ ಅದೃಷ್ಟ ಅಂತ ಇಲ್ಲ. ಆದರೆ, ಈ ಕ್ಷೇತ್ರದಿಂದ ನಾನು ಗೆದ್ದಾಗಲೇ ಮುಖ್ಯಮಂತ್ರಿ ಆಗಿದ್ದು’ ಎಂದರು.
undefined
ಕಾಂಗ್ರೆಸ್ ಹೈಕಮಾಂಡ್ ಜೊತೆ ಯಾರೂ ಮಾತನಾಡಿಲ್ಲ: ಎಚ್‌ಡಿಕೆಗೆ ಸಿದ್ದರಾಮಯ್ಯ ತಿರುಗೇಟು
ಕೋಲಾರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, ‘ಕೋಲಾರ ಕ್ಷೇತ್ರದ ಜನರಿಂದ ಸ್ಪರ್ಧೆಗೆ ಹೆಚ್ಚು ಒತ್ತಡ ಬರುತ್ತಿದೆ. ಹೀಗಾಗಿ, ಈ ಬಾರಿ ಎರಡು ಕ್ಷೇತ್ರದಿಂದ ನಾನು ಸ್ಪರ್ಧಿಸಲು ನಿರ್ಧಾರ ಮಾಡಿದ್ದೇನೆ. ಕೋಲಾರದಿಂದಲೂ ಟಿಕೆಟ್ ನೀಡುವಂತೆ ಕೇಳಿದ್ದೇನೆ. ಹೈಕಮಾಂಡ್‌ನವರು ಏನು ಹೇಳುತ್ತಾರೆ ಎಂದು ಕಾದು ನೋಡುತ್ತೇನೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದು ಸ್ಪಷ್ಟಪಡಿಸಿದರು.